RTO SCAM..! | ಪ್ಯಾನಿಕ್ ಬಟನ್ ಅಳವಡಿಕೆ ವಿಚಾರದಲ್ಲಿ ಹಗಲು ದರೋಡೆ..! ಅಪರ ಸಾರಿಗೆ ಆಯುಕ್ತರ ಮೌನಕ್ಕೆ ವಾಹನ ಮಾಲೀಕರ ವಿರೋಧ..!

ಬೆಂಗಳೂರು, (www.thenewzmirror.com) ;

ಪ್ಯಾನಿಕ್ ಬಟನ್ ಹೆಸರಲ್ಲಿ ಹಗಲು ದರೋಡೆ ಆಗುತಿದ್ಯಾ ಎನ್ನುವ ಅನುಮಾನ ಕಾಡುತ್ತಿದೆ. ಪ್ಯಾನಿಕ್ ಬಟನ್, ಲೊಕೆಷನ್ ಟ್ರ್ಯಾಕಿಂಗ್‌ ಡಿವೈಸ್ ಅಳವಡಿಕೆಗೆ 7,599 ರೂ ಫಿಕ್ಸ್ ಮಾಡಿರುವುದು ವಾಹನ ಸವಾರರ ಆಕ್ರೋಶಕ್ಕೆ ಕಾರಣವಾಗಿದೆ. ಅಷ್ಟೇ ಅಲ್ದೇ ಡಿವೈಸ್ ಅಳವಡಿಸದಿದ್ರೇ ಎಫ್‌ಸಿ ನವೀಕರಣವಾಗಲ್ಲ ಅಂತಾನೂ ಸಾರಿಗೆ ಇಲಾಖೆ ಆದೇಶ ಹೊರಡಿಸಿದ್ದು, ರಾಜ್ಯ ಖಾಸಗಿ ಸಾರಿಗೆ ಸಂಘಟನೆಗಳ ವಿರೋಧ ವ್ಯಕ್ತವಾಗುತ್ತಿದೆ. ಹಾಗೆನೇ ಆರ್ ಟಿಓ ಇಲಾಖೆ ನಡೆಗೆ ವಿರುದ್ಧ ಸಾರಿಗೆ ಸಚಿವರಿಗೂ ಪತ್ರ ಬರೆಯಲಾಗಿದೆ.

RELATED POSTS

ಪರ್ಮಿಟ್ ವಾಹನಗಳು (Permit Vehicle) ಕಡ್ಡಾಯವಾಗಿ ಪ್ಯಾನಿಕ್ ಬಟನ್, GPS ಡಿವೈಸ್ ಅಳವಡಿಕೆ ಮಾಡಬೇಕಿದೆ. ಮಹಿಳಾ ಪ್ರಯಾಣಿಕರ ಸುರಕ್ಷತೆಗೆ ಸಾರಿಗೆ ಇಲಾಖೆ ಮಹತ್ವದ ಹೆಜ್ಜೆಯಿಟ್ಟಿದ್ದು, ಕಳೆದ ವರ್ಷ ಅಂದರೆ 2023 ರ ಡಿಸೆಂಬರ್ 1 ರಿಂದಲೇ ರಾಜ್ಯದ ಪರ್ಮಿಟ್ ವಾಹನಗಳಿಗೆ ಪ್ಯಾನಿಕ್ ಬಟನ್ (Panic Button) ಹಾಗೂ ಲೋಕೇಷನ್ ಟ್ರಾಕಿಂಗ್ ಡಿವೈಸ್ ಅಳವಡಿಸುವುದನ್ನು ಕಡ್ಡಾಯಗೊಳಿಸಿದೆ.

