Big Scam In KAIDB | ಮೂಡ ಬಳಿಕ ಇದೀಗ KIADB ಯಲ್ಲೂ ಅಕ್ರಮದ ವಾಸನೆ, ಸಿಎಂಗೆ ದೂರು ಸಲ್ಲಿಕೆ..!, ಚುನಾವಣೆಗೂ ಮೊದಲೇ ಸಿಎ ನಿವೇಶನ ಹಂಚಿಕೆ ತೀರ್ಮಾನದ ಹಿಂದಿನ ಅಸಲಿಯತ್ತೇನು.?

ಬೆಂಗಳೂರು, (www.thenewzmirror.com) ;

ಮೂಡದಲ್ಲಿ ಕೋಟ್ಯಾಂತರ ರೂಪಾಯಿ ಅಕ್ರಮ ನಡೆದಿದೆ ಎನ್ನುವ ಆರೋಪ ಬೆನ್ನಲ್ಲೇ ರಾಜ್ಯದಲ್ಲಿ ಮತ್ತೊಂದು ಭ್ರಷ್ಟಚಾರದ ವಾಸನೆ ಹರಿದಾಡುತ್ತಿದೆ. ಅದೂ ಕೂಡ ಸಿಎಂ ಸಿದ್ದರಾಮಯ್ಯ ಆಪ್ತ ಬಳಗದಲ್ಲಿ ಗುರ್ತಿಸಿಕೊಂಡಿರುವ‌ ಎಂ.ಬಿ. ಪಾಟೀಲ್ ಸಚಿವರಾಗಿರುವಂಥಹ ಭಾರೀ ಮತ್ತು ಮಧ್ಯಮ ಕೈಇಲಾಖೆಯಲ್ಲಿ. ಈ ಕುರಿತಂತೆ ಸಿಎಂಗೆ ದೂರು ಸಲ್ಲಿಕೆಯಾಗಿದ್ದು, ಉನ್ನತ ಮಟ್ಟದ ತನಿಖೆ ನಡೆಸುವಂತೆ ಒತ್ತಾಯ ಕೇಳಿ ಬಂದಿದೆ.

RELATED POSTS

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (KIADB) ಯ ಕೈಗಾರಿಕಾ ಪ್ರದೇಶಗಳಲ್ಲಿ ನಾಗರಿಕ ಸೌಲಭ್ಯಗಳಿಗೆ ಸಿಎ ನಿವೇಶನಗಳನ್ನ ಮೀಸಲಿರಿಸಲಾಗಿದ್ದು, ಅವುಗಳನ್ನ ಪಾರದರ್ಶಕವಾಗಿ ಹಂಚಿಕೆ ಮಾಡಬೇಕಿರುತ್ತದೆ. ಆದ್ರೆ ಹೀಗೆ ಪಾರದರ್ಶಕವಾಗಿ ಹಂಚಿಕೆ ಮಾಡದೇ ಅಕ್ರಮವಾಗಿ ಹಾಗೂ ಒಳಸಂಚು ನಡೆಸಿ ಮನಸ್ಸಿಗೆ ಬಂದಂತೆ ಹಂಚಿಕೆ ಮಾಡಿ ಮಂಡಳಿಗೆ ಕೋಟ್ಯಾಂತರ ರೂಪಾಯಿ ನಷ್ಟವುಂಟು ಮಾಡಲಾಗಿದೆ ಎಂಬ ಆರೋಪವನ್ನ ಸಾಮಾಜಿಕ ಕಾರ್ಯಕರ್ತ ದಿನೇಶ್‌ ಕಲ್ಲಹಳ್ಳಿ ಮಾಡಿದ್ದಾರೆ.

