Panic Button | ಪ್ಯಾನಿಕ್ ಬಟನ್ 7599 ಅಲ್ಲ 13093 ರೂ. | ಮನಸ್ಸಿಗೆ ಬಂದಂತೆ ವಸೂಲಿ ಮಾಡೋಕೆ RTO ಅನುಮತಿ ಕೊಟ್ಟಿದ್ಯಾ.?

ಬೆಂಗಳೂರು, (www.thenewzmirror.com) ;

ಪರ್ಮಿಟ್ ವಾಹನಗಳು (Permit Vehicle) ಕಡ್ಡಾಯವಾಗಿ ಪ್ಯಾನಿಕ್ ಬಟನ್, GPS ಡಿವೈಸ್ ಅಳವಡಿಕೆ ಮಾಡಬೇಕೆಂಬ ನಿಯಮವನ್ನ ಕೇಂದ್ರ ಸರ್ಕಾರ ಜಾರಿಗೆ ತಂದಿದೆ ಅದರಂತೆ ಆಯಾ ರಾಜ್ಯ ಸರ್ಕಾರಗಳು ಕೇಂದ್ರದ ನಿಯಮವನ್ನ ಜಾರಿಗೆ ತರುವ ನಿಟ್ಟಿನಲ್ಲಿ ಕ್ರಮವನ್ನ ವಹಿಸುತ್ತಿವೆ.

RELATED POSTS

ಇದರ ಜಾಡು ಹಿಡಿದ thenewzmirror ಪ್ಯಾನಿಕದ ಬಟನ್ ಹಾಗೂ ಜಿಪಿಎಸ್ ಸಾಧನ ಅಳವಡಿಕೆ‌ ವಿಚಾರದಲ್ಲಿ ಆಗುತ್ತಿರೋ ಸಮಸ್ಯೆಗಳ ಕುರಿತು ವಿಸ್ತಾರವಾದ ವರದಿ ಪ್ರಸಾರ ಮಾಡಿತ್ತು. ಹತ್ರತ್ರ ಮೂರು ಸಾವಿರಕ್ಕರ ಸಿಗುವ ಯೂನಿಟ್ ಗಳಿಗೆ ರಾಜ್ಯ ಸಾರಿಗೆ ಇಲಾಖೆ ಅನುಮತಿ ಕೊಟ್ಟಿರುವ ಕಂಪನಿಗಳು 7599 ರೂ ಗೆ ಅಳವಡಿಕೆ ಮಾಡುತ್ತಿವೆ ಎಂದು ವರದಿ ಪ್ರಕಟಿಸಿತ್ತು.

13 ಕಂಪನಿಗಳ ಪೈಕಿ 12 ಕಂಪನಿಗಳು ಅಂತಿಮವಾಗಿ ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯಿಂದ ಪ್ಯಾನಿಕ್ ಬಟನ್ ಹಾಗೂ ಜಿಪಿಎಸ್ ಸಾಧನ ಅಳವಡಿಸೋಕೆ ಅನುಮತಿ ಪಡೆದಿವೆ. ಸ್ವತಃ ಸಾರಿಗೆ ಇಲಾಖೆ ಅಪರ ಆಯುಕ್ತ(ಆಡಳಿತ)ರ 7599 ರೂ ಗೆ ಗುಣಮಟ್ಟದ ಸಾಧನ ಅಳವಡಿಸಬೇಕೆಂದು ಸೂಚಿಸಿದ್ದಾರಂತೆ. ಇದರ ಹೊರತಾಗಿಯೂ ಪ್ರತಿ ವಾಹನಕ್ಕೆ ಪ್ಯಾನಿಕ್ ಬಟನ್ ಹಾಗೂ ಜಿಪಿಎಸ್ ಸಾಧನ ಅಳವಡಿಸೋಕೆ ಅನುಮತಿ ಪಡೆದಿರುವ ಕಂಪನಿಗಳು 7599 ರ ಬದಲಾಗಿ 13093 ರೂ ವಸೂಲಿ ಮಾಡುತ್ತಿವೆ.

ಐದು ಸೀಟರ್ ಗಾಡಿಗೆ 3, 7 ಸೀಟರ್ ನ ಕಾರು ಆದರೆ ಅದಕ್ಕೆ 5 ಪ್ಯಾನಿಕ್ ಬಟನ್ ಅಳವಡಿಸಬೇಕು. ಐದು ಸೀಟಿನ ಕಾರಿಗೆ ಒಂದು ಜಿಪಿಎಸ್ ಹಾಗೂ ಮೂರು ಪ್ಯಾನಿಕ್ ಬಟನ್ ಅಳವಡಿಸಬೇಕೆಂದರೆ 14000 ಕ್ಕಿಂತಲೂ ಹೆಚ್ಚು ಹಣವನ್ನ ನೀಡಬೇಕಂತೆ.

