ಮೈಸೂರು, (www.thenewzmirror.com) ;
ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರೆಗೆ ದಿನಗಣನೆ ಆರಂಭವಾಗಿದೆ. ಅಂಬಾರಿ ಹೊರಲು ಕಾಡಿನಿಂದ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ 9 ಆನೆಗಳನ್ನ ಈಗಾಗಲೇ ಅರಮನೆಯಲ್ಲಕ ಅದ್ಧೂರಿ ಸ್ವಾಗತನೂ ಸಿಕ್ಕಿದೆ.
ಕಾಡಿನಿಂದ ಬಂದ ಅಭಿಮನ್ಯು ನೇತೃತ್ವದ ಆನೆಗಳ ತೂಕವನ್ನ ಧನ್ವಂತ್ರಿ ರಸ್ತೆಯಲ್ಲಿರೋ ಶ್ರೀನಿವಾಸ ವೇ ಬ್ರಿಡ್ಜ್‌ನಲ್ಲಿ ಪರೀಕ್ಷೆ ಮಾಡಲಾಯ್ತು. ಕಳೆದ ಬಾರಿಯಂತೆ ಈ ಬಾರಿಯೂ ಅಭಿಮನ್ಯುವಿಮ ತೂಕ ಇತರ ಎಲ್ಲ ಆನೆಗಳಿಗಿಂತ ಹೆಚ್ಚಾಗಿತ್ತು. ಈ ಬಾರಿ ಅಭಿಮನ್ಯುವಿನ ತೂಕ ಬರೋಬ್ಬರಿ 5560 ಕೆಜಿ ತೂಕ ಇತ್ತು.
ಉಳಿದ ಆನೆಗಳಾದ ವರಲಕ್ಷ್ಮಿ 3495, ಭೀಮ 4945, ಏಕಲವ್ಯ 4730, ಲಕ್ಷ್ಮಿ 2480, ರೋಹಿತ್ 3625, ಗೋಪಿ 4970, ಕಂಜನ್ 4515, ಧನಂಜಯ 5155 ಕೆಜಿ ತೂಕ ಹೊಂದಿದ್ದವು.
ಕಾಡಿನಿಂದ ನಾಡಿಗೆ ಆಗಮಿಸಿರುವ ದಸರಾ ಗಜಪಡೆಗೆ ಜಂಬೂ ಸವಾರಿ ಮೆರವಣಿಗೆಗಾಗಿ ತಾಲೀಮು ಈಗಾಗಲೇ ಶುರುವಾಗಿದೆ. ಬೆಳಗ್ಗೆ ಮತ್ತು ಸಂಜೆ ಎರಡು ಸಮಯ ಅರಮನೆಯಿಂದ ಬನ್ನಿಮಂಟಪದವರೆಗೆ ತಾಲೀಮು ನಡೆಸಲಾಗುತ್ತಿದೆ. ಆನೆಗಳ ತೂಕದ ಆಧಾರದ ಮೇಲೆ ಪ್ರತಿನಿತ್ಯ ಪೌಷ್ಟಿಕ ಆಹಾರ ಪದಾರ್ಥ ನೀಡಿ, ತಾಲೀಮು ನಡೆಸೋಕೆ ಸಿದ್ಧತೆಗಳನ್ನ ಮಾಡಿಕೊಳ್ಳಲಾಗಿದೆ.