ಬೆಂಗಳೂರು, (www.thenewzmirror.com) ;
ಪರ್ಮಿಟ್ ವಾಹನಗಳು (Permit Vehicle) ಕಡ್ಡಾಯವಾಗಿ ಪ್ಯಾನಿಕ್ ಬಟನ್, GPS ಡಿವೈಸ್ ಅಳವಡಿಕೆ ವಿಚಾರದಲ್ಲಿ ಸಾಕಷ್ಟು ಗೊಂದಲಗಳಿಬೆ. ಒಂದು ಕಡೆ ಸರ್ಕಾರ ಪ್ಯಾನಿಕ್ ಬಟನ್ ಕಡ್ಡಾಯ ಮಾಡಿದೆ ಆದರೆ ಪ್ಯಾನಿಕ್ ಬಟನ್ ಅಳವಡಿಕೆ ವಿಚಾರದಲ್ಲಿ ಅನುಮತಿ ಪಡೆದಿರುವ ಕಂಪನಿಗಳ ನಡೆಗೆ ವಾಹನ ಮಾಲೀಕರು ಗರಂ ಆಗುತ್ತಿದ್ದಾರೆ.
ರಾಜ್ಯ ಸಾರಿಗೆ ಇಲಾಖೆಯಿಂದ ಅನುಮತಿ ಪಡೆದಿರುವ ಕಂಪನಿಗಳು ಪ್ಯಾನಿಕ್ ಬಟನ್ ಹಾಗೂ ಜಿಪಿಎಸ್ ಸಾಧನ ಅಳವಡಿಕೆ ಮಾಡಿಸಲು ತೆರಳಿದ ಕಂಪನಿಗಳಿಂದ ಹೊಸ ಹೊಸ ಡಿಮ್ಯಾಂಡ್ ಮಾಡುತ್ತಿದ್ದಾರಂತೆ. ಸರ್ಕಾರದ ಆದೇಶವಿದೆ ಅದರಂತೆ ನಾವು ಅಳವಡಿಕೆ ಮಾಡುತ್ತಿದ್ದೇವೆ. ನಾವು ಹೇಳಿದಷ್ಟು ಡಿವೈಸ್ ಹಾಕಿಸಲೇ ಬೇಕೆಂದು ಫರ್ಮಾನು ಹಾಕುತ್ತಿದ್ದಾರಂತೆ.
ಸರ್ಕಾರಿ ಆದೇಶದ ಪ್ರಕಾರ ದೇಶದ ಎಲ್ಲಾ ಸಾರ್ವಜನಿಕ ಸೇವಾ ವಾಹನಗಳಲ್ಲಿ/ಪರ್ಮಿಟ್ ವಾಹನಗಳಿಗೆ GPS ಡಿವೈಸ್ ಹಾಗೂ ಪ್ಯಾನಿಕ್ ಬಟನ್ ಅಳವಡಿಸಬೇಕಾಗಿದೆ. ಸಾಮಾನ್ಯವಾಗಿ ವಾಹನಕ್ಕೆ ಒಂದೇ ಅಲ್ವಾ ಪ್ಯಾನಿಕ್‌ಬಟನ್ ಅಂತ ಹೋದ್ರೆ ಕಂಪನಿಗಳು ಒಂದಲ್ಲ ಸರ್ ಐದು ಸೀಟಿದ್ದರೆ 3, ಏಳು ಸೀಟಿದ್ದರೆ 5 ಒಂಭತ್ತು ಸೀಟಿದ್ದರೆ 7 ಪ್ಯಾನಿಕ್ ಬಟನ್ ಗಳನ್ನ ಅಳವಡಿಸಬೇಕಂತೆ.
ಪ್ಯಾನಿಕ್ ಬಟನ್ ಹೇಗಿರಬೇಕು.?
ಮಹಿಳಾ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಸಾರ್ವಜನಿಕ ಸೇವಾ ವಾಹನಗಳಿಗೆ ಪ್ಯಾನಿಕ್ ಬಟನ್ ಕಡ್ಡಾಯ ಮಾಡಲಾಗಿದೆ. ಪ್ರಯಾಣಿಕರಿಗೆ ಏನಾದರೂ ಸಮಸ್ಯೆ ಆದರೆ ಸಮಸ್ಯೆಗೆ ಒಳಗಾಗೋರಿಗೆ ಕೈಗೆ ಸಿಗುವಂತೆ ಇರಬೇಕು. ಹಾಗಂಥ ಪ್ರತಿ ಸೀಟಿನ ಅಂತ್ಯ(END) ನಲ್ಲಿ ಇರಲೇಬೇಕು ಅಂತ ಏನಿಲ್ಲ.
ಕಂಪನಿಗಳು ಹೇಳೋದು ಏನು.?
ರಾಜ್ಯ ಸಾರಿಗೆ ಇಲಾಖೆಯಿಂದ ಅನುಮತಿ ಪಡೆದಿರುವ ಸಂಸ್ಥೆಗಳು ಹೇಳೋದೇ ಬೇರೆ. ನ್ಯೂಝ್ ಮಿರರ್ ಗೆ ಸಿಕ್ಕಿರುವ ಮಾಹಿತಿ ಪ್ರಕಾರ ಐದು ಸೀಟಿನ ಕಾರಿಗೆ 3 ಪ್ಯಾನಿಕ್ ಬಟನ್ ಅಳವಡಿಸಬೇಕಿದೆ. ಇದಕ್ಕೆ 13093 ರೂಪಾಯಿ ಆಗಲಿದೆ. ಏಳು ಸೀಟಿನ ಕಾರಿಗೆ 5 ಪ್ಯಾನಿಕ್ ಬಟನ್ ಅಳವಡಿಸಬೇಕಾಗಿದ್ದು ಇದಕ್ಕೆ ಹತ್ರತ್ರ 15 ಸಾವಿರ ಹಣ ಆಗಲಿದೆ. ಹೀಗೆ ಸೀಟಿನ ಆಧಾರದ ಮೇಲೆ ಪ್ಯಾನಿಕ್ ಬಟನ್ ಅಳವಡಿಸಬೇಕಾಗಿರೋದ್ರಿಂದ ಹೆಚ್ಚುವರಿ ಪ್ರತಿ ಪ್ಯಾನಿಕ್ ಬಟನ್ ಗೆ ಐದು ನೂರರಿಂದ ಏಳು ನೂರು ರೂಪಾಯಿ ಆಗಲಿದೆ. ಸರ್ಕಾರದ ಆದೇಶದ ಪ್ರಕಾರ ಅಳವಡಿಕೆ ಮಾಡುತ್ತಿದ್ದೇವೆ ಎಂದು SN Technologies ಕಂಪನಿಯವರು ಮಾಹಿತಿ ನೀಡುತ್ತಿದ್ದಾರೆ.
ವಾಹನ ಮಾಲೀಕರಿಗೆ ಶಾಕ್ ಮೇಲೆ ಶಾಕ್..!!
ಇನ್ನು ಎಫ್ ಸಿ ಮಾಡಿಸುವ ಮುನ್ನ ಪ್ಯಾನಿಕ್ ಬಟನ್ ಹಾಗೂ ಜಿಪಿಎಸ್ ಸಾಧನ ಅಳವಡಿಕೆ ಮಾಡಬೇಕಿರುವುದರಿಂದ ಸಾಲ ಸೋಲ ಮಾಡಿ ವಾಹನ ಖರೀದಿಸಿ ವಾಹನ ಓಡಿಸುತ್ತಿರುತ್ತಾರೆ. ಹೀಗಿರುವಾಗ ಎರಡು ತಿಂಗಳ ಲಾಭಾಂಶದ ಹಣವನ್ನ ಪ್ಯಾನಿಕ್ ಬಟನ್, ಜಿಪಿಎಸ್ ಸಾಧನ ಅಳವಡಿಸೋಕೆ ಖರ್ಚು ಮಾಡಬೇಕಿರೋದ್ರಿಂದ ಕಷ್ಟವಾಗುತ್ತಿದೆ.
ಖಾಸಗಿ ವಾಹನ ಮಾಲೀಕರ ಒಕ್ಕೂಟ ಹೇಳುವುದು ಏನು.?
ಪ್ಯಾನಿಕ್ ಬಟನ್ ಅಳವಡಿಕೆ ವಿಚಾರದಲ್ಲಿ ಕೊಂಚ ಗೊಂದಲವಿದೆ. ಸಾರಿಗೆ ಇಲಾಖೆವತಿಯಿಂದಲೇ ಆಪ್ ಒಂದನ್ನ ಸಿದ್ದಪಡಿಸಿ ಮಾನಿಟರ್ ಮಾಡುವಂತೆ ಆಗಲಿ. ಪ್ಲೇಸ್ಟೋರ್ ನಲ್ಲಿ ಲಭ್ಯವಾಗುವ ರೀತಿ ಆಪ್ ಸಿದ್ದಪಡಿಸಿ ಪ್ರಯಾಣಿಕರು ಡೌನ್ ಲೋಡ್ ಮಾಡಿಕೊಂಡರೆ ಅನುಕೂಲವಾಗಲಿದೆ. ಹಾಗೆನೇ ಬಹುತೇಕ ಬಸ್ ಗಳು ಹಳೆಯದಾಗಿರೋದ್ರಿಂದ ಪ್ಯಾನಿಕ್ ಬಟನ್ ಅಳವಡಿಕೆ ಮಾಡಬೇಕಂದರೆ ವೈಯರಿಂಗ್ ಬಸ್ ನ ಒಳಗೆ ಮಾಡಲು ಕಷ್ಟಸಾಧ್ಯ. ಒಂದು ವೇಳೆ ಬಸ್ ನ ಹೊರಭಾಗದಲ್ಲಿ ವೈಯರಿಂಗ್ ಮಾಡಿದ್ದಲ್ಲೆ ಮುಂದೆ ಏನಾದರೂ ಅನಾಹುತ ಆದರೆ ಅಥವಾ ಯಾರಾದರೂ ಪ್ರಯಾಣಿಕರು ವೈಯರ್ ಕಟ್ ಮಾಡಿದರೆ ಯಾರು ಹೊಣೆ. ಈ ಪ್ರಶ್ನೆಗೆ ಸಾರಿಗೆ ಇಲಾಖೆ ಉತ್ತರ ಕೊಡಬೇಕಿದೆ ಎಂದು ಖಾಸಗಿ ವಾಹನ ಮಾಲೀಕ ಒಕ್ಕೂಟದ ಅಧ್ಯಕ್ಷ ನಟರಾಜ ಶರ್ಮಾ ತಮ್ಮ ಅಭಿಪ್ರಾಯ ಪಡ್ತಿದ್ದಾರೆ.
ಖಾಸಗಿ ವಾಹನ ಆಪರೇಟರ್ಸ್ ಅಸೋಸಿಯೇಷನ್ ಹೇಳುವುದು ಏನು.?
ಪ್ಯಾನಿಕ್ ಬಟನ್ ಆಳವಡಿಕೆ ವಿಚಾರದಲ್ಲಿ ಯಾವುದೇ ತಕರಾರು ಇಲ್ಲ. ಆದರೆ ಮನಸ್ಸಿಗೆ ಬಂದಂತೆ ಹಣ ವಸೂಲಿ ಮಾಡುತ್ತಿದ್ದಾರೆ. ಸಾಲ ಸೋಲ ಮಾಡಿ ಕಾರು ಖರೀದಿ ಮಾಡಿ ಜೀವನದ ಬಂಡಿ ಸಾಗಿಸುತ್ತಿರುತ್ತಾರೆ. ಸರ್ಕಾರ ನಿಗದಿ ಮಾಡಿರುವ ಹಣ ಕಟ್ಟುತ್ತೇವೆ. ಆದರೆ ಮೂರುಪಟ್ಟು, ನಾಲ್ಕು ಪಟ್ಟು ಹಣ ವಸೂಲಿ ಮಾಡುವುದಕ್ಕೆ ಕೂಡಲೇ ಕಡಿವಾಣ ಹಾಕಲಿ. ಇಲ್ಲ ಅಂದೃ ಸರ್ಕಾರದ ವತಿಯಿಂದಲೇ ಉಚಿತವಾಗಿ ಅಳವಡಿಕೆ ಮಾಡುವ ಕೆಲಸ ಆದರೆ ಉತ್ತಮ ಎಂದು ಕರ್ನಾಟಕ ಸ್ಟೇಟ್ ಟ್ರಾವೆಲ್ ಆಪರೇಟರ್ಸ್ ಅಸೋಸಿಯೇಷನ್ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ ಅಭಿಪ್ರಾಯ ಪಡ್ತಿದ್ದಾರೆ.