ಪ್ಯಾನಿಕ್ ಬಟನ್, ಜಿಪಿಎಸ್ ಯೂನಿಟ್ ಅಳವಡಿಕೆಗೆ ಅನುಮತಿ ಕೊಟ್ಟಿರುವ ಆದೇಶ

ದೆಹಲಿಯ ಕಾಲೇಜು ವಿದ್ಯಾರ್ಥಿನಿ ಮೇಲೆ ಬಸ್‌ನಲ್ಲಿ ನಡೆದ ಅತ್ಯಾಚಾರ ಪ್ರಕರಣದ ಬಳಿಕ ಕೇಂದ್ರಸರ್ಕಾರ ದೇಶದ ಎಲ್ಲಾ ಸಾರ್ವಜನಿಕ ಸೇವಾ ವಾಹನಗಳಲ್ಲಿ/ಪರ್ಮಿಟ್ ವಾಹನಗಳಿಗೆ GPS ಡಿವೈಸ್ ಹಾಗೂ ಪ್ಯಾನಿಕ್ ಬಟನ್ ಅಳವಡಿಸಲು ಸೂಚಿಸಿತ್ತು. ಈ ಹಿನ್ನೆಲೆ ಇದೇ ತಿಂಗಳಿನಿಂದ ಪರ್ಮಿಟ್ ವಾಹನಗಳಿಗೆ ಪ್ಯಾನಿಕ್ ಬಟನ್ ಹಾಗೂ ಜಿಪಿಎಸ್ ಡಿವೈಸ್ ಅಳವಡಿಸಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ 60:40 ಅನುಪಾತದ ಸಹಭಾಗಿತ್ವದಲ್ಲಿ ಈ ಯೋಜನೆ ಜಾರಿಗೆ 2035.90 ಲಕ್ಷ ರೂ.ಗಳ ವೆಚ್ಚಕ್ಕೆ ಸರ್ಕಾರದಿಂದ ಅನುಮೋದನೆಯೂ ಸಿಕ್ಕಿದೆ.

ಸದ್ಯ ರಾಜ್ಯದಲ್ಲಿ 12ಕಂಪನಿಗಳಿಗೆ ಸಾರಿಗೆ ಇಲಾಖೆ ಪ್ಯಾನಿಕ್ ಬಟನ್ ಹಾಗೂ ಜಿಪಿಎಸ್ ಡಿವೈಸ್ ಅಳವಡಿಕೆಗೆ ಅನುಮೋದನೆ ಕೊಟ್ಟಿದೆ. ಆದರೆ ಇದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಡುತ್ತಿದೆ. ಈಗಾಗಲೇ ಬ್ಲಾಕ್ ಲೀಸ್ಟ್ ಸೇರಿರುವ ಕಂಪನಿಗೂ ಪ್ಯಾನಿಕ್ ಬಟನ್ ಹಾಗೂ ಜಿಪಿಎಸ್ ಡಿವೈಸ್ ಅಳವಡಿಕೆಗೆ ಅನುಮೋದನೆ ಕೊಟ್ಟಿದೆ. ಈಗಾಗಲೇ ಸ್ಮಾರ್ಟ್ ಕಾರ್ಡ್ ವಿಚಾರದಲ್ಲಿ ಪೂರೈಕೆ ಮಾಡದ ಕಂಪನಿಗೆ ಅನುಮೋದನೆ ನೀಡಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.

