ಬೆಂಗಳೂರು, (www.thenewzmirror.com) :
ದೇಶದಲ್ಲಿ ನಂಬರ್ ಒನ್ ಸಾರಿಗೆ ಸಂಸ್ಥೆ.., ಸಾರಿಗೆ ಕ್ಷೇತ್ರದಲ್ಲಿ ಯಾವುದೇ ಪ್ರಶಸ್ತಿ ಘೋಷಣೆ ಮಾಡಿದರೂ ಪ್ರಶಸ್ತಿಗಳನ್ನ ಬಾಚಿಕೊಳ್ಳುವ ಹಾಗೆನೇ ಐಶರಾಮಿ ಬಸ್ ಗಳ ಮೂಲಕ ಖ್ಯಾತಿಗಳಿಸಿರುವ ಸಂಸ್ಥೆ ಅಂದರೆ ಅದು KSRTC. ಸಾವಿರಾರು ಬಸ್ ಗಳು ಲಕ್ಷಾಂತರ ಪ್ರಯಾಣಿಕರನ್ನ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕೊಂಡೊಯ್ಯುವ ನಿಗಮದಲ್ಲಿ ಮಾನವೀಯತೆ ಅಂದರೆ ಏನು ಎನ್ನುವ ಪ್ರಶ್ನೆ ಉದ್ಬವವಾಗುತ್ತಿದೆ.
ನಿಗಮದಲ್ಲಿ ಲಂಚವತಾರ.., ಅಧಿಕಾರಿಗಳಿಂದ ಶ್ರಮಿಕ ವರ್ಗಕ್ಕೆ ಕಿರುಕುಳ ಇದನ್ನೆಲ್ಲ ಮಾಡುವ ಅಧಿಕಾರಿಗಳ ಹೃದಯದಲ್ಲಿ ಮಾನವೀಯತೆಗೆ ಕಿಂಚಿತ್ತೂ ಜಾಗ ಇಲ್ಲ ಅನ್ನೋದೇ ಬೇಸರದ ಸಂಗತಿ. ಎಷ್ಟೇ ಖ್ಯಾತಿಗಳಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಗಳನ್ನ ಬಾಚಿಕೊಂಡರೂ ಇಂಥ ಕಲ್ಲು ಹೃದಯದ ಅಧಿಕಾರಿಗಳಿಂದ ಅದೆಲ್ಲವೂ ನೀರಿನಲ್ಲಿ ಹೋಮ ಮಾಡಿದಂತಾಗುತ್ತಿದೆ.
ಇತ್ತೀಚೆಗೆ ಎರಡು ಕೆಸ್ಸಾರ್ಟಿಸಿ ಸ್ ಗಳ ನಡುವೆ ಅಫಘಾತವಾಗಿತ್ತು. ಈ ಅಘಫಾತದಲ್ಲಿ ಪ್ರಯಾಣಿಕನೋರ್ವ ಕೈ ಕಳೆದುಕೊಂಡು ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದ. ಸೂಕ್ತ ಸಮಯದಲ್ಲಿ ಚಿಕಿತ್ಸೆ ಕೊಡಿಸದ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಆ ಪ್ರಯಾಣಿಕ ಸಾವನ್ನಪ್ಪಿದ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಚಾಕಲರಿಬ್ಬರನ್ನ ಅಮಾನತ್ತು ಮಾಡಿ ಆದೇಶ ಹೊರಡಿಸಲಾಗಿತ್ತು. ಆದರೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಕೊಡಸಿದ ಅಧಿಕಾರಿಗಳಿಗೆ ಮಾತ್ರ ಯಾವುದೇ ಶಿಕ್ಷೆ ಕೊಟ್ಟಿಲ್ಲ ಬದಲಾಗಿ ರಾಜಮರ್ಯಾದೆ ನೀಡುವ ಕೆಲ್ಸ ಆಗುತ್ತಿದೆ.

2024 ರ ಫೆಬ್ರವರಿ 19 ರಂದು ಶಿವಮೊಗ್ಗ ವಿಭಾಗಕ್ಕೆ ಸೇರಿದ ಎರಡು ಕೆಎಸ್ಸಾರ್ಟಿಸಿ ಬಸ್ ಗಳ ನಡುವೆ ತಿಪಟೂರು ತಾಲ್ಲೂಕಿನ ಕರಡಿ ಎಂಬ ಗ್ರಾಮದಲ್ಲಿ ಡಿಕ್ಕಿಯಾಗಿ ಅಫಘಾತವಾಗಿತ್ತು. ಈ ವೇಳೆ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದ ಓರ್ವ ಪ್ರಯಾಣಿಕನ ಕೈ ತುಂಡಾಗಿ ತೀವ್ರ ರಸ್ತ ಸ್ರಾವದಿಂದ ಬಳಲುತ್ತಿದ್ದರು. ತಕ್ಷಣವೇ ಸ್ಥಳೀಯರ ಸಹಾಯದಿಂದ ಆ ಪ್ರಯಾಣಿಕನಿಗೆ ತಿಪಟೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವ ಕೆಲಸ ಮಾಡಿದ್ದರು.

ಕೈ ತುಂಡಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗೆ ಆ ಪ್ರಯಾಣಿಕನನ್ನ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಯ್ತು. ದುರದೃಷ್ಟಕರ ಸಂಗತಿ ಅಂದರೆ ಮಲೆನಾಡು ಭಾಗದಲ್ಲಿ ಉತ್ತಮ ಚಿಕಿತ್ಸೆ ನೀಡುವ ಮೆಗ್ಗಾನ್ ಆಸ್ಪತ್ರೆಯಲ್ಲೂ ಚಿಕಿತ್ಸೆ ನೀಡಲು ಸಾಧ್ಯವಾಗಲಿಲ್ಲ. ಹೀಗಾಗಿ ಅಲ್ಲಿನ ವೈದ್ಯರ ಸಲಹೆ ಮೇರೆಗೆ ಆ ಪ್ರಯಾಣಿಕನನ್ನ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಲಾಯ್ತು. ಘಟನೆ ನಡೆದಿದ್ದು ಫೆಬ್ರವರಿ 19 ರಂದು ಆದರೆ ಆತನನ್ನ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡುವಷ್ಟರಲ್ಲಿ ನಾಲ್ಕೈದು ದಿನಗಳೇ ಕಳೆದುಹೋಗಿತ್ತು. ಅಫಘಾತದಲ್ಲಿ ಕೈ ಕಳೆದುಕೊಂಡಿದ್ದ ಪ್ರಯಾಣಿಕ ಶಿವಮೊಗ್ಗದಿಂದ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗುವ ಮುನ್ನವೇ ಅಂದರೆ ಮಾರ್ಗ ಮಧ್ಯವೇ ಪ್ರಾಣ ಕಳೆದುಕೊಂಡನು.
ಕಳೆದ ಮೂರ್ನಾಲ್ಕು ದಿನಗಳಲ್ಲಿ ಅತೀವ ರಕ್ತಸ್ರಾವದಿಂದ ಪ್ರಾಣ ಕಳೆದುಕೊಂಡ ಪ್ರಯಾಣಿಕನ ಸಾವಿಗೆ ಶಿವಮೊಗ್ಗ ಕೆಎಸ್ಸಾರ್ಟಿಸಿ ವಿಭಾಗದ ಅಧಿಕಾರಗಳೇ ಕಾರಣ ಅನ್ನೋದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಮೃತಪಟ್ಟ ಪ್ರಯಾಣಿಕರ ಮನೆ ತರೀಕೆರೆ ತಾಲ್ಲೂಕಿನ ಎಂ.ಸಿ. ಹಳ್ಳಿಯಲ್ಲಿದ್ದು, ಬಡ ಕುಟುಂಬವಾಗಿದೆ. ಘಟನೆ ನಡೆದಾಗ ತಿಪಟೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ ನಂತರವೂ ರಕ್ತಸ್ರಾವ ಮಾತ್ರ ನಿಂತಿರಲಿಲ್ಲ. ಈ ವೇಳೆ ಶಿವಮೊಗ್ಗ ವಿಭಾಗೀಯ ನಿಯಂತ್ರಣಾಧಿಕಾರಿ ವಿಜಯ್ ಕುಮಾರ್ .ಜಿ, ವಿಭಾಗೀಯ ಸಂಚನಲನಾಧಿಕಾರಿ ದಿನೇಶ್ ಕುಮಾರ್ ಚನ್ನಗಿರಿ ಸ್ವಲ್ಪ ಮನುಷ್ಯತ್ವ ತೋರಿ ಗಾಯಾಳುವನ್ನ ಬೆಂಗಳೂರಿಗಾದ್ರೂ ಇಲ್ಲಾಂದ್ರೆ ಉತ್ತಮ ಚಿಕಿತ್ಸೆ ಕೊಡಿಸುವ ಆಸ್ಪತ್ರೆಗಾದ್ರೂ ದಾಖಲು ಮಾಡಬೇಕಿತ್ತು. ಆದ್ರೆ ಅದ್ಯಾವುನ್ನೂ ಮಾಡದೆ ತಿಪಟೂರಿನ ಬಳಿಕ ಶಿವಮೊಗ್ಗಕ್ಕೆ ಹೆಚ್ಚಿನ ಚಿಕಿತ್ಸೆಗೆ ರವಾನೆ ಮಾಡಿದ್ದಾರೆ.
ತರೀಕೆರೆ ತಾಲೂಕಿನಲ್ಲಿ ಗಾಯಾಳು ಮನೆಯಿದ್ದು, ಗಾಯಾಳುವನ್ನ ನೋಡಿಕೊಳ್ಳೊಕೆ ಕುಟುಂಬಸ್ಥರೇ ಇರ್ತಾರೆ ಅಂತ ಈ ಯೋಚನೆ ಮಾಡಿದರಂತೆ. ಅಲ್ಲ ಸ್ವಾಮಿ ತಿಪಟೂರಿನಿಂದ ತುಮಕೂರಿಗೆ ಇದ್ದ ಅಂತರ ಕೇವಲ 75 ಕಿಲೋ ಮೀಟರ್ ಮಾತ್ರ. ಆದರೆ ಮಾನವೀಯತೆ ಹಾಗೂ ಪ್ರಾಣಕ್ಕೆ ಬೆಲೆ ಕೊಡದ ಅಧಿಕಾರಿಗಳು 75 ಕಿಲೋಮೀಟರ್ ದೂರದಲ್ಲಿದ್ದ ತುಮಕೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡೋದನ್ನ ಬಿಟ್ಟು, 179 ಕಿಲೋ ಮೀಟರ್ ದೂರದಲ್ಲಿರುವ ಶಿವಮೊಗ್ಗದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಮೊದಲೇ ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರದಿಂದ ರಸ್ತೆ ಕಾಮಗಾರಿ ನಡೆಯುತ್ತಿದೆ. ಹೀಗಿರುವಾಗಿ 179 ಕಿಲೋ ಮೀಟರ್ ಸಾಗುವ ಮಾರ್ಗ ಮಧ್ಯದಲ್ಲಿ ಮತ್ತಷ್ಟು ರಕ್ತಸ್ರಾವವಾಗಿದೆ.
ರಸ್ತೆ ಅಫಘಾತದಲ್ಲಿ ಗಾಯಾಳುಗಳಿಗೆ ಸೂಕ್ತ ಹಾಗೂ ಉತ್ತಮ ಚಿಕಿತ್ಸೆ ಕೊಡಿಸ್ಬೇಕೆಂಬ ನಿಯಮವಿದ್ದರೂ ಶಿವಮೊಗ್ಗ ವಿಭಾಗದ ಅಧಿಕಾರಿಗಳು ಅದನ್ನ ಮರೆತಂತೆ ಕಾಣುತ್ತಿತ್ತು. ತಮ್ಮ ಮೇಲಿನ ಜವಾಬ್ದಾರಿ ಸಾಧ್ಯವಾದಷ್ಟು ಕಡಿಮೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಹೃದಯದಲ್ಲಿ ಮಾನವೀಯತೆಗೆ ಜಾಗವನ್ನೇ ಕೊಡಲಿಲ್ಲ. ಶಿವಮೊಗ್ಗ ವಿಭಾಗದ ಅಧಿಕಾರಿಗಳ ಬೇಜವಾಬ್ದಾರಿತನ ಮುಚ್ಚಿ ಹಾಕುವ ಸಲುವಾಗಿ ಸಂಸ್ಥೆಯ ಎರಡೂ ವಾಹನದ ಚಾಲಕರನ್ನು ಅಮಾನತ್ತು ಮಾಡಲಾಗಿದೆ. ಅಮಾನತು ಮಾಡುವ ವಿಚಾರದಲ್ಲಿ ಆತುರ ತೋರಿದ ಮಾನವೀಯತೆ ಮರೆತ ಅಧಿಕಾರಿಗಳು ಪ್ರಯಾಣಿಕನ ಪ್ರಾಣ ಉಳಿಸುವ ನಿಟ್ಟಿನಲ್ಲಿ ಆತುರ ತೋರಲಿಲ್ಲ ಎನ್ನುವುದೇ ಬೇಸರದ ಸಂಗತಿ.
ಘಟನೆ ನಡೆದ ತಕ್ಷಣವೇ ಯಾರು ಏನೇ ಹೇಳಲಿ ಪ್ರಯಾಣಿಕರ ಜೀವವೇ ಮುಖ್ಯ ಅನ್ನೋದನ್ನ ಪರಿಗಣಿಸಿದ್ದರೆ ಅಫಘಾತವಾದ ಮೂರ್ಲಾಲ್ಕು ಗಂಟೆಯಲ್ಲೇ ಬೆಂಗಳೂರಿನಲ್ಲಿ ಚಿಕಿತ್ಸೆ ಕೊಡಿಸುವ ಕಾರ್ಯ ಮಾಡಬಹುದಿತ್ತು. ಆದ್ರೆ ಕಲ್ಲು ಹೃದಯದ ಅಧಿಕಾರಿಗಳು ಮಾಡಿದ ಒಂದು ಯಡವಟ್ಟಿಗೆ ಬಾಳಿ ಬದುಕಬೇಕಾಗಿದ್ದ ಪ್ರಯಾಣಿಕನ ಪ್ರಾಣ ಪಕ್ಷಿ ಮತ್ತೆ ಬಾರದ ಲೋಕಕ್ಕೆ ಹಾರಿಹೋಗಿದೆ.
ಈ ರೀತಿಯಾಗಿ ಬೇಜವಾಬ್ದಾರಿ ಹಾಗೂ ಅಲಕ್ಷತೆ ತೋರಿರುವ ಶಿವಮೊಗ್ಗ ವಿಭಾಗದ ತಪ್ಪಿತಸ್ಥ ಅಧಿಕಾರಿಗಳಿಗೇಕೆ ಇಲ್ಲ ಶಿಕ್ಷೆ ಸ್ವಾಮಿ, ಸಂಸ್ಥೆಯಲ್ಲಿ ಕಾರ್ಮಿಕರಿಗೆ ಶಿಕ್ಷೆ ಅಧಿಕಾರಿಗಳಿಗೆ ಶ್ರೀ ರಕ್ಷೆ ಎಂಬಂತೆ ಆಗಿದೆ. ದಕ್ಷ/ಪ್ರಾಮಾಣಿಕ ಅಧಿಕಾರಿಯಾಗಿರುವ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ರವರೇ ಸದರಿ ವಿಷಯದ ಬಗ್ಗೆ ತಪ್ಪಿತಸ್ಥ ಅಧಿಕಾರಿಗಳಾದ ವಿಜಯ್ ಕುಮಾರ್ .ಜಿ , ದಿನೇಶ್ ಕುಮಾರ್ ಚನ್ನಗಿರಿ ಅವರನ್ನ ಕೂಡಲೇ ಅಮಾನತು ಪಡಿಸಿ ಕೂಲಂಕಷವಾಗಿ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ನೌಕರರ ಸಂಘಟನೆ ಮನವಿ ಮಾಡುತ್ತಿದೆ.