ಬೆಂಗಳೂರು, (www.thenewzmirror.com) ;
ಇಂದಿರಾ ಕ್ಯಾಂಟೀನ್. ಬಡವರು ಹಸಿವಿನಿಂದ ಇರಬಾರದು ಅನ್ನೋ ಕಾರಣಕ್ಕೆ 5 ರೂಗೆ ತಿಂಡಿ ಹಾಗೂ 10 ರೂ ಗೆ ಊಟ ನೀಡುವ ಯೋಜನೆಯನ್ನ ಸಿದ್ದರಾಮಯ್ಯ ಜಾರಿಗೆ ತಂದಿದ್ದರು.
ಯೋಜನೆ ಜಾರಿಯಾಗಿ 10 ವರ್ಷ ದಾಟಿದೆ. ಇಂದಿರಾ ಕ್ಯಾಂಟೀನ್ ಓಪನ್ ಮಾಡಿದಾಗ ಇದ್ದ ಮೆನು ಇಂದಿಗೂ ಮುಂದುವರೆದುಕೊಂಡು ಬರುತ್ತಿತ್ತು. ಇದೀಗ ಅದನ್ನ ಬದಲಾವಣೆ ಮಾಡುವಂತೆ ಸಾರ್ವಜನಿಕರಿಂದ ಮನವಿ ಕೇಳಿ ಬಂದಿತ್ತು. ಅದರಂತೆ ಇದೀಗ ಮೆನು ಬದಲಾವಣೆಗೆ ಸರ್ಕಾರ ನಿರ್ಧಾರ ಮಾಡಿದೆ.
ಅಷ್ಟೇ ಅಲ್ದೆ ಮೆನು ಬದಲಾವಣೆಗೆ ಇನ್ನೊಂದು ಕಾರಣ ಅಂದ್ರೆ ಟೆಂಡರ್ ಪ್ರಕ್ರಿಯೆಯಲ್ಲಿ ಗೋಲ್ಮಾಲ್ ಆಗಿದೆ ಅನ್ನೋ ಆರೋಪಾನೂ ಕೇಳಿ ಬಂದಿತ್ತು. ಹೀಗಾಗಿ ಸಿಎಂ ಸಿದ್ದರಾಮಯ್ಯ ಅವರ ಕನಸಿನ ಕೂಸು ಇಂದಿರಾ ಕ್ಯಾಂಟೀನ್ ಗಳ ಮೆನು ಬದಲಾವಣೆಗೆ ಮುಂದಾಗಿದ್ದು ಮೊದಲ ಹಂತದಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಇದು ಜಾರಿಗೆ ಬರಲಿದೆ.
ಹೊಸ ಗುತ್ತಿಗೆದಾರರಿಗೆ ಬಿಬಿಎಂಪಿ ವ್ಯಾಪ್ತಿಯ 192 ಇಂದಿರಾ ಕ್ಯಾಂಟೀನ್‌ಗಳ ಪೈಕಿ 142 ಕ್ಯಾಂಟೀನ್‌ಗಳಿಗೆ ಆಹಾರ ಪೂರೈಕೆ ಜವಾಬ್ಧಾರಿ ನೀಡಲಾಗಿದೆ. ಇನ್ನೊಂದು ವಾರದಲ್ಲಿ ಕಾರ್ಯಾದೇಶ ನೀಡಲಿದ್ದು, ಆಗಸ್ಟ್ ಎರಡನೇ ವಾರ ಅಂದ್ರೆ ಆಗಸ್ಟ್ 15 ರಿಂದ ಸ್ವಾತಂತ್ರ ದಿನಾಚರಣೆ ದಿವಸ ಕಾರ್ಯಾರಂಭ ಮಾಡಲಿದೆ.
ಏನಿರಲಿದೆ ಹೊಸ ಮೆನುವಿನಲ್ಲಿ..?
ಇಂದಿರಾ ಕ್ಯಾಂಟೀನ್‌ಗಳ ಮೆನು ಬದಲಾವಣೆ ಮಾಡಲಾಗಿದ್ದು, ಉಪಹಾರಕ್ಕೆ ಮೂರು ಮಾದರಿ ಆಯ್ಕೆ ನೀಡಲಾಗಿದೆ. ವಾರದ ಏಳು ದಿನವೂ ಬೆಳಗ್ಗೆ ಇಡ್ಲಿ ದೊರೆಯಲಿದೆ. 3 ಇಡ್ಲಿ -ಸಾಂಬಾರ್, ಪ್ರತಿದಿನ ಒಂದೊಂದು ಮಾದರಿಯ ರೈಸ್ ಬಾತ್ ಜೊತೆಗೆ ಚಟ್ನಿ, ಸಾಂಬಾರ್, ಖಾರಾ ಬೂಂದಿ, ಬಜ್ಜಿ, ಪಲಾವ್, ಬಿಸಿಬೇಳೆ ಬಾತ್, ಕಾರ ಬಾತ್, ಪೊಂಗಲ್, ಭಾನುವಾರ ಚೌ ಚೌ ಬಾತ್ ಇರಲಿದೆ. ಬ್ರೆಡ್ ಜಾಮ್, ಮಂಗಳೂರು ಬನ್ಸ್ ಜೊತೆಗೆ ಕಾಫಿ, ಟೀ ನೀಡಲಾಗುವುದು. ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಮುದ್ದೆ, ಚಪಾತಿಯನ್ನು ದಿನ ಬಿಟ್ಟು ದಿನ ನೀಡಲಾಗುತ್ತದೆ. ಇದರೊಂದಿಗೆ ಪ್ರತಿದಿನ ಅನ್ನ -ಸಾಂಬಾರ್ ಮುಂದುವರೆಯಲಿದೆ.