ಸಾಂದಾರ್ಭಿಕ ಚಿತ್ರ

ಅಷ್ಟೇ ಅಲ್ಲದೆ 2999 ರೂ ಆಸು ಪಾಸು ಆಗುವ ದರವನ್ನ ರಾಜ್ಯ ಸಾರಿಗೆ (RTO) ಅಂತಿಮಗೊಳಿಸಿರುವ ಕಂಪನಿಗಳು 7599ರೂ ಚಾರ್ಜ್ ಮಾಡುತ್ತಿದ್ದು ವಾಹನ ಮಾಲೀಕರ ಅಸಮಧಾನಕ್ಕೆ ಕಾರಣವಾಗಿದೆ. ಅದರಲ್ಲೂ ಬ್ಲಾಕ್ ಲೀಸ್ಟ್ ಸೇರಿ ಸದ್ಯ ಸುಪ್ರಿಂ ಕೋರ್ಟ್ ನಲ್ಲಿ ವಿಚಾರಣೆ ನಡೆಸ್ತಿರೋ ಕಂಪನಿಗೂ ಪ್ಯಾನಿಕ್ ಬಟನ್ ಹಾಗೂ ಜಿಪಿಎಸ್ ಯೂನಿಟ್ ಅಳವಡಿಕೆಗೆ ಅನುಮೋದನೆ ನೀಡಿದ್ದರ ಹಿಂದೆ ಹಲವು ಅರ್ಥಗಳು ಹುಟ್ಟಿಕೊಳ್ಳುತ್ತವೆ. ಹಾಗೆನೇ ಇದಕ್ಕೆಲ್ಲ ಅನುಮೋದನೆ ಕೊಟ್ಟಿರುವ ಅಪರ ಸಾರಿಗೆ ಇಲಾಖೆ ಆಯುಕ್ತರ ನಡೆ ವಿರುದ್ಧವೂ ವಾಹನ ಮಾಲೀಕರಸು ಗರಂ ಆಗ್ತಿದ್ದಾರೆ.

ಇನ್ನು ಪ್ಯಾನಿಕ್ ಬಟನ್ ಅಳವಡಿಕೆ ವಿಚಾರದಲ್ಲಿ ಅಂತಿಮಗೊಳಿಸಿರುವ ಹನ್ನೆರಡು ಕಂಪನಿಗಳ ಅಂತಿಮಗೊಳಿಸುವ ವಿಚಾರದಲ್ಲಿ ಸಾರಿಗೆ ಇಲಾಖೆಯ ಅಪರ ಸಾರಿಗೆ ಆಯುಕ್ತರ ಪಾತ್ರ ಅತಿಮುಖ್ಯವಾದದ್ದು. ಅವರ ಕೃಪಕಟಾಕ್ಷದಿಂದಲೇ ಬ್ಲಾಕ್ ಲೀಸ್ಟ್ ಆಗಿರುವ ಕಂಪನಿ ಸೇರಿದಂತೆ ಹನ್ನೆರಡು ಕಂಪನಿಗಳಿಗೆ ಪ್ಯಾನಿಕ್ ಬಟನ್ ಹಾಗೂ ಜಿಪಿಎಸ್ ಯೂನಿಟ್ ಅಳವಡಿಕೆ ನೀಡಲು ಅವಕಾಶ ನೀಡಲಾಗಿದೆ. ಹಾಗೆನೇ ದುಪ್ಪಟ್ಟು ದರ ವಿಧಿಸುತ್ತಿದ್ದರೂ ಅಪರ ಸಾರಿಗೆ ಆಯುಕ್ತರು ಮೌನ ವಹಿಸಿದ್ದು ಯಾಕೆ ಅಂತ ಖಾಸಗಿ ವಾಹನ ಮಾಲೀಕರ ಒಕ್ಕೂಟ ಕೇಳುತ್ತಿದೆ. ವಾಹನ ಮಾಲೀಕರಿಂದ ಹಗಲು ದರೋಡೆ ಮಾಡುತ್ತಿರುವ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಅಪರ ಸಾರಿಗೆ ಆಯುಕ್ತರು ಯಾಕೆ ಸುಮ್ಮನಿದ್ದಾರೆ ಅಂತ ಪ್ರಶ್ನೆಯನ್ನೂ ಮಾಡ್ತಿದ್ದಾರೆ.

ರಾಜ್ಯ ಸಾರಿಗೆ ಇಲಾಖೆನೇ ನವೆಂಬರ್ ಅಂತ್ಯದೊಳಗೆ ಪ್ಯಾನಿಕ್ ಬಟನ್ ಹಾಗೂ ಜಿಪಿಎಸ್ ಯೂನಿಟ್ ಅಳವಡಿಸಿಕೊಳ್ಳಬೇಕೆಂದು ಸೂಚನೆ ಹೊರಡಿಸಿದೆ. ಹೀಗಿದ್ದರೂ ಕೆಲ ಆರ್ ಟಿಓ ಕಚೇರಿಗಳಲ್ಲಿ ಪ್ಯಾನಿಕ್ ಬಟನ್ ಅಳವಡಿಸಿಕೊಂಡಿಲ್ಲ ಅಂತ ಎಫ್ ಸಿ ಮಾಡ್ತಿಲ್ಲವಂತೆ. ಇದನ್ನ ಪ್ರಶ್ನೆ ಮಾಡೋಕೆ ಹೋದರೆ ವಾಹನ ಮಾಲೀಕರ ಮೇಲೆನೇ ದಬ್ಬಾಳಿಕೆ ಮಾಡ್ತಿದ್ದಾರಂತೆ ಸಾರಿಗೆ ಇಲಾಖೆ ಅಧಿಕಾರಿಗಳು. ಸಾರಿಗೆ ಇಲಾಖೆ ನಡೆ ವಿರುದ್ಧ ಅಸಮಧಾನಗೊಂಡು ಸಾರಿಗೆ ಸಚಿವರ ಗಮನಕ್ಕೆ ತರಲು ವಾಹನ ಮಾಲೀಕ ಮಂಜುನಾಥ್ ಮುಂದಾಗಿದ್ದಾಗಿ ನ್ಯೂಝ್ ಮಿರರ್ ಗೆ ಮಾಹಿತಿ ನೀಡಿದ್ದಾರೆ.

ವಿಎಲ್​ಟಿ ಹಾಗೂ ಪ್ಯಾನಿಕ್ ಬಟನ್ ಅನ್ನು ಎಲ್ಲ ರೀತಿಯ ಸಾರ್ವಜನಿಕ ಸೇವಾ ವಾಹನಗಳು ಅಳವಡಿಸಬೇಕು. ಯೆಲ್ಲೋ ಬೋರ್ಡ್​ ಟ್ಯಾಕ್ಸಿಗಳು (Yellow Board Taxi),w ಕ್ಯಾಬ್​ಗಳು, ಖಾಸಗಿ ಬಸ್​ಗಳು (Cabs and private buses), ನ್ಯಾಷನಲ್ ಪರ್ವಿುಟ್ (National permit) ಹೊಂದಿರುವ ಗೂಡ್ಸ್ ವಾಹನಗಳಿಗೆ (Goods Vehicle) ಈ ಆದೇಶ ಅನ್ವಯವಾಗಲಿದೆ. ಇನ್ನು ಪ್ಯಾನಿಕ್ ಬಟನ್ ಹಾಗೂ ಜಿಪಿಎಸ್ ಯೂನಿಟ್ ಅಳವಡಿಕೆ ವಿಚಾರದಲ್ಲಿ ಹಗಲು ದರೋಡೆ ಆಗುತ್ತಿರುವುದಕ್ಕೆ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ ಹಾಗೂ ಕರ್ನಾಟಕ ಲಾರಿ ಅಸೋಸಿಯೇಷನ್ ವಿರೋಧ ವ್ಯಕ್ತಪಡಿಸಿವೆ. ಕೂಡಲೇ ಮಾರುಕಟ್ಟೆ ದರಕ್ಕೆ ತಕ್ಕಂತೆ ದರ ಪಡೆಯಲಿ. ಹನ್ನೆರಡು ಕಂಪನಿಗಳಿಂದ ವಸೂಲಿ ಆಗ್ತಿರೋದಕ್ಕೆ ಕೂಡಲೇ ಬ್ರೇಕ್ ಹಾಕಿ ಅಂತಾನೂ ಮನವಿ ಮಾಡ್ತಿದ್ದಾರೆ. ಹಾಗೆನೇ ಈ ಡಿವೈಸ್ ಅಳವಡಿಸಲು ಖಾಸಗಿ ಕಂಪನಿಗಳಲ್ಲಿ 3,000-3,500 ರೂಪಾಯಿ ಆಗುತ್ತೆ. ಆದ್ರೆ ಸರ್ಕಾರ ಸೆಲೆಕ್ಟ್ ಮಾಡಿದ ಕಂಪನಿಗಳಿಗೆ 7599 ರೂಪಾಯಿ ಯಾಕೆ ಕೊಡಬೇಕು. ಇದ್ರ ಬಗ್ಗೆ ಚರ್ಚೆಯಾಗಲಿ, ಅಲ್ಲಿಯವರೆಗೂ ಈ ಆದೇಶ ವಾಪಾಸ್ ಪಡೆಯಲಿ ಅಂತ ಆಗ್ರಹಿಸಿದ್ದಾರೆ.

