ಬೆಂಗಳೂರು, (www.thenewzmirror.com) ;
ಬೆಂಗಳೂರು ನಗರದಲ್ಲಿ ಆಗಾಗ ಸಂಭವಿಸುತ್ತಿರೋ ರಸ್ತೆ ಅಪಘಾತಗಳಿಗೆ ಕಡಿವಾಣ ಹಾಕೋ ನಿಟ್ಟಿನಲ್ಲಿ ಬೆಂಗಳೂರು ಸಂಚಾರಿ ಪೊಲೀಸರು ಸರ್ವ ಸನ್ನದ್ಧವಾಗಿದ್ದಾರೆ. ಹೀಗಾಗಿ ಯಾವೆಲ್ಲಾ ವಾಹನಗಳು ಹಾಗೂ ವಾಹನ ಮಾಲೀಕರು ಸಂಚಾರ ನಿಮಯವನ್ನ ಉಲ್ಲಂಘನೆ ಮಾಡ್ತಿದ್ದಾರೋ ಅಂಥವ್ರ ವಿರುದ್ಧ ಸಮರ ಸಾರಿದ್ದು, ನಿಯಮ ಮೀರಿದ್ದಕ್ಕಾಗಿ ದಂಡದ ಪ್ರಯೋಗವನ್ನೂ ಮಾಡ್ತಿದ್ದಾರೆ.
ಇದರ ಮೊದಲ ಹೆಜ್ಜೆ ಎನ್ನುವಂತೆ High Beam Light ಉಪಯೋಗ ಮಾಡುತ್ತಿರುವ ವಾಹನ ಮಾಲೀಕರ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳುವ ಕಾರ್ಯಕ್ಕೆ ಬೆಂಗಳೂರು ಸಂಚಾರಿ ಪೊಲೀಸರು ಮುಂದಾಗಿದ್ದಾರೆ. ಪಶ್ವಿಮ ವಿಭಾಗದ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜುಲೈ ಮೊದಲ ದಿನವೇ ವಿಶೇಷ ಕಾರ್ಯಾಚರಣೆ ನಡೆಸಿ High Beam Light ಉಪಯೋಗ ಮಾಡ್ತಿದ್ದ ಸುಮಾರು 239 ಪ್ರಕರಣವನ್ನ ದಾಖಲು ಮಾಡಿಕೊಂಡಿದ್ದಾರೆ.
High Beam Light ವಿರುದ್ಧ ಕಾರ್ಯಾಚರಣೆ ಏಕೆ.?
ಇತ್ತೀಚಿನ ದಿನಗಳಲ್ಲಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ರಾತ್ರಿ ವೇಳೆಯಲ್ಲಿ ರಸ್ತೆ ಅಪಘಾತಗಳು ಸಂಭವಿಸುತ್ತಿರುತ್ತವೆ. ಇದಕ್ಕೆ High Beam Light ಬಳಕೆ ಪ್ರಮುಖ ಕಾರಣ ಅನ್ನೋದು ಗೊತ್ತಾಗುತ್ತಿದೆ. High Beam Light ಉಪಯೋಗ ಮಾಡುವುದರಿಂದ ಎದುರುಗಡೆ ಬರುತ್ತಿರೋ ವಾಹನ ಸವಾರರಿಗೆ ಮುಂಬದಿಯ ರಸ್ತೆ ಸರಿಯಾಗಿ ಕಾಣಿಸದೆ ಆಕ್ಸಿಡೆಂಟ್ ಆಗುವ ಸಾಧ್ಯತೆಗಳು ಹೆಚ್ಚಿವೆಯಂತೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಬೆಂಗಳೂರು ಸಂಚಾರಿ ಪೊಲೀಸರು ಈ ಕ್ರಮಕ್ಕೆ ಮುಂದಾಗಿದ್ದಾರೆ.
ಸದ್ಯಕ್ಕೆ ಬೆಂಗಳೂರು ನಗರ ವ್ಯಾಪ್ತಿಯಲ್ಲಿ High Beam Light ಉಪಯೋಗದ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಲು ಬೆಂಗಳೂರು ಸಂಚಾರಿ ವಿಭಾಗದ ಜಂಟಿ ಆಯುಕ್ತರು ಮುಂದಾಗಿದ್ದಾರೆ.