ಬೆಂಗಳೂರು, (www.thenewzmirror.com) ;
ಬಾಂಗ್ಲಾ ದೇಶದಲ್ಲಿ ನಡೆದ ಬೆಳವಣಿಗೆಯಲ್ಲಿ ತಮ್ಮ ಪ್ರಧಾನಿ ಹುದ್ದೆಗೆ ದಿಢೀರ್ ರಾಜಿನಾಮೆ ಕೊಟ್ಟಿದ್ದ ಶೇಖ್ ಹಸೀನಾ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಮೊದಲ ಹೇಳಿಕೆಯಲ್ಲಿ ಜುಲೈನಲ್ಲಿ ಹತ್ಯೆಗಳು ಮತ್ತು ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾದವರ ಶಿಕ್ಷೆಗೆ ಹಸೀನಾ ಒತ್ತಾಯಿಸಿದ್ದಾರೆ.
ಇದೇ ವೇಳೆ ಆಗಸ್ಟ್ 15ರಂದು ರಾಷ್ಟ್ರೀಯ ಶೋಕಾಚರಣೆ ದಿನವನ್ನು ಗೌರವಯುತವಾಗಿ ಮತ್ತು ಗಂಭೀರತೆಯಿಂದ ಆಚರಿಸಲು ನಾನು ತಮ್ಮ ದೇಶದ ಪ್ರಜೆಗಳಿಗೆ ಮನವಿ ಮಾಡುವುದಾಗಿಯೂ ಹೇಳಿದ್ದಾರೆ.
ಕಳೆದ ಜುಲೈನಿಂದ ಆಂದೋಲನದ ಹೆಸರಿನ ಹಿಂಸಾಚಾರದಿಂದ ಅನೇಕ ಜನರು ಸಾವನ್ನಪ್ಪಿದ್ದಾರೆ. ಭಯೋತ್ಪಾದಕ ದಾಳಿಗೆ ಬಲಿಯಾದ ಕಾರ್ಮಿಕರಿಗೆ ಇದೇ ವೇಳೆ ಸಂತಾಪ ಸೂಚಿಸಿದ್ದಾರೆ. ಬಾಂಗ್ಲಾದೇಶದ ಸಂಸ್ಥಾಪಕ ಶೇಖ್ ಮುಜಿಬುರ್ ರೆಹಮಾನ್ ಅವರ ಮ್ಯೂಸಿಯಂ ನಾಶ ಮಾಡಿದ್ದನ್ನ ಖಂಡಿಸಿರೋ ಹಸೀನಾ, ಬಾಂಗ್ಲಾದ ರಾಷ್ಟ್ರಪಿತ ಬಂಗಬಂಧು ಶೇಖ್ ಮುಜಿಬುರ್ ರೆಹಮಾನ್ ಅವರ ನೇತೃತ್ವದಲ್ಲಿ ನಾವು ಸ್ವತಂತ್ರ ರಾಷ್ಟ್ರದ ಜೊತೆಗೆ ಸ್ವಾಭಿಮಾನ ಪಡೆದುಕೊಂಡಿದ್ದೇವೆ. ಅವರಿಗೆ ಅವಮಾನ ಮಾಡುವ ಮೂಲಕ ಲಕ್ಷಾಂತರ ಹುತಾತ್ಮರ ರಕ್ತವನ್ನು ಅವಮಾನಿಸಿದ್ದಾರೆ ಅಂತ ಬೇಸರ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಹಸೀನಾ ಪುತ್ರ ಸಜೀಬ್ ವಾಝೇಧ್ ಹೂವಿನ ಹಾರಗಳನ್ನು ಅರ್ಪಿಸಿ ಮತ್ತು ಬಂಗಬಂಧು ಭಾಬನ್‌ನಲ್ಲಿ ಪ್ರಾರ್ಥಿಸುವ ಮೂಲಕ ಎಲ್ಲಾ ಆತ್ಮಗಳ ಮೋಕ್ಷಕ್ಕಾಗಿ ಪ್ರಾರ್ಥಿಸಿ ಎಂದು ಕರೆಕೊಟ್ಟಿದ್ದಾರೆ.
ಬಾಂಗ್ಲಾದೇಶದ ನ್ಯಾಯಾಲಯವು ಕಳೆದ ತಿಂಗಳು ನಾಗರಿಕ ಅಶಾಂತಿಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬನ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಉಚ್ಚಾಟಿತ ಮಾಜಿ ಪ್ರಧಾನಿ ಶೇಖ್ ಹಸೀನಾ ಮತ್ತು ಅವರ ಆಡಳಿತದ 6 ಪ್ರಮುಖ ವ್ಯಕ್ತಿಗಳ ಮೇಲೆ ಕೊಲೆ ಕೇಸ್ ದಾಖಲಿಸಿ, ತನಿಖೆ ಪ್ರಾರಂಭಿಸಿದೆ.