ಬೆಂಗಳೂರು, (www.thenewzmirror.com) ;
500 ವರ್ಷಗಳ ಹೋರಾಟದ ಫಲವಾಗಿ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾಗಿದೆ. ಅತ್ಯಂತ ಅಧ್ಬುತವಾಗಿ ರಾಮಲಲ್ಲನ ಅಂದ್ರೆ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ಆಗಿದೆ.
ಶತಕೋಟಿ ಭಾರತೀಯ ಕನಸು ನನಸಾಗುವ ಸಂಧರ್ಭದಲ್ಲಿ ಕಾಂಗ್ರೆಸ್ ಗೈರು ಆಗಿದ್ದರ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದವು. ಹೀಗಾಗಿ ನಿಮ್ಮ ನ್ಯೂಝ್ ಮಿರರ್ ಹಾಗೂ ಕೆಕೆ ನ್ಯೂಸ್ ಕಿರುವಾಸೆ ಕನ್ನಡ ಯೂಟ್ಯೂಬ್ ಚಾನಲ್ ವತಿಯಿಂದ ಸರ್ವೆಯೊಂದನ್ನ ನಡೆಸಲಾಗಿತ್ತು.
ರಾಮಮಂದಿರ ನಿರ್ಮಾಣವನ್ನ ಬಿಜೆಪಿ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ. ಆರ್ ಎಸ್ ಎಸ್ ನ ಕಾರ್ಯಕ್ರಮಕ್ಕೆ ನಾವೆಲ್ಲ ಹೋಗೋದಿಲ್ಲ ಅಂತ ಸೋನಿಯಾ ಗಾಂಧಿ, ರಾಹುಲ್ ಗಾಂಧಿಯಾಗಿ ಕಾಂಗ್ರೆಸ್ ನ ನಾಯಕರು ಅಧ್ಭುತ ಕ್ಷಣದಲ್ಲಿ ಭಾಗಿಯಾಗಿರಲಿಲ್ಲ.. ಆದರೆ ಬಿಜೆಪಿ ಮಾತ್ರ ಇದು ೫೦೦ ವರ್ಷಗಳ ಹೋರಾಟದ ಫಲ ಇದರಲ್ಲಿ ರಾಜಕೀಯ ಮಾಡೋದು ಬೇಡ ಅಂತ ಮನವಿ ಮಾಡಿತ್ತು.
ಅದರ ಹೊರತಾಗಿಯೂ ಕಾಂಗ್ರೆಸ್ ಅಂದುಕೊಂಡಂತೆ ಕಾರ್ಯಕ್ರಮದಿಂದ ದೂರ ಉಳಿದಿತ್ತು. ಇದು ಮುಂಬರೋ ಲೋಕಸಭಾ ಚುನಾವಣೆ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ ಅನ್ನೋದು ಕಾದು ನೋಡ್ಬೇಕಿದೆ. ಅದರ ನಡುವೆನೇ ನಡೆಸಿದ ಜಂಟಿ ಸರ್ವೆಯಲ್ಲಿ ಕಾಂಗ್ರೆಸ್ ನಡೆಗೆ ಭಾರೀ ವಿರೋಧ ವ್ಯಕ್ತಪಡಿಸ್ತಾ ಇದ್ದಾರೆ.
ಐತಿಹಾಸಿಕ ಕ್ಷಣದಲ್ಲಿ ಕಾಂಗ್ರೆಸ್ ಗೈರಾಗುವ ವಿಚಾರ ಸರಿನಾ ತಪ್ಪಾ ಎಂದು ಪ್ರಶ್ನೆ ಕೇಳಲಾಗಿತ್ತು. ಜನವರಿ 18 ರಂದು ಸರ್ವೆಗೆ ಕೇಳಿದ್ದ ಪ್ರಶ್ನೆಗೆ ದೇಶಾದ್ಯಂತ ಸಾಕಷ್ಟು ಸಂಖ್ಯೆಯಲ್ಲಿ ಅಭಿಪ್ರಾಯವನ್ನ ಹಂಚಿಕೊಂಡಿದ್ದಾರೆ. ಅದರ ಪ್ರಕಾರ ಶೇಕಡಾ 28 ರಷ್ಟು ಮಂದಿ ಸರಿ ಇದೆ ಎಂದು ಅಭಿಪ್ರಾಯ ಪಟ್ಟಿದ್ದರೆ ಶೇಕಡಾ 64 ರಷ್ಟು ಮಂದಿ ಸರಿ ಇಲ್ಲ ಅಂತ ತಮ್ಮ ಅಭಿಪ್ರಾಯವನ್ನ ಹಂಚಿಕೊಂಡಿದ್ದಾರೆ. ಇನ್ನುಳಿದಂತೆ ಶೇಕಡಾ 8 ರಷ್ಟು ಮಂದಿ ಈ ಬಗ್ಗೆ ಗೊತ್ತಿಲ್ಲ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಸದ್ಯದ ಸರ್ವೆಯನ್ನ ಗಮನಿಸಿದಾಗ ಕಾಂಗ್ರೆಸ್ ನ ನಡೆ ಮುಂಬರುವ ಲೋಕಸಭಾ ಚುನಾವಣೆ ಮೇಲೆ ಸಾಕಷ್ಟು ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದೇ ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಡ್ತಿದ್ದಾರೆ.