ಬೆಂಗಳೂರು, (www.thenewzmirror.com) ;
ತೀವ್ರ ಕುತೂಹಲ ಮೂಡಿಸಿದ್ದ ಕರ್ನಾಟಕ ವಿಧಾನಸಭಾ ಚುನಾವಣೆ 2023ರ ಮತದಾನ ಅಂತ್ಯಗೊಂಡಿದೆ. ರಾಜ್ಯಾದ್ಯಂತ ಸುಮಾರು ಶೇಕಡಾ 66 ರಷ್ಟು ಮತದಾನವೂ ಆಗಿದೆ. ಮತದಾನ ಪೂರ್ಣಗೊಳ್ಳುತ್ತಿದ್ದಂತೆ ಎಕ್ಲರ ಚಿತ್ತ ಏಣಿಕಾ ದಿನ ಮೇ 13 ರತ್ತ ನೆಟ್ಟಿದೆ.
ಇನ್ನೂ ಈ ಬಾರಿ ರಾಜ್ಯ ಬಿಜೆಪಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲು ಹಲವು ತಂತ್ರಗಾರಿಕೆಯನ್ನ ನಡೆಸಿತ್ತು. ಆಡಳಿತ ವಿರೋಧಿ ಅಲೆಯನ್ನ ತಪ್ಪಿಸಲು ಮತ್ತೆ ಮತದಾರ ಓಲೈಕೆಗೆ ಮೋದಿ ಅವರ ಮೂಲಕ ಪ್ರಚಾರ ನಡೆಸಿ, ಅಬ್ಬರದ ರೋಡ್ ಶೋ, ಪ್ರಚಾರದ ನಡುವೆಯೂ South First ಸಮೀಕ್ಷೆಯಲ್ಲಿ ಬಿಜೆಪಿಗೆ ಹಿನ್ನಡೆ ಉಂಟಾಗಲಿದೆ ಎಂದಿದೆ.
ಇದರ ಬೆನ್ನಲ್ಲೇ ಚುನಾವಣೋತ್ತರ ಸಮೀಕ್ಷೆ ಹೊರ ಬಿದ್ದಿದ್ದು, ಮತ್ತೆ ರಾಜ್ಯದಲ್ಲಿ ಅತಂತ್ರ ವಿಧಾನಾಸಭೆ ಅನ್ನೋದು ಗೊತ್ತಾಗುತ್ತಿದೆ.
ಟಿವಿ 9 ಮತ್ತು ಸಿ ವೋಟರ್, ರಿಪಬ್ಲಿಕ್ ಟಿವಿ, ಜೀ ಮ್ಯಾಟ್ರಿಕ್ಸ್, ಜನ್ ಕೀ ಬಾಯ್ ಹಾಗೂ ಸುವರ್ಣ ನ್ಯೂಸ್, ಟೈಮ್ಸ್ ನೌ, ರಾಜನೀತಿ, ಟಿವಿ 9 ಭಾರತ್ ವರ್ಷ್ ಹಾಗೂ ಪೋಲ್ ಸ್ಟಾರ್ಟ್, ನ್ಯೂಸ್ ನೇಷನ್ ಹಾಗೂ ಸಿಜಿಎಸ್, ಇಂಡಿಯಾ ಟಿವಿ ಹಾಗೂ ಸಿಎನ್ ಎಕ್ಸ್, ಸೇರಿದಂತೆ ಹಲವು ಸಂಸ್ಥೆಗಳು ಸರ್ವೆ ನಡೆಸಿದ್ದವು. ಇದರಲ್ಲಿ ಬಹುಪಾಲು ಅತಂತ್ರ ವಿಧಾನಸಭೆಯ ಸುಳಿವು ಸಿಕ್ಕಿದ್ದು 2018 ರ ರೀತಿಯಲ್ಲಿ ಜೆಡಿಎಸ್ ಕಿಂಗ್ ಮೇಕರ್ ಆಗುವ ಸಾಧ್ಯತೆಯಿದೆ.
ಮತದಾನ ಮಾಡಿದ ಮತದಾರರಿಂದ ಮಾಹಿತಿ ಪಡೆದು ನಡೆಸಿದ ಈ ಸಮೀಕ್ಷೆಯಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರಬಹುದು ಎನ್ನುವುದನ್ನು ಅಂದಾಜಿಸಲಾಗಿದೆ.
ಹಾಗಿದ್ರೆ ಯಾವ ಸರ್ವೆಯಲ್ಲಿ ಯಾವ ಪಕ್ಷಗಳಿಗೆ ಎಷ್ಟೆಲ್ಲಾ ಸ್ಥಾನ ಪಡೆಯುತ್ತವೆ ಅನ್ನೋದ್ರ ಚುನಾವಣೋತ್ತರ ಸಮೀಕ್ಷೆಯ ಮಾಹಿತಿ
ಟಿ.ವಿ 9 ಮತ್ತು ಸಿ ವೋಟರ್
ಟಿ.ವಿ 9 ಮತ್ತು ಸಿ ವೋಟರ್ ನಡೆಸಿದ ಚುನಾವಣೋತ್ತರ ಸಮೀಕ್ಷೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ 100-112 ಸ್ಥಾನ, ಬಿಜೆಪಿ 83-95 ಸ್ಥಾನಗಳನ್ನ ಪಡೆಯಲಿದೆಯಂತೆ ಹಾಗೆನೇ ಜೆಡಿಎಸ್ 21-29 ಸ್ಥಾನಗಳನ್ನು ಪಡೆದ್ರೆ, ಇತರರು 02-06 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಳ್ಳಲಿದ್ದಾರಂತೆ.
ರಿಪಬ್ಲಿಕ್ ಟಿವಿ
ಇನ್ನು ರಿಪಬ್ಲಿಕ್ ಟಿವಿ ನಡೆಸಿದ ಸಮೀಕ್ಷೆ ಪ್ರಕಾರ ಬಿಜೆಪಿ 85-100, ಕಾಂಗ್ರೆಸ್ 94-108, ಜೆಡಿಎಸ್ 24-32 ಸ್ಥಾನ ಪಡೆಯಲಿದೆಯಂತೆ.
ಪೋಲ್ ಸ್ಟಾರ್
ಪೋಲ್ ಸ್ಟಾರ್ ಸಮೀಕ್ಷೆ ಪ್ರಕಾರ ಕಾಂಗ್ರೆಸ್ 99-110, ಜೆಡಿಎಸ್ 21-26 ಮತ್ತು ಬಿಜೆಪಿಗೆ 83-95 ಸ್ಥಾನ ಲಭಿಸುವ ಸಾಧ್ಯತೆ ಇದೆ
ಜೀ ಮ್ಯಾಟ್ರಿಕ್ಸ್
ಜೀ ಮ್ಯಾಟ್ರಿಕ್ಸ್ ನಡೆಸಿದ ಸರ್ವೆ ಪ್ರಕಾರ ಕಾಂಗ್ರೆಸ್ 108-118, ಬಿಜೆಪಿ 79-89 ಮತ್ತು ಜೆಡಿಎಸ್ ಗೆ 25-35 ಸ್ಥಾನ ಪಡೆದುಕೊಳ್ಳಲಿವೆಯಂತೆ.
ಸುವರ್ಣ ನ್ಯೂಸ್ ಹಾಗೂ ಜನ್ ಕೀ ಬಾತ್
Jan Ki Baat ಸಂಸ್ಥೆ ಹಾಗೂ ಸುವರ್ಣ ಕನ್ನಡ ಟಿವಿ ಮಾಡಿರುವ ಎಕ್ಸಿಟ್ ಪೋಲ್ ನಲ್ಲಿ ಬಿಜೆಪಿಗೆ 94ರಿಂದ 117 ಸ್ಥಾನ, ಕಾಂಗ್ರೆಸ್ 91ರಿಂದ 106 ಹಾಗೂ ಜೆಡಿಎಸ್ 14ರಿಂದ 20 ಸ್ಥಾನ ಪಡೆಯಲಿವೆಯಂತೆ.
ಯಾವ ಪಕ್ಷಕ್ಕೆ ಎಷ್ಟು ಮತ ಹಂಚಿಕೆ
ಎಕ್ಸಿಟ್ ಪೋಲ್ ನ ಪ್ರಕಾರ ಬಿಜೆಪಿಗೆ 37.5ರಿಂದ 39%, ಕಾಂಗ್ರೆಸ್‌ಗೆ 38ರಿಂದ 40% ರಷ್ಟು ಜೆಡಿಎಸ್‌ಗೆ 14ರಿಂದ 17% ಮತ ಹಂಚಿಕೆಯಾಗಿದೆಯಂತೆ. ಹಾಗೆನೇ ಇತರರಿಗೆ 8.5ರಿಂದ 6% ಮತ ಹಂಚಿಕೆಯಾಗಲಿದೆ ಎಂದು ಸಮೀಕ್ಷೆ ವಿವರ ತಿಳಿಸಿದೆ.
ಇನ್ನು 2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 105 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಕಾಂಗ್ರೆಸ್ 80 ರಲ್ಲಿ, ಜೆಡಿಎಸ್ 38 ಹಾಗೂ ಪಕ್ಷೇತ್ರ ಅಭ್ಯರ್ಥಿಗಳು 02 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು.
ಪ್ರಧಾನಿ ಮೋದಿ ಪದೇಪದೆ ರಾಜ್ಯಕ್ಕೆ ಭೇಟಿ ನೀಡಿ ಪ್ರಚಾರ ಮಾಡಿದ್ದರಿಂದ ಸ್ವಲ್ಪ ಮಟ್ಟಿಗೆ ಮತಗಳು ಬದಲಾಗಿವೆ ಎನ್ನಲಾಗಿತ್ತಾದರೂ ಚುನಾವಣೋತ್ತರ ಸಮೀಕ್ಷೆ ಸುಳ್ಳು ಅನ್ನೋದು ತಿಳಿದುಬಂದಿದೆ. ಅದೇನೇ ಇರಲಿ ಇದು ಚುನಾವಣೋತ್ತರ ಸಮೀಕ್ಷೆ ಆಗಿದ್ದು ಅಂತಿಮ ಫಲಿತಾಂಶ ಮೇ 13 ರಂದು ಗೊತ್ತಾಗಲಿದ್ದು ಅಭ್ಯರ್ಥಿಗಳ ಎದೆಯಲ್ಲಿ ಆತಂಕ ಮನೆ ಮಾಡಿದಂತೂ ಸುಳ್ಳಲ್ಲ.