ಒಂದು ವೇಳೆ ವಾಹನಗಳಿಗೆ ಪ್ಯಾನಿಕ್ ಬಟನ್ ಅಳವಡಿಕೆ ಆದಮೇಲೆ ಅವುಗಳನ್ನ ಮಾನಿಟರ್ ಮಾಡುವುದು ಯಾರು..? ಇದನ್ನ ಮಾನಿಟರ್ ಮಾಡೋಕೆ ಒಂದು ಕಂಟ್ರೋಲ್ ರೂಂ ನಿರ್ಮಾಣವಾಗಬೇಕು. ಇದ್ಯಾವುದೂ ಮಾಡದೇ ಅಳವಡಿಕೆಗೆ ಒತ್ತಡ ಹೇರುತ್ತಿರೋದು ಎಷ್ಟು ಸರಿ ಅಂತ ಖಾಸಗಿ ವಾಹನ ಮಾಲೀಕರ ಒಕ್ಕೂಟ ಪ್ರಶ್ನೆ ಮಾಡ್ತಿದೆ. ಈಬಗ್ಗೆ ಅಪರ ಸಾರಿಗೆ ಆಯುಕ್ತರಿಗೆ ಪ್ರಶ್ನೆ ಮಾಡಿದರೆ ಅವರಿಂದ ಹಾರಿಕೆ ಉತ್ತರ ಬರುತ್ತೆ ಅಂತ ವಾಹನ ಮಾಲೀಕರು ಹೇಳ್ತಿದ್ದಾರೆ.

ವಿಎಲ್​ಟಿ ಹಾಗೂ ಪ್ಯಾನಿಕ್ ಬಟನ್ ಅಳವಡಿಕೆ ಮಾಡುವುದರಿಂದ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಅಳವಡಿಸಲಾದ ಮಾನಿಟರಿಂಗ್ ನಕ್ಷೆಯಲ್ಲಿ ವಾಹನದ ಲೊಕೇಷನ್‌ ಟ್ರ್ಯಾಕಿಂಗ್‌ ನಡೆಯುತ್ತದೆ. ಹೀಗಾಗಿ ಯಾವುದೇ ವಾಹನ ಎಲ್ಲಿಯೇ ಸಂಚರಿಸಿದರೂ ಇದರಿಂದ ಗೊತ್ತಾಗುತ್ತದೆ. ಇದು ನಿರ್ಬಂಧಿತ ಪ್ರದೇಶ, ಸಂಚಾರ ನಿಯಮಗಳ ಉಲ್ಲಂಘನೆ ಹಾಗೂ ಅತಿ ವೇಗದ ಚಾಲನೆ ಮಾಡಿದಾಗ ಎಚ್ಚರಿಕೆಯನ್ನು ರವಾನೆ ಮಾಡುತ್ತಿದೆ.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist