ಬೆಂಗಳೂರು, ( www.thenewzmirror.com) ;
ರಾಜ್ಯ ವಿಧಾನಸಭೆ ಚುನಾವಣೆ ಮತ ಎಣಿಕೆ ಆರಂಭವಾಗಿದ್ದು, ಕ್ಷಣಕ್ಷಣಕ್ಕೂ ಕುತೂಹಲ ಹೆಚ್ಚಾಗುತ್ತಿದೆ.
ಇದರ ನಡುವೆ ಎರಡು ತಿಂಗಳ ಹಿಂದೆ ಕೋಡಿ ಮಠದ ಸ್ವಾಮೀಜಿ ಹೇಳಿದ್ದ ಭವಿಷ್ಯ ನಿಜವಾಗುವ ಕಾಲ ಸನ್ನಿಹಿತವಾಗಿದೆ.
ಜನವರಿ ತಿಂಗಳಲ್ಲಿ ಕೋಡಿಮಠ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ರಾಜ್ಯದ ರಾಜಕೀಯ ಭವಿಷ್ಯದ ಬಗ್ಗೆ ಹೇಳಿಕೆಯೊಂದನ್ನ ನೀಡಿದ್ದರು. ಕರ್ನಾಟಕ ರಾಜ್ಯದ ಫಲಿತಾಂಶ ಗಮನಿಸುತ್ತಾ ಹೋದರೆ ಅದು ನಿಜವಾಗುತ್ತಿದೆ ಎನ್ನುವುದು ಮತ್ತೊಮೆ ಸಾಬೀತಾಗಿದೆ.
ಕೋಡಿಮಠ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ನುಡಿದ ಭವಿಷ್ಯದ ಪ್ರಕಾರ “ರಾಜ್ಯದಲ್ಲಿ ಒಂದು ಪಕ್ಷ ಮಾತ್ರ ಅಧಿಕಾರಕ್ಕೆ ಬರುತ್ತದೆ. ಸಮ್ಮಿಶ್ರ ಸರ್ಕಾರ ಅಧಿಕಾರ ಮಾಡಲ್ಲ ಎಂದು ಭವಿಷ್ಯ ನುಡಿದಿದ್ದರು. ಜತೆಗೆ, ಎರಡ್ಮೂರು ದೊಡ್ಡ ದೊಡ್ಡ ತಲೆಗಳು ಉರುಳುತ್ತವೆ” ಎಂದೂ ನುಡಿದಿದ್ದರು.
ಹಾಗೆನೇ ಫೆಬ್ರವರಿಯಲ್ಲಿ ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಇದೆ. ಚುನಾವಣೆ ತನಕ ಪಕ್ಷಾಂತರಗಳು ಇರುತ್ತವೆ. ಪಕ್ಷಗಳು ಕೂಡಿ ಹೋಗುವುದು ಕಷ್ಟ. ಚುನಾವಣೆವರೆಗೂ ಏನು ಹೇಳೋದಕ್ಕೆ ಆಗೋಲ್ಲ. ಎಲ್ಲ ಡಿವೈಡ್ ಆಗುವ ಲಕ್ಷಣ ಇದೆ. ಆದರೂ ಒಂದು ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಕೋಡಿಮಠ ಶ್ರೀ ಹೇಳಿದ್ದರು.
ಕರ್ನಾಟಕ ರಾಜ್ಯದ ಫಲಿತಾಂಶ ಗಮನಿಸಿದರೆ ಕೋಡಿ ಮಠ ಸ್ವಾಮೀಜಿಯ ಭವಿಷ್ಯ ಮತ್ತೆ ನಿಜವಾದಂತೆ ಆಗಿದೆ.