ಬೆಂಗಳೂರು, (www.thenewzmirror com) ;
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO) ಯು ತನ್ನ ಇತ್ತೀಚಿನ ಭೂ ವೀಕ್ಷಣಾ ಉಪಗ್ರಹ EOS-08 ಅನ್ನು ಇಂದು ಆಗಸ್ಟ್ 16 ರಂದು ಬೆಳಿಗ್ಗೆ 9:17 ಕ್ಕೆ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಒಎಸ್-08 ಉಪಗ್ರಹವನ್ನು ಹೊತ್ತ ಎಸ್‌ಎಸ್‌ಎಲ್‌ವಿ-ಡಿ3 ರಾಕೆಟ್ ಉಡಾವಣೆ ಮಾಡಲಾಗಿದೆ.
ಇಒಎಸ್-08 ಉಪಗ್ರಹವನ್ನು ಪರಿಸರ ವೀಕ್ಷಣೆಯನ್ನು ಇನ್ನಷ್ಟು ಸಮರ್ಥಗೊಳಿಸಲು, ಪ್ರಾಕೃತಿಕ ವಿಕೋಪ ನಿರ್ವಹಣೆಗೆ ನೆರವಾಗಲು, ಜ್ವಾಲಾಮುಖಿಗಳ ಮೇಲ್ವಿಚಾರಣೆ ಮತ್ತು ಗಗನಯಾನ ಯೋಜನೆಗೆ ಇದು ಸಹಕಾರಿಯಾಗಲಿದೆ.
ಸುಮಾರು 34 ಮೀಟರ್ ಎತ್ತರವಿರುವ ಅತ್ಯಂತ ಚಿಕ್ಕ SSLV ರಾಕೆಟ್ ಇದಾಗಿದೆ. ಈ ರಾಕೇಟ್ ಅನ್ನ ಆಗಸ್ಟ್ 15ರಂದು ಬೆಳಗ್ಗೆ 9.17ಕ್ಕೆ ಉಡಾವಣೆ ಮಾಡಲು ಯೋಜಿಸಲಾಗಿತ್ತು. ಆದರೆ, ನಂತರ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿರುವ ಮೊದಲ ಉಡಾವಣಾ ಪ್ಯಾಡ್‌ನಿಂದ ಆಗಸ್ಟ್ 16ರಂದು ಬೆಳಗ್ಗೆ 9.17ಕ್ಕೆ ಉಡಾವಣೆ ಮಾಡಲು ತೀರ್ಮಾನಿಸಲಾಗಿತ್ತು. ಅದರಂತೆ ಇಂದು ಉಡಾವಣೆ ಮಾಡಲಾಗಿದೆ.
ಈ ಉಪಗ್ರಹ ಇಲೆಕ್ಟ್ರೋ ಆಪ್ಟಿಕಲ್ ಇನ್‌ಫ್ರಾರೆಡ್ ಪೇಲೋಡ್ (ಇಒಐಆರ್), ಗ್ಲೋಬಲ್ ನ್ಯಾವಿಗೇಶನ್ ಸ್ಯಾಟಲೈಟ್ ಸಿಸ್ಟಮ್ – ರಿಫ್ಲೆಕ್ಟೋಮೆಟ್ರಿ (ಜಿಎನ್ಎಸ್ಎಸ್-ಆರ್) ಪೇಲೋಡ್ ಮತ್ತು ಎಸ್ಐಸಿ ಯುವಿ ಡಾಸಿಮೀಟರ್ ಎನ್ನುವ ಮೂರು ಪೇಲೋಡ್‌ಗಳನ್ನು ಒಯ್ಯುಯ್ದಿದೆ.
2047ರ ವೇಳೆಗೆ ಭಾರತ ರಾಕೆಟ್ ಉಡಾವಣೆಯಲ್ಲಿ ಅತ್ಯಾಧುನಿಕ ರಾಷ್ಟ್ರವಾಗಬೇಕು ಎನ್ನುವ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯತ್ತ ಇಡುತ್ತಿರುವ ಹೆಜ್ಜೆ ಇದಾಗಿದೆ.