ಪ್ಯಾರೀಸ್, (www.thenewzmirror com) ;
ಕುಸ್ತಿ ಸ್ಪರ್ಧೆಯಲ್ಲಿ ಪದಕ ಗೆಲ್ಲುವ ವಿಶ್ವಾಸದಲ್ಲಿದ್ದ ಕುಸ್ತಿ ಪಟು ವಿನೇಶ್ ಪೋಗಟ್ ಫೈನಲ್ ಆಡುವ ಮೊದಲೇ ಟೂರ್ನಿಯಿಂದ ಔಟ್ ಆಗಿದ್ದಾರೆ.
ಆಗಸ್ಟ್ 6 ರಂದು ಒಲಿಂಪಿಕ್ಸ್ನಲ್ಲಿ ನಡೆದ ಮಹಿಳೆಯರ 50 ಕೆಜಿ ತೂಕ ವಿಭಾಗದ ಕುಸ್ತಿ ಸ್ಪರ್ಧೆಯ ಸೆಮಿಫೈನಲ್ ಪಂದ್ಯದಲ್ಲಿ ಕ್ಯೂಬಾದ ಗುಜ್ಮನ್ ಲೋಪೆಜ್ ಅವರನ್ನು 5-0 ಅಂತರದಿಂದ ಮಣಿಸಿ ಫೈನಲ್ ಪ್ರವೇಶಿಸಿದ್ದರು ವಿನೇಶ್ ಫೋಗಟ್.
50 ಕೆಜಿ ತೂಕದ ವಿಭಾಗದಲ್ಲಿ ಸ್ಪರ್ಧೆ ಮಾಡುತ್ತಿದ್ದ ವಿನೇಶ್ ಅವರಿಗೆ ಫೈನಲ್ ಗೂ ಮುನ್ನ ಅವರ ತೂಕ ಪರೀಕ್ಷಿಸಲಾಯ್ತು. ಈ ವೇಳೆ ಅವರ ತೂಕ 100 ಗ್ರಾಂ ಹೆಚ್ಚಿತ್ತಂತೆ ಅಂದರೆ 50 ಕೆಜಿ 100 ಗ್ರಾಂ. ತೂಕ ಹೆಚ್ಚಿರುವುದು ಪತ್ತೆಯಾದ ಹಿನ್ನಲೆಯಲ್ಲಿ ಟೂರ್ನಿಯಿಂದ ಹೊರಗುಳಿದಿದ್ದಾರೆ.