ಸಿಎಂ ಗೆ ಕೊಟ್ಟಿರುವ ದೂರಿನ ಪ್ರತಿ

ಮಂಡಳಿಗೆ ಸುಮಾರು ಮುನ್ನೂರರಿಂದ ನಾಲ್ಕುನೂರು ಕೋಟಿ ರೂ ವಂಚನೆ ಮಾಡಿದ್ದಾರೆ ಅಂತ ಆರೋಪಿಸಿ ಸಚಿವ ಎಂ.ಬಿ. ಪಾಟೀಲ್‌, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ. ಎಸ್‌ ಸೆಲ್ವ ಕುಮಾರ್‌, KIADB ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎಂ. ಮಹೇಶ್‌, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ನಿರ್ದೇಶಕ ಗುಂಜನ್‌ ಕೃಷ್ಣ ಸೇರಿದಂತೆ KIADBಯ ವಿವಿಧ ಅಧಿಕಾರಿಗಳ ವಿರುದ್ಧ ಉನ್ನತ ಮಟ್ಟದ ತನಿಖೆ ನಡೆಸುವಂತೆ ದಿನೇಶ್‌ ಕಲ್ಲಹಳ್ಳಿ ಆಗ್ರಹಿಸಿದ್ದಾರೆ.

ನಾಗರಿಕರ ಸೌಲಭ್ಯಕ್ಕಾಗಿ ಸಿಎ ಸೈಟ್‌ KIADB ಅಭಿವೃದ್ಧಿ ಪಡಿಸಿದ ಪ್ರಿಯೊಂದು ಕೈಗಾರಿಕಾ ಪ್ರದೇಶಲ್ಲಿ ಸಿಎ ನಿವೇಶನ ಮೀಸಲಿಟ್ಟಿದೆ. ಇಂಥ ನಿವೇಶನಗಳನ್ನ ಹರಾಜು ಮೂಲಕ ಹಂಚಿಕೆ ಮಾಡಬೇಕು. ಆದ್ರೆ ಇತ್ತೀಚಿನ ದಿನಗಳಲ್ಲಿ KIADB ಅಭಿವೃದ್ಧಿ ಪಡಿಸಿದ ಎಲ್ಲ ಕೈಗಾರಿಕಾ ಪ್ರದೇಶಗಳಲ್ಲಿ ಹರಾಜು ಮೂಲಕ ಸಿಎ ನಿವೇಶನ ಹಂಚಿಕೆ ಮಾಡದೇ ನಿಯಮಗಳನ್ನ ಉಲ್ಲಂಘನೆ ಮಾಡಿ ಎಕರೆಗಟ್ಟಲೆ ಜಮೀನನ್ನ ಹಂಚಿಕೆ ಮಾಡಲಾಗಿದೆ. ಇದರಿಂದ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ ಅನ್ನೋದು ದಿನೇಶ್‌ ಕಲ್ಲಹಳ್ಳಿ ಆರೋಪ.

