ಬೆಂಗಳೂರು, (www.thenewzmirror.com) ;
ರಾಜ್ಯ ಕಾಂಗ್ರೆಸ್ ಸರ್ಕಾರದ ಜನಪ್ರಿಯ ಗ್ಯಾರಂಟಿ ಅಂದ್ರೆ ಅದು ಶಕ್ತಿ ಯೋಜನೆ ಕಳೆದ ವರ್ಷ ಜೂನ್ 11 ರಂದು ಯೋಜನೆಗೆ ಚಾಲನೆ ಕೊಟ್ಟು ಈಗಾಗಲೇ ಯಶಸ್ವಿಯಾಗಿ ಒಂದು ವರ್ಷ ಪೂರೈಸಿದೆ. ವರ್ಷ ಕಳೆದ್ರೂ ಸರ್ಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣ ಮಾಡ್ತಿರುವ ಮಹಿಳೆಯರ ಪ್ರಮಾಣ ಮಾತ್ರ ಇನ್ನೂ ಸಾರಿಗೆ ಸಂಸ್ಥೆ ಕೊಟ್ಟಿರುವ ಮಾಹಿತಿ ಪ್ರಕಾರ ನಿರೀಕ್ಷೆಗೂ ಮೀರಿ ಮಹಿಳಾ ಪ್ರಯಾಣಿಕರು ಸರ್ಕಾರಿ ಬಸ್ ನಲ್ಲಿ ಉಚಿತ ಪ್ರಯಾಣ ಮಾಡ್ತಿದ್ದಾರೆ ಅಂತ ತಿಳಿಸಿದೆ.
ಶಕ್ತಿ ಯೋಜನೆ ಜಾರಿ ಮಾಡಿ ಇಂದಿಗೆ 387 ದಿನಗಳು ಕಳೆದಿವೆ. ಕಳೆದ ವರ್ಷ ಜೂನ್ 11 ರಂದು ಯೋಜನೆಗೆ ಚಾಲನೆ ನೀಡಲಾಗಿತ್ತು. ಅಂದಿನಿಂದ ಇಂದಿನ ವರೆಗೂ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ. ಆರಂಭದಲ್ಲಿ ಯೋಜನೆಗೆ ಸಾಕಷ್ಟು ಟೀಕೆಗಳು, ವಿರೋಧಗಳು ಕೇಳಿ ಬಂದಿದ್ವು. ನಂತರದ ದಿನಗಳಲ್ಲಿ ಟೀಕೆ, ಟಿಪ್ಪಣಿ ಮಾಡುತ್ತಿದ್ದವೇ ಯೋಜನೆಯನ್ನ ಬೆಂಬಲಿಸೋಕೆ ಮುಂದಾದ್ರು. ಸಾರಿಗೆ ಸಂಸ್ಥೆ ಕೊಟ್ಟಿರುವ ಮಾಹಿತಿ ಪ್ರಕಾರ ಯೋಜನೆ ಜಾರಿಯಾದಾಗಿನಿಂದ ಅಂದರೆ ಜೂನ್ ಹನ್ನೊಂದನೇ ತಾರೀಖಿನಿಂದ ಇಂದಿನವರೆಗೂ ಅಂದರೆ ಜುಲೈ ಮೂರನೇ ತಾರೀಖಿನ ವರೆಗೂ ಒಟ್ಟು 387 ದಿನಗಳಲ್ಲಿ 240,61,41,394 ಕೋಟಿ ಮಹಿಳಾ ಪ್ರಯಾಣಿಕರು ಬಿಎಂಟಿಸಿ, ಕೆಎಸ್ಸಾರ್ಟಿಸಿ, ವಾಯುವ್ಯ ಸಾರಿಗೆ ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆಗಳಲ್ಲಿ ಶಕ್ತಿಯೋಜನೆಯಡಿ ಪ್ರಯಾಣ ಮಾಡಿದ್ದಾರೆ. ಇಷ್ಟು ಮಹಿಳೆಯರಿಗೆ ಇದೂವರೆಗೂ 5851,05,07,612 ಮೌಲ್ಯದ ಟಿಕೆಟ್ ನೀಡಲಾಗಿದೆಯಂತೆ.
ಅಷ್ಟೇ ಅಲ್ದೇ ಲೋಕ ಸಭೆ ಚುನಾವಣೆ ಮುಗಿದ ಬಳಿಕ ಯೋಜನೆ ಸ್ಥಗಿತಗೊಳಿಸಲಾಗುತ್ತೆ ಎನ್ನುವ ಮಾತುಗಳೆಲ್ಲವೂ ಕೇಳಿ ಬಂದಿತ್ತು. ಈ ಎಲ್ಲ ಟೀಕೆಗಳನ್ನ ಮೆಟ್ಟಿ ನಿಂತ ಸರ್ಕಾರ ಹಾಗೂ ಸಾರಿಗೆ ಸಂಸ್ಥೆಗಳು ಇಂದಿಗೂ ಯೋಜನೆಯನ್ನ ಮಹಿಳೆಯರಿಗೆ ನೀಡುತ್ತಾ ಬರುತ್ತಿವೆ.