ಬೆಂಗಳೂರು, (www.thenewzmirror.com) ;
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ನೌಕರರಿಗೆ ಪ್ರೀಮಿಯಂ ರಹಿತ ವಿಮೆ ರೂ.1.00 ಕೋಟಿಗಳ ಅಪಘಾತ ವಿಮಾ ಹಾಗೂ ಇತರೆ ಸೌಲಭ್ಯಗಳ ಒಡಂಬಡಿಕೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಹಿ ಮಾಡಿದರು.
ಕ.ಕ.ರ.ಸಾ.ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನ ಪರವಾಗಿ ಡಿವಿಜನಲ್ ಜನರಲ್ ಮ್ಯಾನೇಜರ್ ಮನೋಜಕುಮಾರ ಟೋಪೋ, ಈ ವೇಳೆ ಹಾಜರಿದ್ರು.

ಸದರಿ ಯೋಜನೆಯಲ್ಲಿ ನಿಗಮದ ನೌಕರರ ವೇತನ ಖಾತೆಗಳನ್ನು Corporate Salary Package” ಅಡಿಯಲ್ಲಿ ಪ್ರೀಮಿಯಂ ರಹಿತ ಅಪಘಾತ ವಿಮೆ ವೈಯಕ್ತಿಕ ಅಥವಾ ಕರ್ತವ್ಯದ ಮೇಲೆ ಅಪಘಾತದಲ್ಲಿ ನಿಧನರಾದಲ್ಲಿ ರೂ.1.00 ಕೋಟಿ ಹಾಗೂ ಸಹಜ ನಿಧನಕ್ಕೆ ರೂ.6.00 ಲಕ್ಷಗಳ “Term Insurance” ಪಾಲಿಸಿಯೊಂದಿಗೆ ಇತರೇ ಸೌಲಭ್ಯಗಳನ್ನು ಈ ಯೋಜನೆ ಅಡಿಯಲ್ಲಿ ಒದಗಿಸಲಾಗುಥತದೆ.
ವ್ಯವಸ್ಥಾಪಕ ನಿರ್ದೇಶಕರು ಕ.ಕ.ರ.ಸಾ.ನಿಗಮ ಮಾತನಾಡಿ, ನಿಗಮವು ನೌಕರರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ರೂಪಿಸಿದೆ. ಅಲ್ಲದೇ ನಿಗಮದಲ್ಲಿ 13150 ನೌಕರರು ಎಸ್.ಬಿ.ಐ. ಬ್ಯಾಂಕಿನಲ್ಲಿ ವೇತನ ಖಾತೆಯನ್ನು ಹೊಂದಿರುವುದರಿಂದ ಪ್ರೀಮಿಯಂ ರಹಿತ ಅಪಘಾತ ವಿಮೆ ಸೌಲಭ್ಯಕ್ಕೆ ಅರ್ಹರಾಗಿರುತ್ತಾರೆಂದು ತಿಳಿಸುತ್ತಾ ಪ್ರಸ್ತುತ ನಿಗಮ ಮತ್ತು ಬ್ಯಾಂಕಿನ ನಡುವೆ ಇರುವ ಸಹಕಾರ ಇದೇ ರೀತಿಯಾಗಿ ಮುಂದುವರೆಯಲೆಂದು ತಿಳಿಸಿದರು.
ಅಪಘಾತದಲ್ಲಿ ನಿಧನರಾದ ನೌಕರರ ಅವಲಂಬಿತರಿಗೆ ಆದ್ಯತೆಯ ಮೇರೆಗೆ ಪ್ರಕರಣಗಳನ್ನು ಇತ್ಯರ್ಥಪಡಿಸಿ ಪರಿಹಾರ ಮೊತ್ತವನ್ನು ನಾಮನಿರ್ದೇಶಿತರಿಗೆ ಒದಗಿಸಲು ಸಚಿವರು ತಿಳಿಸಿದರು.