ಜಮೀನಿಗೆ ಹೆಚ್ಚಿಗೆ ಬೇಡಿಕೆ ಇರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪಕ್ಕದಲ್ಲಿ ಅಭಿವೃದ್ಧಿ ಪಡಿಸಿರುವ ಹೈಟೆಕ್‌ ಡಿಫೆನ್ಸ್‌ ಆಂಡ್‌ ಏರೋಸ್ಪೇಸ್‌ ಪಾರ್ಕ್‌, ಗ್ರಾಮಾಂತರ ಜಿಲ್ಲೆಯ ಡಿಫೆನ್ಸ್‌ ಆಂಡ್‌ ಏರೋ ಸ್ಪೇಸ್‌ ಪಾರ್ಕ್‌, ಗ್ರಾಮಾಂತರ ಜಿಲ್ಲೆಯ ಸೋಂಪುರ ಒಂದು ಮತ್ತು ಎರಡನೇ ಹಂತ, ರಾಮನಗರ ಜಿಲ್ಲೆಯ ಬಿಡದಿ ಎರಡನೇ ಹಂತದ ಸೆಕ್ಟರ್‌, ಕೋಲಾರ ಜಿಲ್ಲೆಯ ನರಸಾಪುರ, ತುಮಕೂರಿನ ವಸಂತನರಸಾಪುರದ ಒಂದು, ಎಡು ಹಾಗೂ ಮೂರನೇ ಹಂತ, ಧಾರವಾಡ ಜಿಲ್ಲೆಯ ಗಾಮನಗಟ್ಟಿ, ಜಿಗಣಿ ಎರಡನೇ ಹಂತ, ಹಾರೋಹಳ್ಳಿ ಮೂರನೇ ಹಂತ, ದೊಡ್ಡಬಳ್ಳಾಪು ಮೂರನೇ ಹಂತ, ಮಾನ್ವಿ, ನಂದಿಕೂರು ಕೈಗಾರಿಕಾ ಪ್ರದೇಶಗಳಲ್ಲಿ ಲಭ್ಯವಿರುವ ಸಿಎ ಜಮೀನುಗಳನ್ನ ಹಂಚಿಕೆ ಪ್ರಕ್ರಿಯೆ ಪೂರ್ಣಗೊಳಿಸಲಾಗಿದ್ದು, • M/s.Karnataka Drugs Pharmaceuticals, • M/s. Karnataka Drugs , • M/s.Coffee Point, • M/s. Patil & Patil Infrastructure, • M/s. NCL Enterprises, • M/s.Vinayaka Precisions, • M/s.Hotel Ipcon, • M/s Ditya Interior & Construction, • M/s Shri Krishna Enterprises, • Mr. Mohan Kumar Y N, • M/s Shree Shyam Infrastructure, • M/s. Bio Agile Therapeutics Pvt. Ltd., • M/s Srujan Infrastructure, • M/s. Airay Enterprises, • M/s. Brown, Tree Hospitality, • M/s.Sharavathi BPO Services,• M/s. Discovery Infra Ventures LLP M/s.Trident Developers, • M/s.ADU Infra (Partnership), • M/s Rekha Enterprises (Partnership Firm), • M/s.Siddhartha M. Vihar Trust, • M/s. ADU Infra Arun Partnerk, • M/s.Vaigai Investments Pvt Ltd, • M/s.Arav Enterprises artnership Firm, • M/s. Haritha Logistics Warehousing Pvt. Ltd., • M/s.Advik Gateway, • M/s Saffron Enterprises, • M/s Mech Engineering Power Services, • M/s.Venkateshwara Hotel (Partnership Firm), • M/s.Sanjeevini Multispeciality Hospital, • M/s Shubahada Santosh Gani, • Srl. CM Kiran M/s Ecolife Projects, • M/s. V N Hotels Flat, • Sri GN Murthy S/o late Govindalah, • M/s Naksh Enterprises, • M/s.Shivaganga Enterprises, • M/s. Nayana Enterprises,• M/s.Sapthagiri Inn, • M/s. Rashtriya Groups, • M/s Simposys Healthcare ಸೇರಿದಂತೆ ಹಲವು ಕಂಪನಿಗಳಿಗೆ KIADB ನಿಯಮ ಏಳನ್ನ ಉಲ್ಲಂಘಿಸಿ ಸಿಎ ನಿವೇಶನಗಳನ್ನ ಮಂಜೂರು ಮಾಡಲಾಗಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ನಷ್ಟವುಂಟಾಗಿದೆ ಅನ್ನೋದು ದಿನೇಶ್‌ ಕಲ್ಲಹಳ್ಳಿ ಸಿಎಂಗೆ ಕೊಟ್ಟಿರುವ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.

ಸಾಮಾಜಿಕ ಕಾರ್ಯಕರ್ತ ದಿನೇಶ್‌ ಕಲ್ಲಹಳ್ಳಿ

ದಿನೇಶ್‌ ಕಲ್ಲಹಳ್ಳಿ ಆರೋಪವೇನು.?

  • ಸಿಎ ನಿವೇಶನ ಹರಾಜು ವೇಳೆ ಪಾರದರ್ಶಕತೆ ಕಾಯ್ದುಕೊಂಡಿಲ್ಲ
  • ಭೂಮಿ ಹಂಚಿಕೆ ಮಾಡುವಾಗ ನಕ್ಷೆ ಬದಲಾವಣೆ ಮಾಡಲಾಗಿದೆ
  • ಪಾರ್ಕ್‌ ಸಿಎ ನಿವೇಶವನ್ನೂ ಹಂಚಿಕೆ ಮಾಡಲಾಗಿದೆ
  • ಸಂಪೂರ್ಣ ಪ್ರಕ್ರಿಯೆ ಆನ್‌ ಮಾಡದೆ ನಿವೇಶನ ಹಂಚಿಕೆ ಮಾಡಲಾಗಿದೆ
  • ಆಫ್‌ ಲೈನ್‌ ಮೂಲಕ ಹಂಚಿಕೆ ಮಾಡಿರುವುದು ಹಲವು ಅನುಮಾನಕ್ಕೆ ದಾರಿ
  • ಅಧಿಕಾರಿಗಳು ತಮಗೆ ಬೇಕಾದವರಿಗೆ ನಿವೇಶನ ಹಂಚಿಕೆ ಮಾಡಿದ್ದಾರೆ
  • ಮಾರ್ಗಸೂಚಿ ಪಾಲಿಸದೆ ಹಂಚಿಕೆ ಮಾಡಲಾಗಿದೆ
  • ಸಾರ್ವಜನಿಕ ಹಿತಾಸಕ್ತಿ ಕಾಪಾಡಿಕೊಳ್ಳದೆ ನಿವೇಶನ ಹಂಚಿಕೆ
  • ಕೆಲ ಉದ್ಯಮಿಗಳಿಗೆ ಕಡಿಮೆ ಬೆಲೆಗೆ ಸಿಎ ನಿವೇಶನ ಹಂಚಿಕೆ ಮಾಡಲಾಗಿದೆ
  • ಕೈಗಾರಿಕೋದ್ಯಮಿ ಅಲ್ಲದವರಿಗೂ ನಿವೇಶನ ಹಂಚಿಕೆ ಮಾಡಲಾಗಿದೆ

ಹೀಗೆ ಹತ್ತು ಹಲವು ಆರೋಪಗಳನ್ನ ಮಾಡಿರುವ ದಿನೇಶ್‌ ಕಲ್ಲಹಳ್ಳಿ, ಜೂನ್ 12 ರಂದು ಸಿಎಂಗೆ ದೂರು ನೀಡಿದ್ದಾರೆ. ಸಿಎ ನಿವೇಶನ ಹಂಚಿಕೆ ಮಾಡುವಾಗ ಮೂಲ ಉದ್ದೇಶ ತಿಳಿದು ಅರ್ಜಿ ಸ್ವೀಕಾರ ಮಾಡಬೇಕು ಆದ್ರೆ ಕೆಲ ಅಧಿಕಾರಿಗಳು KIADB ಮುಖ್ಯ ಕಾರ್ಯನಿರ್ವಹಾಧಿಕಾರಿ ಮತ್ತು ಕಾರ್ಯಕಾರಿ ಸದಸ್ಯರ ಸಭೆಯಲ್ಲಿ ರದ್ದು ಮಾಡುವಂತೆ ತೀರ್ಮಾನ ಕೈಗೊಂಡಿದ್ದರೂ ಇದ್ಯಾವುದಕ್ಕೂ ಸೊಪ್ಪು ಹಾಕದೆ ಬೇಕಾದವ್ರಿಗೆ ನಿವೇಶನ ನೀಡಿದ್ದಾರೆ ಅಂತ ಆರೋಪಿಸಲಾಗಿದೆ. ಅಕ್ರಮ ನಡೆದಿದೆ ಅನ್ನೋದಕ್ಕೆ ಮತ್ತೊಂದು ಬಲವಾದ ಸಾಕ್ಷಿ ನೀಡಿರುವ ದಿನೇಶ್‌ ಕಲ್ಲಹಳ್ಳಿ, ಸಿಎ ನಿವೇಶ ಹಂಚಿಕೆ ಮಾಡಲು ಅರ್ಜಿ ಆಹ್ವಾನಿಸುವಾಗ ಕನಿಷ್ಟ ಮೂವತ್ತು ದಿನ ಸಮಯ ನೀಡಬೇಕು ಎಂಬ ನಿಯಮವೇ ಇದೆ. ಆದ್ರೆ ಅಧಿಕಾರಿಗಳು ಫೆ. ಐದರಂದು ಅರ್ಜಿ ಆಹ್ವಾನಿಸಿ ಫೆ. ಇಪ್ಪತ್ತಮೂರರಂದು ಕೊನೆ ದಿನದ ಡೆಡ್‌ ಲೈನ್‌ ಕೊಟ್ಟಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ.

ಮಾರ್ಗಸೂಚಿ ದರದ ಎರಡು ಅಥವಾ ಮೂರು ಪಟ್ಟು ದರಕ್ಕೆ ನಿವೇಶನಗಳನ್ನ ಮಾರಾಟ ಮಾಡಬೇಕಿತ್ತು. ಹೀಗೆ ಮಾಡಿದ್ದರೆ ಸರ್ಕಾರದ ಬೊಕ್ಕಸಕ್ಕೆ ನೂರಾರು ಕೋಟಿ ಅನುದಾನ ಹರಿದು ಬರುತ್ತಿತ್ತು. ಆದ್ರೆ ಕೆಲ ಅಧಿಕಾರಿಗಳ ಹಣದಾಸೆಯಿಂದಾಗಿ ಸರ್ಕಾರಕ್ಕೆ ದೊಡ್ಡ ಮಟ್ಟದಲ್ಲಿ ಆರ್ಥಿಕ ನಷ್ಟ ವುಂಟುಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಅನ್ನೋದು ದೂರಿನಲ್ಲಿ ಉಲ್ಲೇಖವಾಗಿದೆ.

ಸಿಎ ನಿವೇಶನ ಹಂಚಿಕೆ ಮಾಡುವಾ ಅರ್ಜಿ ಸಲ್ಲಿಸಿದ ಸಂಸ್ಥೆಗಳ ಅನುಭವದ ಆಧಾರದ ಮೇಲೂ ಹಂಚಿಕೆ ಮಾಡಬೇಕಿದೆ. ಆದ್ರೆ ಈ ನಿಯಮವನ್ನೂ ಇಲ್ಲಿ ಉಲ್ಲಂಘಿಸಲಾಗಿದೆ. ಚುನಾವಣೆಗೂ ಮೊದಲು ಅಂದರೆ 05-03-2024 ಅಂದು ರಾಜ್ಯ ಮಟ್ಟದ ಏಕಗವಾಕ್ಷಿ ಸಮಿತಿ ಸಭೆಯಲ್ಲಿ ರಾಜ್ಯ ವ್ಯಾಪ್ತಿಯ KIADB ಪ್ರದೇಶದಲ್ಲಿರುವ ಸಿಎ ಜಮೀನು ಹಂಚಿಕೆ ಮಾಡುವ ನಿರ್ಣಯ ಕೈಗೊಂಡಿದ್ದಾರೆ ಅಂತ ಆರೋಪಿಸಲಾಗಿದೆ. ಕೂಡಲೇ ಹಂಚಿಕೆಯಾಗಿರುವ ಸಿಎ ನಿವೇಶನಗಳನ್ನ ರದ್ದು ಮಾಡಬೇಕು ಹಾಗೆನೇ ಭ್ರಷ್ಟಚಾರದಲ್ಲಿ ಭಾಗಿಯಾಗಿರುವ ಸಚಿವರೂ ಸೇರಿದಂತೆ ಅಧಿಕಾರಿಗಳ ವಿರುದ್ಧ ಸೂಕ್ತ ತನಿಖೆಯನ್ನ ನಡೆಸಬೇಕೆಂದು ದಿನೇಶ್‌ ಕಲ್ಲಹಳ್ಳಿ ಒತ್ತಾಯಿಸಿದ್ದಾರೆ.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist