ಬೆಂಗಳೂರು, (www.thenewzmirror.com) ;
ರಾಜ್ಯದಲ್ಲಿ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್(HSRP) ನಂಬರ್ ಪ್ಲೇಟ್ ಅಳವಡಿಸದ ವಾಹನಗಳಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದ್ದು, ಜೂನ್ 12ರ ವರೆಗೆ ದಂಡ ವಿಧಿಸುವುದಿಲ್ಲ ಎಂದು ಹೈಕೋರ್ಟ್ ಗೆ ರಾಜ್ಯ ಮಾಹಿತಿ ನೀಡಿದೆ.
ರಾಜ್ಯದಲ್ಲಿ 2019 ರ ಏಪ್ರಿಲದ ಗೂ ಮೊದಲು ನೋಂದಣಿ ಆಗಿದ್ದ ಎಲ್ಲ ಹಳೆಯ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ ಅಂದರೆ High Security Registration Number Plate- HSRP ಕಡ್ಡಾಯವಾಗಿ ಅಳವಡಿಸಬೇಕೆಂದು ರಾಜ್ಯ ಸಾರಿಗೆ ಇಲಾಖೆ ಆದೇಶ ನೀಡಿತ್ತು. ಇದಕ್ಕಾಗಿ ಮೇ 31ರ ವರೆಗೂ ಗಡುವು ನೀಡಿತ್ತು. ಗಡುವು ಮುಗಿದ ಬಳಿಕ ಅಂದರೆ ಜೂನ್ 1 ರಿಂದ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸದವರ ವಿರುದ್ಧ ದಂಡ ವಿಧಿಸಲಾಗುತ್ತೆ ಎಂದು ತಿಳಿಸಿತ್ತು. ಆದರೀಗ ಜೂನ್ 12 ರವರೆಗೆ ಯಾವುದೇ ಕ್ರಮವಿಲ್ಲ ಎಂದು ಹೈ ಕೋರ್ಟ್ ಗೆ ರಾಜ್ಯ ಮಾಹಿತಿ ನೀಡಿದ್ದು, ಪ್ಲೇಟ್ ಅಳವಡಿಸಿಕೊಳ್ಳೋಕೆ ಮತ್ತೆ 12 ದಿನಗಳ ಕಾಲಾವಕಾಶ ನೀಡಿದೆ.
HSRP ನಂಬರ್ ಪ್ಲೇಟ್ ಅಳವಡಿಕೆಗೆ ಇರುವ ಮೇ 31ರ ಗಡುವು ವಿಸ್ತರಣೆ ಕೋರಿ BND ಎನರ್ಜಿ ಲಿಮಿಟೆಡ್ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿತ್ತು.
ಸಾರಿಗೆ ಇಲಾಖೆ ಮೊದಲು HSRP ನಂಬರ್ ಪ್ಲೇಟ್ ಅಳವಡಿಕೆ ಮಾಡಲು 2023ರ ನವೆಂಬರ್ 17ರ ಗಡುವು ಕೊಟ್ಟಿತ್ತು. ಬಳಿಕ ಅದನ್ನು 2024ರ ಫೆಬ್ರವರಿ 17ರ ತನಕ ವಿಸ್ತರಣೆ ಮಾಡಿತ್ತು. ಅದಾದ ನಂತರ ಮೂರನೇ ಬಾರಿ ಅದನ್ನು ಮೇ 31ರ ವರೆಗೆ ವಿಸ್ತರಿಸಲಾಗಿತ್ತು. ಇದೀಗ ನಾಲ್ಕನೇ ಬಾರಿ 12 ದಿನಗಳ ಕಾಲಾವಕಾಶ ಸಿಕ್ಕಂತಾಗಿದೆ.