13093 ರೂ ಕೊಟೇಷನ್ ನೀಡಿರುವುದು.!

ಅರೇ ಸಾರಿಗೆ ಇಲಾಖೆ ಕೊಟ್ಟಿರುವ ಆದೇಶನೇ ಒಂದು ಆದರೆ ಕಂಪನಿಗಳು ವಾಹನ ಮಾಲೀಕರಿಂದ ವಸೂಲಿ ಮಾಡುತ್ತಿರಿವ ದರವೇ ಮತ್ತೊಂದು. ಇದೆಲ್ಲ ಗೊತ್ತಿದ್ದರೂ ಸಾರಿಗೆ ಇಲಾಖೆ ಮೌನಕ್ಕೆ ಶರಣಾಗಿರೋದು ಯಾಕೆ ಎಂಬ ಪ್ರಶ್ನೆಯನ್ನ ವಾಹನ ಮಾಲೀಕರು ಮಾಡ್ತಿದ್ದಾರೆ.

ಇನ್ನು 2023 ರ ಡಿಸೆಂಬರ್ 1 ರಿಂದಲೇ ರಾಜ್ಯದ ಪರ್ಮಿಟ್ ವಾಹನಗಳಿಗೆ ಪ್ಯಾನಿಕ್ ಬಟನ್ (Panic Button) ಹಾಗೂ ಲೋಕೇಷನ್ ಟ್ರಾಕಿಂಗ್ ಡಿವೈಸ್ ಅಳವಡಿಸುವುದನ್ನು ಕಡ್ಡಾಯಗೊಳಿಸಿದೆ. ಸಾಕಷ್ಟು ಅಳೆದು ತೂಗಿ ರಾಜ್ಯ ಸಾರಿಗೆ ಇಲಾಖೆ 12 ಕಂಪನಿಗಳಿಗೆ ಅನುಮೋದನೆ ನೀಡಿದೆ. ಆದರೆ ಅನುಮತಿ ಪಡೆದಿರೋ ಕಂಪನಿಗಳು ಮನಸ್ಸಿಗೆ ಬಂದಂತೆ ದರ ವಸೂಲಿ ಮಾಡುತ್ತಿವೆ. ಒಂದು ಕಡೆ ಹೆಚ್ಚು ದರ ಮತ್ತೊಂದು ಕಡೆ ಪ್ಯಾನಿಕ್ ಬಟನ್, ಜಿಪಿಎಸ್ ಸಾಧನ ಅಳವಡಿಕೆ ಮಾಡದಿದ್ದರೆ ಎಫ್ ಸಿ ಮಾಡೋದಿಲ್ಲ ಎಂಬ RTO ನಿಯಮ. ಇದರ ನಡುವೆ ಸಿಲುಕಿದ ವಾಹನ ಮಾಲೀಕರು ಪ್ರತಿ ದಿನ ಕಣ್ಣೀರು ಹಾಕುತ್ತಿದ್ದಾರೆ.

ದೇಶದ ಎಲ್ಲಾ ಸಾರ್ವಜನಿಕ ಸೇವಾ ವಾಹನಗಳಲ್ಲಿ/ಪರ್ಮಿಟ್ ವಾಹನಗಳಿಗೆ GPS ಡಿವೈಸ್ ಹಾಗೂ ಪ್ಯಾನಿಕ್ ಬಟನ್ ಅಳವಡಿಸಬೇಕಿರೋದ್ರಿಂದ ಮಾರುಕಟ್ಟೆಗೂ ಹೆಚ್ಚು ದರ ವಾಹನ ಮಾಲೀಕರಿಂದ ಪಡೆಯುತ್ತಿರೋದು ಸಾರಿಗೆ ಇಲಾಖೆಯ ಗಮನಕ್ಕೆ ಬಂದಿಲ್ಲ ಅಂತ ಏನಿಲ್ಲ. ನಾವು ಫಿಕ್ಸ್ ಮಾಡಿರೋದೇ ಒಂದು ದರ, ಕಂಪನಿಗಳು ವಸೂಲಿ ಮಾಡುತ್ತಿರುವುದೇ ಮತ್ತೊಂದು ದರ ಅಂತ ಗೊತ್ತಿದ್ದರೂ ಏನೂ ಗೊತ್ತಿಲ್ಲದಂತೆ ಇರುವ ಅಧಿಕಾರಿಗಳನ್ನ ವಾಹನ ಮಾಲೀಕರು ಪ್ರಶ್ನೆ ಮಾಡುತ್ತಿದ್ದಾರೆ.

ಸಾರಿಗೆ ಇಲಾಖೆ ಆದೇಶದ ಪ್ರತಿ

ಇನ್ನು ಪ್ಯಾನಿಕ್ ಹಾಗೂ ಜಿಪಿಎಸ್ ಸಾಧನ ಅಳವಡಿಕೆ ಅನುಷ್ಠಾನದ ಜವಾಬ್ದಾರಿ ಹೊತ್ತಿರುವುದು ಸಾರಿಗೆ ಇಲಾಖೆ ಅಪರ ಆಯುಕ್ತ(ಆಡಳಿತ) ಉಮಾಶಂಕರ್ ಪಿ‌. ಅವರನ್ನ ಈ ಬಗ್ಗೆ ಕೇಳಿದರೆ ನಾವು ಸೂಚಿಸಿರುವ ದರವನ್ನೇ ಪಡೆಯುತ್ತಿದ್ದಾರೆ  ಹೆಚ್ಚಿನ ದರ ವಸೂಲಿ ಮಾಡುತ್ತಿರುವ ಕುರಿತು ಯಾವುದೇ ದೂರುಗಳು ಬಂದಿಲ್ಲ. ಒಂದು ವೇಳೆ ಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ಸಮಜಾಯಿಷಿ ನೀಡುತ್ತಿದ್ದಾರೆ.

ಇನ್ನು ಪ್ಯಾನಿಕ್ ಬಟನ್ ಹಾಗೂ ಜಿಪಿಎಸ್ ಸಾಧನ ಅಳವಡಿಕೆಗೆ ಅನುಮತಿ ಪಡೆಸಿರುವ 12 ಕಂಪನಿಗಳು ಗುಣಮಟ್ಟದ ಸಾಧನ ಅಳವಡಿಕೆ ಮಾಡುತ್ತೀವಿ ಅಂತ ಪ್ರತಿ ಯೂನಿಟ್ ಗೆ 7599 ರೂ ವಸೂಲಿ ಮಾಡಬೇಕು. ಆದರೆ ಇದಕ್ಕೆ ಬದಲಾಗಿ 13093 ರೂ ಅಳವಡಿಕೆಗೆ ವಸೂಲಿ ಮಾಡುತ್ತಿರುವ ಕುರಿತ ದಾಖಲೆ ನ್ಯೂಝ್ ಮಿರರ್ ಗೆ ಲಭ್ಯ ವಾಗಿದೆ. ಅಷ್ಟೆ ಅಲ್ಲದೇ ಇದಕ್ಕಿಂತಲೂ ಹೆಚ್ಚು ವಸೂಲಿ ಮಾಡುತ್ತಿರುವ ಕುರಿತ ಆಡಿಯೋ ಕೂಡ ಲಭ್ಯವಾಗಿದೆ‌.

ಪ್ಯಾನಿಕ್ ಬಟನ್ ಹಾಗೂ ಜಿಪಿಎಸ್ ಸಾಧನ ಅಳವಡಿಕೆ ವಿಚಾರದಲ್ಲಿ ನಿರ್ಭಯ ಯೋಜನೆಯಡು ಅನುದಾನ ರಾಜ್ಯ ಸರ್ಕಾರಗಳಿಗೆ ಬಂದಿದೆ. ಅದೇ ಅನುದಾನದಲ್ಲಿ ಪ್ಯಾನಿಕ್ ಬಟನ್ ಹಾಗೂ ಜಿಪಿಎಸ್ ಸಾಧನ ಅಳವಡಿಕೆ ಮಾಡುವ ಕೆಲಸ ಆಗಬೇಕು ಎಂದು ವಾಹನ ಮಾಲೀಕರು ಮನವಿ ಮಾಡುತ್ತಿದ್ದಾರೆ‌.

ಸದ್ಯ ಪ್ಯಾನಿಕ್ ಬಟನ್ ಹಾಗೂ ಜಿಪಿಎಸ್ ಸಾಧನ ಅಳವಡಿಕೆ ವಿಚಾರದಲ್ಲಿ ವಾಹನ ಮಾಲೀಕರಿಂದ ಹಗಲು ದರೋಡೆ ಆಗುತ್ತಿದ್ದು ಇದಕ್ಕೆ ಕೂಡಲೇ ಸಾರಿಗೆ ಇಲಾಖೆ ಬ್ರೇಕ್ ಹಾಕಬೇಕಿದೆ.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist