Cricket News | ಧೋನಿ ಮಗಳ ಶಾಲೆಯ ಫೀಸ್ ಎಷ್ಟು ಗೊತ್ತಾ.?

ಬೆಂಗಳೂರು,(www.thenewzmirror.com);

ಟೀಂ ಇಂಡಿಯಾದ ಮಾಜಿ ನಾಯಕ, ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿಹೊಂದಿದ್ದಾರೆ. ಕ್ರಿಕೆಟ್‌ ಲೋಕ ಆಚೆಗಿನ ಅವರ ಜೀವನದ ಬಗ್ಗೆ ತಿಳಿದುಕೊಳ್ಳಲು ಲಕ್ಷಾಂತರ ಅಭಿಮಾನಿಗಳನ್ನು ಕಾತರದಿಂದ ಕಾಯುತ್ತಿದ್ದಾರೆ. ಧೋನಿ ಜತೆಗೆ ಅವರ ಪತ್ನಿ ಸಾಕ್ಷಿ ಧೋನಿ ಮತ್ತು ಅವರ ಪುತ್ರಿ ಝಿವಾ ಧೋನಿ ಏನ್ ಮಾಡ್ತಿದ್ದಾರೆ.., ಅವರ ಜೀವನ ಶೈಲಿ ಹೇಗಿರುತ್ತೆ ಅಂತೆಲ್ಲಾ‌ಯೋಚನೆ ಮಾಡ್ತಾನೇ ಇರ್ತಾರೆ..,

RELATED POSTS

ಹೀಗಾಗಿ ಕೂಲ್ ಕ್ಯಾಪ್ಟನ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಏನ್ ಅಪ್ ಡೇಟ್ ಇದೆ ಅಂತ ನೋಡ್ತಾನೇ ಇರ್ತಾರೆ.. 2024 ರ ಫೆಬ್ರವರಿ 6 ಕ್ಕೆ ಧೋನಿ ಮಗಳು ಝಿವಾ 9 ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಹೀಗೊರುವಾಗ ಧೋನಿ ಮಗಳು ಏನು ಓದುತ್ತಿರೋದು..? ಯಾವ ಶಾಲೆ, ಫೀಸ್ ಎಷ್ಟು ಅನ್ನೋದ್ರ ಮಾಹಿತಿ ಸಾಮಾಜಿಕ ಜಾಲತಾಣದ ಮೂಲಕ ಲಭ್ಯವಾಗುತ್ತಿದೆ.

ರಾಂಚಿಯಲ್ಲಿರುವ ಟೌರಿಯನ್ ವರ್ಲ್ಡ್ ಸ್ಕೂಲ್‌ನ ವಿದ್ಯಾರ್ಥಿ ಝಿವಾ. ರಾಂಚಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅತ್ಯಂತ ಗೌರವಾನ್ವಿತ ಬೋರ್ಡಿಂಗ್ ಶಾಲೆಗಳಲ್ಲಿಇದು ಒಂದಾಗಿದೆ. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಹಳೆಯ ವಿದ್ಯಾರ್ಥಿಯಾದ 35 ವರ್ಷದ ಅಮಿತ್ ಬಜ್ಲಾರಿಂದ 2008 ರಲ್ಲಿ ಸ್ಥಾಪಿತವಾದ ಶಾಲೆಯಾಗಿದ್ದು, ಪ್ರಸ್ತುತ ಅವರೇ ಈ ಶಾಲೆಯ ಅಧ್ಯಕ್ಷರಾಗಿದ್ದಾರೆ.

ಈ ಶಾಲೆ ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ರಾಯೋಗಿಕ ಶಿಕ್ಷಣ ನೀಡುವ ಕೆಲ್ಸ ಮಾಡಿಕೊಂಡು ಬರುತ್ತಿದೆ. 65 ಎಕರೆ ಕ್ಯಾಂಪಸ್‌ನಲ್ಲಿ ಸ್ಥಾಪಿಸಲಾದ ಶಾಲೆಯು ಸಮಗ್ರ ವಿಧಾನವನ್ನು ಹೊಂದಿದೆ, ಸಾವಯವ ಕೃಷಿ, ಕುದುರೆ ಸವಾರಿ ಮತ್ತು ವಿವಿಧ ಸೌಲಭ್ಯಗಳನ್ನು ನೀಡುತ್ತಾ ಬರುತ್ತಿದೆ.

ಅಂತರರಾಷ್ಟ್ರೀಯ ಶಿಕ್ಷಕರನ್ನು ಒಳಗೊಂಡಿರುವ ಈ ಶಾಲೆಯಲ್ಲಿ  ಸಾವಯವ ಕೃಷಿಯಿಂದ ಹಿಡಿದು ಕುದುರೆ ಸವಾರಿಯವರೆಗಿನ ಸೌಲಭ್ಯಗಳನ್ನು ಒದಗಿಸುತ್ತದೆ. ಹಾಗೆನೇ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯವನ್ನು ಬೆಳೆಸಲು ಕ್ರೀಡೆಗಳಿಗೆ ವಿಶೇಷ ಒತ್ತು ನೀಡಲಾಗುತ್ತದೆ.

ಶಾಲೆಯ ಶುಲ್ಕ ರಚನೆಯು ತುಲನಾತ್ಮಕವಾಗಿ ಹೆಚ್ಚಿರುವ ಶಾಲೆಯಲ್ಲಿ ಎಲ್‌ಕೆಜಿಯಿಂದ 8ನೇ ತರಗತಿವರೆಗೆ ಶಿಕ್ಷಣ ನೀಡಲಾಗುತ್ತಿದೆ. ಇಷ್ಟೆಲ್ಲಾ ಸೌಲಭ್ಯ ಇರುವ ಈ ಶಾಲೆಯಲ್ಲಿ ವಾರ್ಷಿಕ ಒಂದು ಮಗುವಿಗೆ ಸುಮಾರು 4.40 ಲಕ್ಷ ರೂ. ಮತ್ತು 9 ರಿಂದ 12ನೇ ತರಗತಿಯವರೆಗೆ ಸಮವಸ್ತ್ರ, ಪಠ್ಯಪುಸ್ತಕಗಳು, ಲೇಖನ ಸಾಮಗ್ರಿಗಳು, ಚಳಿಗಾಲದ ಸಮವಸ್ತ್ರಗಳು ಮತ್ತು ಕ್ರೀಡಾ ಉಡುಪುಗಳನ್ನು ಒಳಗೊಂಡಂತೆ ಸರಿಸುಮಾರು 4.80 ಲಕ್ಷ ರೂ. ಶುಲ್ಕ ನಿಗದಿ ಮಾಡಲಾಗಿದೆಯಂತೆ.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist