ಬೆಂಗಳೂರು, (www.thenewzmirror.com) ;
ಕೇಂದ್ರ ಸರ್ಕಾರದ ಮಹತ್ವದ ವಂದೇ ಭಾರತ್ ಟ್ರೈನ್ ಬಣ್ಣ ಇನ್ಮುಂದೆ ಬದಲಾಗುತ್ತಾ ಎನ್ನುವ ಪ್ರಶ್ನೆ ಉದ್ಭವಿಸಿದೆ. ಕಾರಣ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡ ಒಂದು ಪೋಸ್ಟ್ ಇದಕ್ಕೆ ಪುಷ್ಠಿ ನೀಡುತ್ತಿದೆ.
ಇಷ್ಟು ದಿನ ವಂದೇ ಭಾರತ್ ಟ್ರೈನ್ ನೀಲಿ ಬಣ್ಣದಲ್ಲಿ ಓಡಾಟ ನಡೆಸುತ್ತಿತ್ತು. ಆದರೆ ಕೇಂದ್ರ ರೈಲ್ವೆ ಸಚಿವರ ಟ್ವಿಟ್ಟರ್ ನ ಫೋಟೋಗಳು ಇದೀಗ ನೀಲಿಯಿಂದ ಕೇಸರಿ ಬಣ್ಣದಲ್ಲಿ ಓಡಾಟ ನಡೆಸುತ್ತೆ ಎಂದು ಹೇಳಲಾಗುತ್ತಿದೆ.
https://twitter.com/AshwiniVaishnaw/status/1677668220512137219?t=89mRj2aSxdBgCJtCNTTsgg&s=19
ವಂದೇ ಭಾರತ್ ಟ್ರೈನ್ ನಿರ್ಮಾಣ ಚೆನ್ನೈನಲ್ಲಿ ಸಿದ್ದವಾಗುತ್ತಿದೆ. ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಗೆ ವಿಸಿಟ್ ಕೊಟ್ಟು ಹೊಸ ರೈಲುಗಳನ್ನ ವೀಕ್ಷಣೆ ಮಾಡಿದ ಬಳಿಕ ಅವರು ಹಂಚಿಕೊಂಡಿರುವ ಫೋಟೋ ಇದೀಗ ಖಚಿತ ಪಡಿಸುತ್ತಿದೆ.
ಹೇಗರಿಲಿವೆ ಹೊಸ ವಂದೇ ಭಾರತ್ ಟ್ರೈನ್
ಇಷ್ಟು ದಿನ ವಂದೇ ಭಾರತ್ ಟ್ರೈನ್ ನೀಲಿ ಮತ್ತು ಬಿಳಿ ಬಣ್ಣದಿಂದ ಓಡಾಟ ನಡೆಸುತ್ತಿತ್ತು. ಆದರೀಗ ನೀಲಿ ಬಣ್ಣದ ಜಾಗದಲ್ಲಿ ಕೇಸರಿ ಹಾಗೂ ಬಿಳಿ ಬಣ್ಣದ ಜಾಗದಲ್ಲಿ ಕಡುಬೂದು ಬಣ್ಣ ಇರಲಿದೆ.