ಬೆಂಗಳೂರು/ಮೈಸೂರು, (thenewzmirror.com) ;
ಈ ಬಾಋಈಐ ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ಮೈಸೂರು ಮೃಗಾಲಯಕ್ಕೆ ದಾಖಲೆ ಪ್ರಮಾಣದಲ್ಲಿ ಭೇಟಿಕೊಟ್ಟಿದ್ದಾರೆ. ಮೈಸೂರು ಮೃಗಾಲಯ ಆಡಳಿತ ಮಂಡಳಿ ಕೊಟ್ಟಿರುವ ಅಂಕಿ ಅಂಶಗಳ ಪ್ರಕಾರ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ವಿಸಿಟ್ ಕೊಟ್ಟವರ ಸಂಖ್ಯೆ ಲಕ್ಷ ಮೀರಿದೆ.
ಕಳೆದ ಮೂರು ದಿನಗಳ ಅಂಕಿ ಅಂಶಗಳನ್ನ ಆಧರಿಸಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 24,132ಮಂದಿ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿಕೊಟ್ಟಿದ್ದಾರೆ. ಕಳೆದ ವರ್ಷ 77,833 ಮಂದಿ ವಿಸಿಟ್ ಕೊಟ್ಟಿದ್ದರೆ ಈ ಬಾರಿ 1,01,965 ಮಂದಿ ವಿಸಿಟ್ ಕೊಟ್ಟಿದ್ದಾರಂತೆ. ಇದೇ ತಿಂಗಳ 23 ಹಾಗೂ 24 ರಂದು ಕಳೆದ ವರ್ಷಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಮೃಗಾಲಯಕ್ಕೆ ಭೇಟಿಕೊಟ್ಟಿದ್ದಾರೆ.
ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದು, ಮೃಗಾಲಯವು ತನ್ನ ಅತಿ ಹೆಚ್ಚು ಪ್ರವಾಸಿಗರನ್ನು ದಾಖಲಿಸಿದೆ
ಕ್ರಿಸ್ ಮಸ್ 2023 ರ ಮುನ್ನಾದಿನ 24 ರಂದು 40,761 ಭೇಟಿ ಕೊಟ್ಟಿದ್ದರು. ಇದು ಕಳೆದ ನಾಲ್ಕು ವರ್ಷಗಳಲ್ಲಿ ಅತಿ ಹೆಚ್ಚಿನ ಪ್ರವಾಸಿಗರ ಭೇಟಿಯಾಗಿದೆ. 2018 ರ 24 ರಂದು 40,675 ಜನರು ಭೇಟಿ ಕೊಟ್ಟಿದ್ದರಂತೆ. ಈ ವರ್ಷ ಆ ದಾಖಲೆಯನ್ನೂ ಮೀರಿಸಿದೆ ಅಂತ ಮೈಸೂರು ಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ಮಾಹಿತಿ ಕೊಟ್ಟಿದ್ದಾರೆ.
ಕಳೆದ ಎರಡು ವರ್ಷದ ಸಂದರ್ಶಕರ ಸಂಖ್ಯೆ
ದಿನಾಂಕ ಸಂದರ್ಶಕರ ಸಂಖ್ಯೆ
23/12/2022 16,682
24/12/2022 26,355
25/12/2022 34,796
ಒಟ್ಟು 77,833
ದಿನಾಂಕ ಸಂದರ್ಶಕರ ಸಂಖ್ಯೆ
23/12/2023 25,860
24/12/2023 40,761
25/12/2023 35,344
ಒಟ್ಟು 1,01,965