ಬೆಂಗಳೂರು, (www.thenewzmirror.com) ;
ಪ್ಯಾನಿಕ್ ಬಟನ್ ಅಳವಡಿಕೆ ವಿಚಾರದಲ್ಲಿ ಅದ್ಯಾಕೋ ಏನೋ ಸಾರಿಗೆ ಇಲಾಖೆ ಕಣ್ಮುಚ್ಚಿ ಕುಳಿತಿದ್ಯಾ ಎನ್ನೋ ಅನುಮಾನ ಕಾಡುತ್ತಿದೆ. ಇಲಾಖೆ ಫಿಕ್ಸ್ ಮಾಡಿದ ದರಕ್ಕಿಂತ ಹೆಚ್ಚಿನ ಹಣ ನೀಡಿದ್ರೆ ಮಾತ್ರ ಪ್ಯಾನಿಕ್ ಬಟನ್ ಹಾಗೂ ಜಿಪಿಎಸ್ ಸಾಧನ ಅಳವಡಿಸ್ತೀವಿ ಅಂತ ಹೇಳುತ್ತಿರೋ ಸಂಸ್ಥೆಗಳ ವಿರುದ್ಧ ಕ್ರಮ ಯಾಕಿಲ್ಲ ಅನ್ನೋ ಪ್ರಶ್ನೆ ವಾಹನ ಮಾಲೀಕರನ್ನ ಕಾಡುತ್ತಿದೆ.
ಪ್ಯಾನಿಕ್ ಬಟನ್ ಹಾಗೂ ಜಿಪಿಎಸ್ ಸಾಧನ ಅಳವಡಿಸ್ಬೇಕು ಅಂತ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯದಲ್ಲಿ ಇದರ ಸಂಪೂರ್ಣ ಉಸ್ತುವಾರಿ ವಹಿಸಿಕೊಂಡಿರೋದು ಸಾರಿಗೆ ಇಲಾಖೆ ಅಪರ ಆಯುಕ್ತ(ಆಡಳಿತ) ಉಮಾಶಂಕರ್. ರಾಜ್ಯದಲ್ಲಿ ಅನುಮತಿ ಪಡೆದಿರುವ 12 ಕಂಪನಿಗಳಿಗೆ ಒಂದು ವಾಹನಕ್ಕೆ ಪ್ಯಾನಿಕ್ ಬಟನ್ ಹಾಗೂ ಜಿಪಿಎಸ್ ಸಾಧನ ಅಳವಡಿಸ್ಬೇಕು ಅಂದ್ರೆ ಇಂತಿಷ್ಟು ದರ ಅಷ್ಟೇ ಪಡೀಬೇಕು ಅಂತ ಸೂಚನೆಯನ್ನ ಉಮಾಶಂಕರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಅದರಂತೆ 7599 ರೂ ಮಾತ್ರ ವಸೂಲಿ ಮಾಡಬೇಕಿದೆ.
ಈ ಕೆಳಗಿನ ಲಿಂಕ್ ಓಪನ್ ಮಾಡಿದರೆ ಪ್ಯಾನಿಕ್ ಬಟನ್ ಕಳ್ಳಾಟದ ಆಡಿಯೋ
https://www.facebook.com/share/r/jvmvg3DpbgtJtJZb/?mibextid=qi2Omg
ಇಲಾಖೆ ಆದೇಶ ಇದ್ದರೂ ಕಂಪನಿಗಳು ಮನಸ್ಸಿಗೆ ಬಂದಷ್ಟು ದರವನ್ನ ವಸೂಲಿ ಮಾಡ್ತಿದ್ದಾರೆ. ಉದಾಹರಣೆಗೆ ಒಂದು ಕಾರಿಗೆ ಕನಿಷ್ಠ ಮೂರು ಪ್ಯಾನಿಕ್ ಬಟನ್ ಅಳವಡಿಕೆ ಮಾಡಲೇಬೇಕಂತೆ. 7 ಸೀಟಿನ ಕಾರು ಆದರೆ 5 ಪ್ಯಾನಿಕ್ ಬಟನ್ ಕಡ್ಡಾಯವಾಗಿ ಅಳವಡಿಕೆ ಮಾಡಬೇಕಂತೆ. ಹೀಗಂತೆ ಕಾರು ಮಾಲೀಕರೊಬ್ಬರ ಜತೆ ಮಾತನಾಡಿರುವ ಆಡಿಯೋ ನ್ಯೂಝ್ ಮಿರರ್ ಗೆ ಲಭ್ಯವಾಗಿದೆ.
ಒಂದೊಂದು ಪ್ಯಾನಿಕ್ ಬಟನ್ ಗೆ 550 ರೂ ಅಂತೆ.!
ಇನ್ನು ಒಂದು ಕಾರಿಗೆ ಕನಿಷ್ಠ 3 ಪ್ಯಾನಿಕ್ ಬಟನ್ ಅಳವಡಿಸಬೇಕಂತೆ. ಹೆಚ್ಚುವರಿಯಾಗಿ ಅಳವಡಿಕೆ ಮಾಡಬೇಕು ಅಂದರೆ(ಐದು ಸೀಟ್ ಇರುವ ಕಾರಿಗೆ 14500 ರೂ. ಏಳು ಸೀಟಿನ ಕಾರಿಗೆ ಪ್ಯಾನಿಕ್ ಬಟನ್ ಅಳವಡಿಸಬೇಕಂದರೆ 15600 ರೂ ಆಗಲಿದೆ.) ಐದು ಸೀಟಿನ ಬದಲು ಕಾರಿಗೆ ಏಳು ಸೀಟು ಇತ್ತು ಎಂದರೆ ಪ್ರತಿ ಯೂನಿಟ್ ಗೂ 550 ರೂ ಅಳವಡಿಕೆ ಮಾಡಬೇಕಂತೆ.
ಕಂಟ್ರೋಲ್ ರೂಂ ಎಲ್ಲಿದೆ ಅನ್ನೋದೇ ಗೊತ್ತಿಲ್ಲ..!
ನ್ಯೂಝ್ ಮಿರರ್ ಗೆ ಸಿಕ್ಕಿರುವ ಮಾಹಿತಿ ಪ್ರಕಾರ ಜಿಪಿಎಸ್ ಹಾಗೂ ಪ್ಯಾನಿಕ್ ಬಟನ್ ಅಳವಡಿಕೆ ಮಾಡುವ ಕಂಪನಿಯ ಕೆಲ ಸಿಬ್ಬಂದಿಗೆ ಪ್ಯಾನಿಕ್ ಬಟನ್ ಮಾನಿಟರಿಂಗ್ ಮಾಡುವ ಕಂಟ್ರೋಲ್ ರೂಂ ಎಲ್ಲಿದೆ ಎನ್ನುವುದೇ ಗೊತ್ತಿಲ್ಲ. ಇದರ ಜತೆಗೆ ಯಾವುದು ಪ್ಯಾನಿಕ್ ಬಟನ್ ಯಾವುದು ಜಿಪಿಎಸಗ ಸಾಧನ ಎನ್ನುವ ಕೊಂಚ ಮಾಹಿತಿಯೂ ಇಲ್ಲದ ಸಿಬ್ಬಂದಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ.
ಅಪರ ಸಾರಿಗೆ ಆಯುಕ್ತರೇ ಇತ್ತ ಗಮನ ಹರಿಸಿ.!
ಪ್ಯಾನಿಕ್ ಬಟನ್ ವಿಚಾರದಲ್ಲಿ ವಾಹನ ಮಾಲೀಕರಿಂದ ಮನಸೋ ಇಚ್ಛೆ ವಸೂಲಿ ಮಾಡುತ್ತಿರೋ ಕಂಪನಿಗಳಿಗೆ ಕಡಿವಾಣ ಹಾಕಬೇಕಿದೆ. ಇದರ ಉಸ್ತುವಾರಿ ವಹಿಸಿರೋ ಸಾರಿಗೆ ಇಲಾಖೆ ಅಪರ ಆಯುಕ್ತ(ಆಡಳಿತ) ಉಮಾಶಂಕರ್ ಕೂಡಲೇ ಕಂಪನಿಗಳ ಜತೆ ಚರ್ಚೆ ನಡೆಸಿ ಹೆಚ್ಚುವರಿ ವಸೂಲಿ ಮಾಡುತ್ತಿರೋದಕ್ಕೆ ಬ್ರೇಕ್ ಹಾಕಬೇಕಿದೆ. ಇನ್ನೊಂದು ಮೂಲದ ಪ್ರಕಾರ ಹೆಚ್ಚುವರಿ ಹಣ ವಸೂಲಿ ಮಾಡುತ್ತಿರೋದು ಉಮಾಶಂಕರ್ ಅವರಿಗೂ ಗೊತ್ತಿದೆ. ಹೀಗಿದ್ದರೂ ಸುಮ್ಮನಿದ್ದಾರೆ ಎಂದು ಕೆಲ ವಾಹನ ಮಾಲೀಕರು ಆತೋಪ ಮಾಡುತ್ತಿದ್ದಾರೆ.