KSRTC NEWS | ಬಸ್ಸಿನಿಂದ ಆಕಸ್ಮಿಕವಾಗಿ ಬಿದ್ದರೆ ಚಾಲಕರಿಗೆ ಶಿಕ್ಷೆಯಂತೆ ; ಪೂರ್ವಾಪರತೆ ಇಲ್ದೆ ಶಿಕ್ಷೆ ನೀಡೋದು ಇದ್ಯಾವ ಸೀಮೆ ನ್ಯಾಯ ಸ್ವಾಮಿ..?, RTO ಇಲಾಖೆ ನಿರ್ಲಕ್ಷ್ಯಕ್ಕೆ ಅವರಿಗ್ಯಾಕೆ ಕಷ್ಟ..?

ಬೆಂಗಳೂರು, (www.thenewzmirror.com) :

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ಕಳೆದ ಹಲವು ವರ್ಷಗಳಿಂದ ಅಲಿಖಿತ ನಿಯವೊಂದು ಜಾರಿಯಲ್ಲಿದೆ. ಈ ಅಲಿಖಿತ ನಿಯಮದಿಂದ ಬಸ್ ನ ಚಾಲಕರು ಹೈರಾಣಾಗಿದ್ದಾರೆ. ತಮ್ಮಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸಿ ಅನುಭವಿಸಿ ಬೇಸತ್ತು ಹೋಗಿದ್ದಾರೆ. ಒಂದ್ಕಡೆ ಸರ್ಕಾರಿ ಕೆಲಸ ಅಂತ ಖುಷಿ ಪಡಬೇಕೋ ಇಲ್ಲ ತಪ್ಪು ಮಾಡಿಲ್ಲದಿದ್ರೂ ಶಿಕ್ಷೆ ಅನುಭವಿಸುತ್ತಿರೋದಕ್ಕೆ ನೋವು ಪಡಬೇಕೋ ಎಂಬ ಗೊಂದಲದಲ್ಲೇ ಕಾಲ ಕಳೆಯುತ್ತಿದ್ದಾರೆ.

RELATED POSTS

ಇತ್ತೀಚೆಗೆ ಕೆಎಸ್ಸಾರ್ಟಿಸಿ ಚಾಮರಾಜನಗರ ವಿಭಾಗದ ನಿರ್ವಾಹಕರೊಬ್ಬರು ಟಿಕೆಟ್ ಕೊಡುತ್ತಿರುವಾಗಲೇ ಚಲಿಸುತ್ತಿರುತ್ತಿರುವ ಆಯತಪ್ಪಿ ಕೆಳಗೆ ಬಿದ್ದಿದ್ದರು. ತಕ್ಷಣಕ್ಕೆ ಚಿಕಿತ್ಸೆ ಕೊಡಿದ್ರೂ ಅತೀವ ರಕ್ತಸ್ರಾವದಿಂದ ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ ಆ ಬಸ್ ನ ಚಾಲಕನದ್ದು ಯಾವುದೇ ತಪ್ಪಿಲ್ಲದಿದ್ರೂ ಚಾಲಕ ನಿರ್ಲಕ್ಷ್ಯ ಎಂದು ಚಾಲಕನ ಮೇಲೆ ಶಿಸ್ತು ಕ್ರಮವನ್ನ ಹಿರಿಯ ಅಧಿಕಾರಿಗಳು ಕೈಗೊಂಡಿದ್ದರು. ಇದೊಂದು ಪ್ರಕರಣ ಮಾತ್ರವಲ್ಲ ಶಕ್ತಿ ಯೋಜನೆ ಜಾರಿಯಾದಾಗಿನಿಂದ ಅಲ್ಲಿಲ್ಲೊಂದು ಈ ರೀತಿಯ ಪ್ರಕರಣ ನಡೆಗಳು ನಡೆಯುತ್ತಿದ್ರೂ ಅದಕ್ಕೆ ಚಾಲಕನಿಗೆ ಶಿಕ್ಷೆ ನೀಡಲಾಗುತ್ತಿದೆ. ಇದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗುತ್ತಿದೆ.
ಕೇವಲ ಶಕ್ತಿ ಯೋಜನೆ ಮಾತ್ರವಲ್ಲ ಕಳೆದ ಹಲವು ವರ್ಷಗಳಿಂದ ಸಾರಿಗೆ ನಿಗಮದಲ್ಲಿ ಇರುವ ನಿಯಮವೂ ಕೂಡ ಇಂಥ ಘಟನೆಗಳು ಪದೆ ಪದೇ ನಡೆಯುವುದಕ್ಕೆ ಕಾರಣ ಅಂತ ಹೇಳ್ತಿದ್ದಾರೆ ಕಳೆದ 20 ವರ್ಷಗಳಿಂದ ಕೆಎಸ್ಸಾರ್ಟಿಸಿಯಲ್ಲಿ ಚಾಲಕನಾಗಿ ಕಾರ್ಯನಿರ್ವಹಣೆ ಮಾಡುತ್ತಿರುವ ಹೆಸರು ಹೇಳಲು ಇಚ್ಚಿಸದ ಚಾಲಕರೊಬ್ಬರು ಅಭಿಪ್ರಾಯ ಪಡುತ್ತಿದ್ದಾರೆ.

