ಅಯ್ಯೋ KSRTC ಟೈರ್ ನಲ್ಲಿ ತಂತಿ ! ; ಮಲೈ ಮಹದೇಶ್ವರನೇ ಕಾಪಾಡಬೇಕು.!

ಬೆಂಗಳೂರು,(www.thenewzmirror.com);

ದೇಶದಲ್ಲಿ ಅತಿ ಹೆಚ್ಚು ಪ್ರಶಸ್ತಿ ಪಡೆದಿರುವ ಸಾರಿಗೆ ಸಂಸ್ಥೆ ಅಂದರೆ ಅದರು KSRTC. ವಿವಿಧ ವಿಭಾಗಗಳಲ್ಲಿ ವಿಶಿಷ್ಟ ಸೇವೆ ನೀಡುವ ಮೂಲಕ 300 ಕ್ಕೂ ಹೆಚ್ಚು ಪ್ರಶಸ್ತಿಗಳನ್ನ ತನ್ನ ಮುಡಿಗೇರಿಸಿಕೊಂಡಿರುವ ನಿಗಮ ಕೆಳಗಡೆ ಎಲ್ಲವೂ ಹುಳುಕು ಎಂಬಂತಾಗಿದೆ.

RELATED POSTS

ಈ ಹಿಂದೆ ಟೈರ್ ನಲ್ಲಿ ಆಯಿಲ್ ಸೋರಿಕೆ ಕುರಿತಂತೆ ವರದಿ ಪ್ರಸಾರ ಮಾಡಿದ್ದ ನಿಮ್ಮ ನ್ಯೂಝ್ ಮಿರರ್ ಇದೀಗ ಮತ್ತೊಂದು ಅವ್ಯವಸ್ಥೆಯನ್ನ ಅನಾವರಣ ಮಾಡಲು ಮುಂದಾಗಿದೆ. ಅದೂ ಕೆಎಸ್ಸಾರ್ಟಿಸಿ ಬಸ್ ಚಕ್ರ (Tyre) ನ ಅಸಲಿ ಕಹಾನಿ..!

ಟೈರ್ ನಲ್ಲಿ ತಂತಿ ಕಾಣುತ್ತಿರುವುದು

ನಂಜನಗೂಡಿನಿಂದ ಮಲೈ ಮಹದೇಶ್ವರನ ಬೆಟ್ಟಕ್ಕೆ ನಿತ್ಯ ಸಾಗುವ ಕೆಎಸ್ಸಾರ್ಟಿಸಿ ಬಸ್ ನ ಮುಂದಿನ ಚಕ್ರದಲ್ಲಿ ತಂತಿ ಕಾಣಿಸುತ್ತಿದೆ. ಅರೆ ತಂತಿ ಕಂಡರೆ ಏನು ತಪ್ಪು ಅಂತ ಅಂದುಕೊಳ್ಳಬೇಡಿ.. ಅಷ್ಟರ ಮಟ್ಟಿಗೆ ಸವೆದು ಹೋಗಿರುವ ಚಕ್ರ ಈಗಲೂ ರಸ್ತೆ ಮೇಲೆ ಓಡಾಡುತ್ತಿದೆ.

ನ್ಯೂಝ್ ಮಿರರ್ ಗೆ ಸಿಕ್ಕಿರುವ ಮಾಹಿತಿ ಪ್ರಕಾಣ ಬಸ್ ನ ಮುಂದಿನ ಚಕ್ರಕ್ಕೆ ತಂತಿ ಕಾಣಿಸುತ್ತಿರುವ ಟ್ಟೈರ್ ಗಳನ್ನ ಅಳವಡಿಸಿ ನಂಜನಗೂಡು ಘಟಕದಿಂದ ಮಲೈ ಮಹದೇಶ್ವರ ಬೆಟ್ಟಕ್ಕೆ ಮಾರ್ಗಚರಣೆಗಾಗಿ ಕಳುಹಿಸಿ ಕೊಡಲಾಗುತ್ತಿದೆ. ಈ ರೀತಿಯಾದ ಬೇಜವಾಬ್ದಾರಿ/ನಿರ್ಲಕ್ಷ್ಯತನದಿಂದ ಮಾರ್ಗಾಚರಣೆಗೆ ಕೊಡುತ್ತಿರುವ ಡಿಪೋ ಮ್ಯಾನೇಜರ್ ಗೆ ಮಲೈ ಮಹದೇಶ್ವರನೇ ಉತ್ತಮ ಬುದ್ದಿ ಕೊಡಬೇಕಿದೆ.

ಇತ್ತೀಚೆಗೆ ಕೊಳ್ಳೇಗಾಲ ಘಟಕದಲ್ಲಿ ಇದೇ ರೀತಿಯ ಟೈರ್ ಅಳವಡಿಸಿ ಮಾರ್ಗಾಚರಣೆಗೆ ಕಳುಹಿಸಿ ಕೊಟ್ಟಂತಹ ಸಂದರ್ಭದಲ್ಲಿ ಏಕಾಏಕಿ ಟೈರ್ ಬರ್ಸ್ಟ್ ಆಗಿ ಮಹಿಳಾ ಪ್ರಯಾಣಿಕರೊಬ್ಬರ ಕಾಲು ತುಂಡಾಗಿತ್ತು. ಈ ಘಟನೆಗೆ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ಪೋಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು.

ಈ ರೀತಿಯಾಗಿ ಕಳಪೆ ಗುಣಮಟ್ಟದ ಟೈರ್ ಗಳನ್ನ ಅಳವಡಿಸಿ ಬೇಜವಾಬ್ದಾರಿ ನಿರ್ಲಕ್ಷ್ಯತನದಿಂದ ಮಾರ್ಗಾಚರಣೆಗೆ ಕಳುಹಿಸಿ ಕೊಡುತ್ತಿದ್ದಾರೆ. ಮಾರ್ಗಚರಣೆಗೆ ಕಳುಹಿಸಿ ಕೊಟ್ಟಿರುವ ತಪ್ಪಿತಸ್ಥ ಅಧಿಕಾರಿಗಳ/ಸಿಬ್ಬಂದಿಗಳ ವಿರುದ್ಧ ಸೂಕ್ತ ಶಿಸ್ತು ಕಠಿಣ ಕ್ರಮ ಕೈಗೊಳ್ಳಬೇಕು ಎನ್ನುವುದು ನ್ಯೂಝ್ ಮಿರರ್ ಕಳಕಳಿಯ ಮನವಿ.

ಈ ರೀತಿ ನಿರ್ಲಕ್ಷ್ಯ/ ಬೇಜವಾಬ್ದಾರಿತನ ತೋರುತ್ತಿರುವ ಅಧಿಕಾರಿ/ಸಿಬ್ಬಂದಿಯಿಂದ ಸಂಸ್ಥೆಯ ಗೌರವ-ಘನತೆಗೆ ಧಕ್ಕೆ ಬರುವ ಕೆಲಸ ಆಗುತ್ತಿದೆ. ಒಂದು ವೇಳೆ ಮಾರ್ಗ ಮಧ್ಯೆ ಕೊಳ್ಳೇಗಾಲ ಡಿಪೋದ ಬಸ್ ನಲ್ಲಿ ಆದ ಘಟನೆ ಮತ್ತೆ ಮರುಕಳುಹಿಸಬೇಕಾ.? ಒಂದು ವೇಳೆ ಅನಾಹುತವಾದರೆ ಅದಕ್ಕೆ ಯಾರು ಹೊಣೆ.? ಎನ್ನುವ ಪ್ರಶ್ನೆಗೆ ಕೆಎಸ್ಸಾರ್ಟಿಸಿ (KSRTC) ವ್ಯವಸ್ಥಾಪಕ ನಿರ್ದೇಶಕ ಅನ್ಬು ಕುಮಾರ್ ಅವರೇ ಉತ್ತರ ಕೊಡುವ ಜತೆಗೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಶಿಸ್ತು ಕಠಿಣ ಕ್ರಮ ಕೈಗೊಳ್ಳಬೇಕಿದೆ.

ಚಾಲಕರು ಹೇಳುವುದು ಏನು.?

ಸಾಮಾನ್ಯವಾಗಿ ಡಿಪೋದಿಂದ ಬಸ್ ರೂಟ್ ಗೆ ಹೊರಡುತ್ತೆ ಎಂದರೆ ಬಸ್ ಎಲ್ಲ ರೀತಿಯಲ್ಲೂ ಸಮರ್ಪಕವಾಗಿದೆಯಾ.? ಓಡಿಸಲು ಯೋಗ್ಯ ಅಗಿದೆಯಾ ಎನ್ನುವುದನ್ನು ಪರಿಶೀಲಿಸಿ ಆನಂತರ ಬಸ್ ಹತ್ತುತ್ತಾರೆ. ಆದರೆ ಕೆಲವು ಸನ್ನಿವೇಶದಲ್ಲಿ ಡಿಪೋ ದಲ್ಲಿರುವ ಅಧಿಕಾರಿಗಳು ಬಲವಂತದಿಂದ ರಸ್ತೆಗೆ ಇಳಿಯಲು ಯೋಗ್ಯವಿಲ್ಲದಿದ್ರೂ ಅಂಥ ಬಸ್ ಗಳನ್ನ ಓಡಿಸಿ ಎಂದು ದೌರ್ಜನ್ಯ ಮಾಡುತ್ತಾರಂತೆ. ಏನಾದರೂ ಅನಾಹುತವಾದರೆ ಏನು ಮಾಡೋದು ಅಂದರೆ ಆದ ಮೇಲೆ ನೋಡಿಕೊಳ್ಳೋಣಾ ಮೊದಲು ಹೋಗು ಎಂದು ಹೇಳುತ್ತಾರಂತೆ.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist