ಬೆಂಗಳೂರು, (www.thenewzmirror.com);
ಈಗಾಗಲೇ ಆರ್ಥಿಕ ನಷ್ಟದಲ್ಲಿರುವ ಕೆಎಸ್ಸಾರ್ಟಿಸಿ ಇದೀಗ ತನ್ನ ಆದಾಯ ಹೆಚ್ಚಳ ಮಾಡಿಕೊಳ್ಳೋಕೆ ಹೊಸ ಐಡಿಯಾ ಹುಡುಕಿದೆ. ಈ ಹೊಸ ಯೋಜನೆಗೆ ಇತ್ತೀಚೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದ್ದಾರೆ. ಅದುವೇ ಕೆಎಸ್ಸಾರ್ಟಿಸಿ ಕಾರ್ಗೋ. ಇಷ್ಟು ವರ್ಷ ಖಾಸಗಿ ಸಂಸ್ಥೆಗೆ ಲಗೇಜ್ ಗಳನ್ನ ಕೆಎಸ್ಸಾರ್ಟಿಸಿ ಬಸ್ ನಲ್ಲಿ ತೆಗೆದುಕೊಂಡು ಹೋಗಲು ಅವಕಾಶ ನೀಡಲಾಗುತ್ತಿತ್ತು. ಇದರಿಂದ ನಿಗಮಕ್ಕೆ ಹೆಚ್ಚಿನ ರೀತಿಯಲ್ಲಿ ಆದಾಯ ಬರುತ್ತಿರಲಿಲ್ಲ. ಇದನ್ನ ಮನಗಂಡ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಪ್ರಯಾಣಿಕ್ರಿಗೆ ಉತ್ತಮ ಸೇವೆ ನೀಡುತ್ತಿರುವ ನಾವು ಯಾಕೆ ಪಾರ್ಸೆಲ್ ಗಳನ್ನ ತೆಗೆದುಕೊಂಡು ಹೋಗುವ ಪ್ರತ್ಯೇಕ ವ್ಯವಸ್ಥೆ ಮಾಡಬಾರದು ಎಂದು ಯೋಚನೆ ಮಾಡಿದರು. ಅದರಂತೆ ಕೆಎಸ್ಸಾರ್ಟಿಸಿ ಎಂಡಿ ಅನ್ಬು ಕುಮಾರ್ ಅವರ ಬಳಿ ಇದಕ್ಕೊಂದು ರೂಪು ರೇಷೆ ಸಿದ್ದಪಡಿಸಿ ಅಂತಾನೂ ಸೂಚಿಸಿದ್ದರು.
ಅದರಂತೆ ಕೆಎಸ್ಸಾರ್ಟಿಸಿ ಎಂಡಿ ಅನ್ಬು ಕುಮಾರ್ ಕಾರ್ಗೋ ಸೇವೆಗಾಗಿಗೇ ಪ್ರತ್ಯೇಕ ಟ್ರಕ್ ಗಳನ್ನ ಖರೀದಿ ಮಾಡಿದರೆ ಉತ್ತಮ ಎಂಬ ಸಲಹೆಯನ್ನ ಸಾರಿಗೆ ಸಚಿವರಿಗೆ ಕೊಟ್ಟರು. ಅದರಂತೆ ಸಾರಿಗೆ ಸಚಿವರು ಹೊಸ ಐಡಿಯಾಗೆ ಅಸ್ತು ಎಂದೇ ಬಿಟ್ಟಿರು. ಅದರಂತೆ ಮೊದಲ ಹಂತದಲ್ಲಿ 20 ಟ್ರಕ್ ಗಳ ಸೇವೆ ಆರಂಭ ಮಾಡಿದ್ದು, ಇದರಿಂದ ವಾರ್ಷಿಕ ₹20 ಕೋಟಿ ಆದಾಯದ ನಿರೀಕ್ಷೆ ಮಾಡಲಾಗಿದೆ. ಈ ಮೊದಲು ವಾರ್ಷಿಕ ಕೇವಲ ನಾಲ್ಕರಿಂದ ಐದು ಕೋಟಿ ಆದಾಯ ಮಾತ್ರ ನಿಗಮಕ್ಕೆ ಹರಿದು ಬರುತ್ತಿತ್ತಂತೆ.
ಈ ಕಾರ್ಗೋ ಸೇವೆಗೆ ನಿಗಮದ ಚಾಲಕರೇ ಇರಲಿದ್ದಾರೆ. ಆ ಮೂಲಕ ದೇಶದಲ್ಲಿ ಮೊದಲ ಬಾರಿಗೆ ಇಂಥ ಸೇವೆ ಆರಂಭಿಸಿದ ಕೀರ್ತಿ ಕೆಎಸ್ಸಾರ್ಟಿಸಿಗೆ ಸಲ್ಲಲಿದೆ. ಸದ್ಯ20 ಟ್ರಕ್ ಸೇವೆ ನೀಡುತ್ತಿದ್ದು, ಸಂಕ್ರಾಂತಿ ವೇಳೆಗೆ 100 ವಾಹನಗಳು ಸೇರ್ಪಡೆಯಾಗಲಿವೆ. ಒಂದು ವರ್ಷದೊಳಗೆ ಕಾರ್ಗೋ ಸೇವೆಗೆ 500 ವಾಹನಗಳು ಬರಲಿದ್ದು, ನಗರದ ಪೀಣ್ಯ ಬಸ್ ಸ್ಟಾಂಡ್ ಈಗ ಕಾರ್ಗೋ ಡಿಪೋ ಆಗಲಿದೆ ಎಂದು ಇದೇ ವೇಳೆ ಸಾರಿಗೆ ಸಚಿವರು ಮಾಹಿತಿ ನೀಡಿದರು.
ಕಾರ್ಗೋ ವಾಹನದಲ್ಲಿ ಏನೇನು ಇರಲಿದೆ.?
ಕಾರ್ಗೋ ವಾಹನಗಳಲ್ಲಿ ಜಿಪಿಎಸ್ ಇದೆ, ಇನ್ಶೂರೆನ್ಸ್ ಇರಲಿದೆ, ಮೊಬೈಲ್ ಟ್ರಾಕಿಂಗ್ ಇರಲಿದೆ. ಸಾರ್ವಜನಿಕರು ಯಾವುದಾರೊಂದು ಪಾರ್ಸೆಲ್ ಕಳುಹಿಸಿದರೆ ಅದನ್ನ ಆನ್ ಲೈನ್ ಮೂಲಕ ಟ್ರ್ಯಾಕ್ ಮಾಡಬಹುದಾಗಿದ್ದು, ನೆಮ್ಮದಿಯಿಂದ ಕೆಎಸ್ಸಾರ್ಟಿಸಿ ಕಾರ್ಗೋ ಸೇವೆ ಬಳಸಬಹುದು ಎಂದು ಕೆಎಸ್ಸಾರ್ಟಿಸಿ ಎಂಡಿ ಅನ್ಬುಕುಮಾರ್ ಮಾಹಿತಿ ನೀಡಿದರು.
ಕೆಸ್ಸಾರ್ಟಿಸಿ ಕಾರ್ಗೋ ಬುಕಿಂಗ್ ಮಾಡುವುದು ಹೇಗೆ.?
ಕೆಸ್ಸಾರ್ಟಿಸಿ ಕಾರ್ಗೋ ಬುಕ್ ಮಾಡಬೇಕೆಂದರೆ ಎರಡು ರೀತಿಯಲ್ಲಿ ಬುಕ್ ಮಾಡಬಹುದು. ಮೊದಲನೆಯದ್ದು ಗ್ರಾಹಕರು 080-26252625 ಕರೆ ಮಾಡಿ ಬುಕ್ ಮಾಡಬಹುದು. ಮತ್ತೊಂದು ವಿಧಾನ ಅಂದರೆ [email protected]ಗೆ ಇಮೇಲ್ ಮೂಲಕ ಮಾಡಬಹುದಾಗಿದೆ. ಶೀಘ್ರದಲ್ಲೇ ಕೆಎಸ್ಸಾರ್ಟಿಸಿ ಕಾರ್ಗೋ ಸೇವೆಗೆ ಪ್ರತ್ಯೇಕ ಆಪ್ ಬರಲಿದೆ.
ಕೆಎಸ್ಸಾರ್ಟಿಸಿ ಕಾರ್ಗೋ ದರ ಎಷ್ಟಿರಲಿದೆ.?
ಕೆಎಸ್ಆರ್ಟಿಸಿ ಕಾರ್ಗೋ ಟ್ರಕ್ ದರ
100 ಕಿಲೋ ಮೀಟರ್ವರೆಗೆ
ಪ್ರತಿ ಕಿ.ಮೀ ದರ 50 ರೂಪಾಯಿ
ಕನಿಷ್ಠ ಕಿಲೋ ಮೀಟರ್ 100 ಕಿ.ಮೀ.
ಗರಿಷ್ಠ ಅವಧಿ 12 ಗಂಟೆ
ಕನಿಷ್ಠ ದರ 5,000 ರೂಪಾಯಿ
1 ರಿಂದ 200 ಕಿಲೋ ಮೀಟರ್ವರೆಗೆ
ಪ್ರತಿ ಕಿ.ಮೀ ದರ 40 ರೂಪಾಯಿ
ಕನಿಷ್ಠ ಕಿಲೋ ಮೀಟರ್ 200 ಕಿ.ಮೀ
ಗರಿಷ್ಠ ಅವಧಿ 24 ಗಂಟೆ
ಕನಿಷ್ಠ ದರ 8,000 ರೂಪಾಯಿ
200 ಕಿ.ಮೀ ಮೆಲ್ಪಟ್ಟು ಹೆಚ್ಚುವರಿ ಕಿ.ಮೀಗೆ
ಪ್ರತಿ ಕಿ.ಮೀ ದರ 35 ರೂಪಾಯಿ
ಕನಿಷ್ಠ ಕಿಲೋ ಮೀಟರ್ 200 ಕಿಮೀಗಿಂತ ಹೆಚ್ಚು
ಗರಿಷ್ಠ ಅವಧಿ 24 ಗಂಟೆ
ಕನಿಷ್ಠ ದರ 8,000 ರೂಪಾಯಿ