ಸಾರಿಗೆ ನಿಗಮಗಳಲ್ಲಿ ಓಬಿರಾಯನ ಕಾಲದ ನಿಯಮವೊಂದು ಇನ್ನೂ ಜಾರಿಯಲ್ಲಿದೆ. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ನಿಗಧಿತ ಸಮಯದೊಳಗೆ ರೀಚ್ ಆಗಬೇಕು ಎನ್ನುವುದು. ಒಂದು ವೇಳೆ ಆ ಸಮಯವನ್ನ ಏನಾದ್ರೂ ಮೀರಿದ್ರೆ ಚಾಲಕರಿಗೆ ನೊಟೀಸ್ ನೀಡುವ ಕೆಲ್ಸ ಮಾಡುತ್ತಿರುವ ಎಸಿ ರೂಮಿನಲ್ಲಿ ಕುಳಿತಿರುವ ಅಧಿಕಾರಿಗಳಗೆ ವಾಸ್ತವದಲ್ಲಿ ಚಾಲಕರ ಕಷ್ಟ ಮಾತ್ರ ತಿಳಿಯುತ್ತಲೇ ಇಲ್ಲ. ನಿಗಧಿತ ಸಮಯಕ್ಕೆ ಬಸ್ ರೀಚ್ ಆಗದಿದ್ರೂ ನೊಟೀಸ್, ಯಾರಾದ್ರೂ ಬಸ್ ಗೆ ಹಾನಿ ಮಾಡಿದ್ರೂ ನೊಟೀಸ್, ಯಾರದ್ದೋ ನಿರ್ಲಕ್ಷ್ಯಕ್ಕೆ ಬಸ್ ನಿಂದ ಬಿದ್ದು ಏನಾದರೂ ಅನಾಹುತವಾದ್ರೂ ಅದಕ್ಕೂ ಚಾಲಕರನ್ನೇ ಹೊಣೆಗಾರನ್ನಾಗಿ ಮಾಡುವ ಅಧಿಕಾರಿಗಳ ದಬ್ಬಾಳಿಕೆಗೆ ಬ್ರೇಕ್ ಬೀಳೋದು ಯಾವಾಗ ಅಂತ ಶ್ರಮಿಕ ವರ್ಗ ಕೇಳುತ್ತಿದೆ.

ಅದರಲ್ಲೂ ಶಕ್ತಿ ಯೋಜನೆ ಜಾರಿ ಆದಮೇಲೆ ಬೆಂಗಳೂರು ಹೊರತು ಪಡಿಸಿ ಉಳಿದ ನಗರ, ಹಳ್ಳಿ ಪ್ರದೇಶಗಳಲ್ಲಿ ಸಂಚಾರ ಮಾಡುವ ಸಾರಿಗೆ ಬ ಸ್ ಗಳಲ್ಲಿ ನಿರೀಕ್ಷೆಗೂ ಮೀರಿ ಪ್ರಯಾಣಿಕರು ಬಸ್ ಹತ್ತುತ್ತಿದ್ದಾರೆ. ಅದು ಎಷ್ಟರ ಮಟ್ಟಿಗೆ ಅಂದರೆ ಬಸ್ ನ ಬಾಗಿಲು ಕೂಡ ಮುಚ್ಚಲು ಸಾಧ್ಯವಾಗದ ಮಟ್ಟಿಗೆ. ಬಸ್ ಹತ್ತಿಸಿಕೊಳ್ಳಲಿಲ್ಲ ಅಂದ್ರೆ ಪ್ರಯಾಣಿಕರ ವಿರೋಧ ಕಟ್ಟಿಕೊಳ್ಳಬೇಕು. ಒಂದು ವೇಳೆ ಕಾಲಿಡಲು ಬಸ್ಸಿನಲ್ಲಿ ಜಾಗ ಇಲ್ಲದಷ್ಟು ಹತ್ತಿಸಿಕೊಂಡರೆ ಟಿಕೆಟ್ ನೀಡುವುದು ಕಷ್ಟ ಸಾಧ್ಯ. ಇಂಥ ಸಂದರ್ಭದಲ್ಲಿ ನಿರ್ವಾಹಕನ ಪಾಡು ಮಾತ್ರ ಹೇಳತೀರದು. ಯಾಕಂದ್ರೆ ನಿರ್ದಿಷ್ಟ ಸಮಯದಲ್ಲೇ ಟಿಕೆಟ್ ನೀಡಬೇಕು. ಬಸ್ ರಷ್ ಇದೆ ಎಂದು ಒಂದ್ಕಡೆ ನಿಲ್ಲಿಸಿಕೊಂಡು ಟಿಕೆಟ್ ನೀಡೋಕೆ ಹೋದರೆ ಪ್ರಯಾಣಿಕರು ವಿರೋಧ ವ್ಯಕ್ತಪಡಿಸ್ತಾರೆ. ಬೇಗ ಬೇಗ ಟಿಕೆಟ್ ಕೊಡೋಣ ಅಂದ್ರೆ ರಷ್ ಇರುವ ಬಸ್ ನಲ್ಲಿ ಅದು ಸಾಧ್ಯವಾಗುವುದಿಲ್ಲ.., ಇಂಥ ಕಷ್ಟದ ಸ್ಥಿತಿಯಲ್ಲೇ ನಿರ್ವಾಹಕ ಟಿಕೆಟ್ ನೀಡಲೇಬೇಕು. ಹೀಗಿರುವಾಗ ಏನಾದರು ಒಂದು ಅನಾಹುತ ಸಂಭವಿಸಿದರೆ ಅದಕ್ಕೆ ಚಾಲಕನೇ ನೇರ ಹೊಣೆ ಅಂತೆ.

ಟೈರ್ ಟು ಸಿಟಿ ಅಂತ ಕರೆಸಿಕೊಳ್ಳುವ ನಗರಗಳಲ್ಲಿ ಇಂಥ ಘಟನೆಗಳು ಆಗಾಗ ಸಂಭವಿಸುತ್ತಲೇ ಇರುತ್ತವೆ. ಶಕ್ತಿ ಯೋಜನೆ ಕುರಿತಂತೆ ರೂಟ್ ನಲ್ಲಿ ಆಗುತ್ತಿರುವ ಸಮಸ್ಯೆ ಬಗ್ಗೆ ಡಿಪೋ ಅಧಿಕಾರಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಪೀಕ್ ಅವರ್ ನಲ್ಲಿ ಬಸ್ ಗಳು ರಷ್ ಆಗುತ್ತಿದ್ದರೂ ಹೆಚ್ಚು ಹೆಚ್ಚು ಬಸ್ ಗಳು ಬಿಡುವ ಗೋಜಿಗೆ ಡಿಪೋ ಅಧಿಕಾರಿಗಳು ಮಾತ್ರ ಮುಂದಾಗುವುದಿಲ್ಲ.

ಇನ್ನೊಂದು ದುರಂತ ಅಂದರೆ ಸಾರಿಗೆ ಬಸ್ ಗಳಲ್ಲಿ ಇರುವ ಬಸ್ ಗಳಲ್ಲಿ ಇರುವ ಬಸ್ ಗಳಲ್ಲಿ ಇರುವ ಬಾಗಿಲು(ಡೋರ್) ಗಳು ಉತ್ತಮವಾಗಿಲ್ಲ. ಈ ಡೋರ್ ನಂಬಿಕೊಂಡು ಯಾರಾದರು ನಿಂತರೆ ಅವರನ್ನ ದೇವರೇ ಕಾಪಾಡಬೇಕು. ಅವ್ಯವಸ್ತೆಯಲ್ಲಿರುವ ಬಸ್ ನ ಬಾಗಿಲುಗಳನ್ನ ಸರಿ ಪಡಿಸಿ ಅಂತ ನಿರ್ವಾಹಕರು ಹಾಗೂ ಚಾಲಕರು ಎಷ್ಟೇ ಮನವಿ ಮಾಡಿದರೂ ಯಾವುದೇ ಪ್ರಯೋಜವಾಗಿಲ್ಲ ಅಂತಾರೆ ಚಾಲಕ್ರು, ನಿರ್ವಾಹಕರು.

ಬಸ್ ಗಳು ರಷ್ ಇದ್ದ ಸಂದರ್ಭದಲ್ಲಷ್ಟೇ ಅಲ್ಲ ಬೇರೆ ಸಮಯದಲ್ಲೂ ಒಂದು ಕಡೆಯಿಂದ ಫೈನಲ್ ಡೆಸ್ಟಿನೇಷನ್ ಗೆ ಇಂತಿಷ್ಟೇ ಸಮಯದಲ್ಲಿ ತಲುಪಬೇಕು. ಇದು ಬಹಳ ಹಿಂದೆನೆ ಮಾಡಿರುವ ಅಲಿಖಿತ ನಿಯಮ. ಈ ನಿಯಮ ಮೀರಿದರೆ ಚಾಲಕ ಹಾಗೂ ನಿರ್ವಾಹಕರ ವಿರುದ್ಧ ಕ್ರಮ ಕೈಗೊಳ್ಳುವುದು ನಡೆದುಕೊಂಡು ಬರುತ್ತಿರುವ ಪದ್ದತಿ..! ಬಸ್ ನಲ್ಲಿ ಕಡಿಮೆ ಪ್ರಯಾಣಿಕರಿದ್ದರೆ ನಿರ್ವಾಹಕರಿಗೆ ಟಿಕೆಟ್ ನೀಡೋಕೆ ಯಾವುದೆ ತೊಂದರೆ ಆಗುವುದಿಲ್ಲ. ಒಂದು ವೇಳೆ ರಷ್ ಇದ್ದರೆ ಬಸ್ ನಿಲ್ಲಿಸುವ ಹಾಗೂ ಇಲ್ಲ ಅತ್ತ ಮುಂದಿನ ಸ್ಟೇಜ್ ಬರುವ ಒಳಗೆ ಟಿಕೆಟ್ ನೀಡೋಕೂ ಸಾಧ್ಯವಾಗೋದಿಲ್ಲ. ಒಂದು ವೇಳೆ ಬಸ್ ನಿಲ್ಲಿಸಿ ಟಿಕೆಟ್ ಕೊಡೋಕೆ ಮುಂದಾದ್ರೆ ಬಸ್ ನಲ್ಲಿ ಇರುವ ಪ್ರಯಾಣಿಕರು ಕಿರಿ ಕಿರಿ ಮಾಡ್ತಾರೆ. ಯಾಕಂದ್ರೆ ಅವರಿಗೆ ಲೇಟಾಗುತ್ತೆ ಅಂತ ವಿರೋಧ ಮಾಡ್ತಾರೆ. ಇನ್ನು ಬಸ್ ಚಲಿಸುತ್ತಿರುವಾಗ್ಲೇ ಟಿಕೆಟ್ ಕೊಡೋಣ ಅಂದ್ರೆ ಏನಾದ್ರೂ ಅನಾಹುತ ಆದ್ರೆ ಅದಕ್ಕೆ ಚಾಲಕರೇ ನೇರ ಹೊಣೆ ಅಂತೆ.

ಟಿಕೆಟ್ ನೀಡುವಾಗ ಪ್ರಾಣ ಕಳೆದುಕೊಂಡ ನಿರ್ವಾಹಕ


ಇಂಥ ಕಷ್ಟದ ಸ್ಥಿತಿಯಲ್ಲಿ ಚಾಲಕರು ಬಸ್ ಓಡಿಸೋ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಡಿಪೋ ಮ್ಯಾನೇಜರ್ ಗಳಿಗೆ ಇಂಥ ಕಷ್ಟಗಳನ್ನ ಹೇಳಿದರೆ ಯಾವುದೇ ಪ್ರಯೋಜನವಾಗುವುದಿಲ್ಲ. ಯಾಕಂದ್ರೆ ಮೂಲಗಳ ಪ್ರಕಾರ ಡಿಪೀ ಮ್ಯಾನೇಜರ್ ಗಳು ಖಾಸಗಿ ಬಸ್ ಗಳ ಜತೆ ಹೊಂದಾಣಿಕೆ ಮಾಡಿಕೊಂಡು ಅವರಿಗೆ ಅನುಕೂಲ ಮಾಡಿಕೊಡುವ ಕೆಲಸವನ್ನ ಮಾಡುತ್ತಿದ್ದಾರಂತೆ. ಹೀಗಾಗಿ ಸಾರಿಗೆ ಸಂಸ್ಥೆಗೆ ಬರಬೇಕಾಗಿರುವ ಆದಾಯ ಸದ್ದಿಲ್ಲದೇ ಖಾಸಗಿ ಬಸ್ ಗಳ ಪಾಲಾಗುತ್ತಿದೆಯಂತೆ.

ಇನ್ನು ನಿಯಮದ ಪ್ರಕಾರ ಒಂದು ಬಸ್ ನಲ್ಲಿ ಇಂತಿಷ್ಟೇ ಪ್ರಯಾಣಿಕರನ್ನ ತುಂಬಿಸಬೇಕೆಂಬ ನಿಯಮವಿದೆ. ಇದನ್ನ ಮೀರಿ ಯಾವುದೇ ವಾಹನ ಪ್ರಯಾಣಿಕರನ್ನ ಹತ್ತಿಸಿಕೊಂಡರೆ ಅಂಥ ವಾಹನದ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿರುವುದು ಸಾರಿಗೆ ಇಲಾಖೆ ಕರ್ತವ್ಯ. ಆದರೆ ಸಾರಿಗೆ ಇಲಾಖೆಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೇ ಸುಮ್ಮನೆ ಕುಳಿತಿರೋದು ಅಸಮಧಾನಕ್ಕೆ ಕಾರಣವಾಗಿದೆ.

ಆಯಾ ಸಾರಿಗೆ ಇಲಾಖೆ ಜಂಟಿ ಆಯುಕ್ತರ ವ್ಯಾಪ್ತಿಯಲ್ಲಿ ಇರುವ ಸಾರಿಗೆ (RTO) ಕಚೇರಿಯಲ್ಲಿ ಅಧಿಕಾರಿಗಳನ್ನ ನಿಯೋಜಿಸಿ ಅಗತ್ಯಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನ ಕೊಂಡೊಯ್ಯುವ ಬಸ್ ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಆದರೆ ಜಂಟಿ ಆಯುಕ್ತರು ಮಾತ್ರ ತನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುವಂತೆ ಇರುವುದರ ಹಿಂದಿನ ಮರ್ಮಕ್ಕೆ ಉತ್ತರ ಅವರೇ ಕೊಡಬೇಕಿದೆ.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist