ಬೆಂಗಳೂರು, (www.thenewzmirror.com) ;
ಸಾರಿಗೆ ಇಲಾಖೆಯಲ್ಲಿ ಭ್ರಷ್ಟತೆ ಹಾಗೂ ಲಂಚಾವತಾರಕ್ಕೆ ಕೊನೆಯೇ ಇಲ್ವಾ? ಹಾಡ ಹಗಲೇ ಎಂಜಲು ಕಾಸಿಗೆ ಕೈ ಒಡ್ಡುತ್ತಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳುವುವರು ಯಾರೂ ಇಲ್ವಾ? ಇಂಥದೊಂದು ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಕಂಡಕ್ಟರ್ ಗಳಿಂದ ಪ್ರಯಾಣಿಕರ ಟಿಕೆಟ್ ಹಣವನ್ನ ಸೀದಾ ಜೇಬಿಗೆ ಇಳಿಸುವ ಹಣಬಾಕ ಅಧಿಕಾರಿಗಳ ವಿರುದ್ಧ ಎಂಡಿ ಹಾಗೂ ಸಾರಿಗೆ ಸಚಿವರು ಕ್ರಮ ಕೈಗೊಳ್ಳುವಲ್ಲಿ ವಿಫಲವಾಗ್ತಿದ್ದಾರಾ ಎಂಬ ಅನುಮಾನ ಕಾಡುತ್ತಿದೆ.
ಲಂಚ ಪಡೆಯುತ್ತಿರುವ ವೀಡಿಯೋ ಲಿಂಕ್ ಇಲ್ಲಿದೆ 👇🏻 👇🏻👇🏻
ಶಿವಮೊಗ್ಗ ವಿಭಾಗದ, ಶಿವಮೊಗ್ಗ ಬಸ್ ನಿಲ್ದಾಣದ ಸಂಚಾರ ನಿಯಂತ್ರಕರಾದ ಉಮೇಶ್ ಕಳೆದ ಹಲವು ವರ್ಷಗಳಿಂದ ಹಗಲು ದರೋಡೆ ಮಾಡುತ್ತಿದ್ದರೂ ಅಂಥವರಿಗೆ ನಿಗಮ ಉನ್ನತ ಹುದ್ದೆ ನೀಡಿರುವುದು ಹಲವು ಅನುಮಾನಗಳಿಗೆ ಕಾರಣವಾಗುತ್ತಿದೆ ಎಂದು ಇತರ ಸಿಬ್ಬಂದಿ ಆರೋಪ ಮಾಡುತ್ತಿದ್ದಾರೆ. ಶಿವಮೊಗ್ಗ ಬಸ್ ನಿಲ್ದಾಣದ ಸಂಚಾರ ನಿಯಂತ್ರಕರಾಗಿದ್ದರೂ ಸಹ ಇವರಿಗೆ ಶಿವಮೊಗ್ಗ ವಿಭಾಗದ ತನಿಖಾಧಿಕಾರಿಗಳಾಗಿ ಪ್ರಮೋಷನ್ ನೀಡಲಾಗಿದೆಯಂತೆ.
ಬೇವಿನ ಕಾಯಿಗೆ ಹಾಗಲಕಾಯಿ ಸಾಕ್ಷಿ ಎಂಬಂತೆ ಬಸ್ ಗಳಲ್ಲಿ ತನಿಖೆ ಮಾಡಲು ನೇಮಿಸಲಾಗಿದೆಯಂತೆ. ಕಂಡಕ್ಟರ್ ಗಳಿಂದ ಲಂಚ ಪಡೆಯುವ ಅಧಿಕಾರಿ ತನಿಖೆ ನಡೆಸುವ ವೇಳೆ ಇವರಿಗೆ ನ್ಯಾಯ ನಿರೀಕ್ಷೆ ಮಾಡಲು ಸಾಧ್ಯಾನಾ ಎನ್ನುವ ಪ್ರಶ್ನೆ ಇತರ ಸಿಬ್ಬಂದಿ ಮಾಡುತ್ತಿದ್ದಾರೆ.
ಕಂಡಕ್ಟರ್ ಗಳಿಂದ ಪಡೆದ ಲಂಚವನ್ನ ಸಂಬಂಧ ಪಟ್ಟ ಮೇಲಾಧಿಕಾರಿಗಳಿಗೆ ತಲುಪುವಂತೆ ಮಾಡುತ್ತಿದ್ದಾರಂತೆ ಹೀಗಾಗಿಯೇ ಅವರ ವಿರುದ್ಧ ಕ್ರಮ ಜರುಗಿಸಲು ಸಾಧ್ಯವಾಗ್ತಿಲ್ಲ ಎನ್ನುವ ಮಾತುಗಳು ಸಾರಿಗೆ ನೌಕರರ ಮುಖಂಡರು ಅನುಮಾನ ವ್ಯಕ್ತಪಡಿಸ್ತಾ ಇದ್ದಾರೆ.
ಶಿವಮೊಗ್ಗ ವಿಭಾಗದ ಸಂಚಾರ ನಿಯಂತ್ರಕ ಉಮೇಶ್ ಅವರದ್ದು ಎನ್ನುವ ವೀಡಿಯೋದಲ್ಲಿ ಶಿವಮೊಗ್ಗ ಬಸ್ ನಿಲ್ದಾಣದಲ್ಲೇ ರಾಜಾರೋಷವಾಗಿ ಯಾವುದೇ ಅಧಿಕಾರಿಗಳಿಗೂ ಕ್ಯಾರೇ ಎನ್ನದೆ ಆರಾಮವಾಗಿ ಕುಳಿತು ಕೊಂಡು ನಿರ್ವಾಹಕರ ಬಳಿಯೇ ಲಂಚ ಪಡೆಯುತ್ತಿದ್ದಾರೆ. ಎಂಟ್ರಿ ಮಾಡಿಸಿಕೊಳ್ಳೊಕೆ ಬರುವ ಕಂಡಕ್ಟರ್ ಬಳಿ ಹಣ ಪಡೆಯುತ್ತಿರುವುದು ವೀಡಿಯೋದಲ್ಲಿ ವೈರಲ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಬಸ್ ನಿಲ್ದಾಣದಲ್ಲೇ ಅಧಿಕಾರಿಗಳ ಕಛೇರಿ ಇದ್ದರೂ ಸಹ ಯಾವುದೇ ಭಯವಿಲ್ಲ. ಈ ಸಂಚಾರ ನಿಯಂತ್ರಕರು ಶಿವಮೊಗ್ಗ ವಿಭಾಗದ ಅಧಿಕಾರಿಗಳಿಗೆ ಪ್ರತಿ ತಿಂಗಳು ವಂತಿಕೆ ನೀಡುವ ಕೆಲ್ಸ ಮಾಡುತ್ತಿದ್ದಾರೆ. ಹೀಗಾಗಿಯೇ ಇದೆಲ್ಲ ಗೊತ್ತಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ ಅನ್ನೋ ಆರೋಪವಿದೆ. ಹೀಗಾಗಿಯೇ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಲ್ಲ ಎನ್ನೋ ದೂರು ಕೇಳಿ ಬರುತ್ತಿದೆ.
ಶಿವಮೊಗ್ಗ ವಿಭಾಗದ ಬಸ್ ನಿಲ್ದಾಣದಲ್ಲಿ ಯಾವುದೇ ಅಧಿಕಾರಿಗಳ ಭಯವಿಲ್ಲದೆ ರಾಜಾರೋಷವಾಗಿ ಪ್ರಯಾಣಿಕರ ಎದುರಿನಲ್ಲೇ ಕಂಡಕ್ಟರ್ ರವರ ಬಳಿ ಲಂಚ ಪಡೆಯುತ್ತಿದ್ದಾರೆ ಎನ್ನುವ ವೀಡಿಯೋ ಇದೀಗ ಸಾಮಾಜಿಕ ಜಾಣತಾಣದಲ್ಲಿ ಹರಿದಾಡುತ್ತಿದೆ. ಹೀಗಿದ್ದರೂ ಅವ್ರಿಗೆ ಮುಂಬಡ್ತಿ ನೀಡಿರುವುದು ನಿಜಕ್ಕೂ ಹಾಸ್ಯಾಸ್ಪದ. ಕೂಡಲೇ ಮುಂಬಡ್ತಿ ನೀಡಿರುವ ಆದೇಶಕ್ಕೆ ತಡೆಯಾಜ್ಞೆ ನೀಡಬೇಕು ಹಾಗೆನೇ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎನ್ನುವುದು ನ್ಯೂಝ್ ಮಿರರ್ ನ ಕಳಕಳಿ.
ನೌಕರರ ಸಂಘಟನೆ ಹೇಳುವುದು ಏನು?
ನಮ್ಮಂಥ ಅದೆಷ್ಟೋ ನೌಕರರಿಗೆ ಅನ್ನ ನೀಡುವ ಸಂಸ್ಥೆ. ಅಂಥ ಸಂಸ್ಥೆಗೆ ದ್ರೋಹ ಮಾಡ್ತಿರುವವರು ಯಾರೇ ಆದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಿ. ಇಂಥ ಒಬ್ಬರಿಂದ ಇಡೀ ನೌಕರರಿಗೆ ಕೆಟ್ಟ ಹೆಸರು ಬರುತ್ತೆ. ಸಂಸ್ಥೆಯ ಗೌರವ -ಘನತೆಗೆ ದಕ್ಕೆ ತಂದಿರುವ ಇವರುಗಳನ್ನ ಕೂಡಲೇ ಅಮಾನತು ಪಡಿಸಿ ತನಿಖೆ ನಡೆಸಿ ಸೂಕ್ತ ಶಿಸ್ತು ಕಠಿಣ ಕ್ರಮ ಕೈಗೊಳ್ಳಲಿ.
ಸಂಪರ್ಕಕ್ಕೆ ಸಿಗದ ಉಮೇಶ್ ಹಾಗೂ ನಿಗಮದ ಅಧಿಕಾರಿಗಳು.!
ಇನ್ನು KSRTC ಸಂಸ್ಥೆಯ ಶಿವಮೊಗ್ಗ ವಿಭಾಗದ ಸಂಚಾರ ನಿಯಂತ್ರಕ ಉಮೇಶ್ ಅವರ ವಿರುದ್ಧ ಕೇಳಿ ಬಂದ ಆರೋಪಕ್ಕೆ ಕುರಿತಂತೆ ಶಿವಮೊಗ್ಗ ವಿಭಾಗದ ನಿಯಂತ್ರಾಧಿಕಾರಿಯನ್ನ ಸಂಪರ್ಕ ಮಾಡಿದರೂ ಅವರು ಸಂಪರ್ಕಕ್ಕೆ ಸಿಗಲಿಲ್ಲ. ಹಾಗೆನೇ ನಿಗಮದ ಎಂಡಿ ಅವರ ದೂರವಾಣಿ ಕರೆ ಮಾಡಿದರೂ ನಾಟ್ ರೀಚಬಲ್ ಆಗಿತ್ತು.