ಮೈಸೂರು, (www.thenewzmirror.com) :
ಮೈಸೂರು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಎದುರು ಕಾಂಗ್ರೆಸ್ ಅಭ್ಯರ್ಥಿಯಾಗಿ ಯತೀಂದ್ರ ಸಿದ್ದರಾಮಯ್ಯ ಕಣಕ್ಕೆ ಇಳಿಯಲಿದ್ದಾರೆ. ಈ ಕುರಿತ ಚರ್ಚೆ ಮೈಸೂರು ಕಾಂಗ್ರೆಸ್ ನಾಯಕರಲ್ಲಿ ಹರಿದಾಡುತ್ತಿದ್ದು ಇನ್ನೆರಡು ದಿನಗಳಲ್ಲಿ ಸ್ಪಷ್ಟತೆ ಸಿಗಲಿದೆ.
ಈಗಾಗಲೇ ಬಿಜೆಪಿ ಎರಡು ಬಾರಿ ಗೆದ್ದಿದ್ದ ಪ್ರತಾಪ್ ಸಿಂಹ ಅವರನ್ಮ ಬಿಟ್ಟು ರಾಜವಂಶಸ್ಥ ಯದುವೀರ್ ಒಡೆಯರ್ ಅವ್ರಿಗೆ ಟಿಕೆಟ್ ನೀಡಿದೆ. ಅತ್ತ ಯದುವೀರ್ ಗೆ ಎದುರಾಳಿಯಾಗಿ ಕೈ ಪಡೆ ಯಾರನ್ನ ಇಳಿಸಬೇಕು ಎಂಬ ಚರ್ಚೆಯ ನಡುವೆ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಹೆಸರು ಕೇಳಿ ಬರುತ್ತಿದೆ.
ವರುಣಾ ಕ್ಷೇತ್ರದಿಂದ ಶಾಸಕರಾಗಿರುವ ಯತೀಂದ್ರಗೆ ಮೈಸೂರು ಭಾಗದಲ್ಲಿ ತಮ್ಮದೆ ಆದ ಹಿಡಿತಹೊಂದಿದ್ದಾರೆ. ಅವರನ್ನ ಕಣಕ್ಕೆ ಇಳಿಸಿದರೆ ಪಕ್ಷಕ್ಕೆ ಅನುಕೂಲವಾಗಲಿದೆ ಎಂಬ ಲೆಕ್ಕಾಚಾರ ಸಿದ್ದರಾಮಯ್ಯ ಅವರದ್ದು. ಹೀಗಾಗಿಯೇ ಮಗನಿಗೆ ಟಿಕೆಟ್ ಕೊಡಿಸಲು ಕಸರತ್ತನ್ನ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಈಗಾಗಲೇ ಯದುವೀರ್ ಪ್ರಚಾರ ಆರಂಭಿಸಿದ್ದು ಕಾರ್ಯಕರ್ತರನ್ನ ಭೇಟಿ ಮಾಡುತ್ತಿದ್ದಾರೆ. ರಾಜವಂಶಸ್ಥರಾಗಿದ್ದರೂ ಮೈಸೂರು ಜನರ ಪರಿಚಯ ಅಷ್ಟಾಗಿಲ್ಲ. ಇಂಥ ಸಂದರ್ಭದಲ್ಲಿ ಅವರಿಗೆ ಠಕ್ಕರ್ ಕೊಡೋಕೆ ಯತೀಂದ್ರ ಅವರೇ ಸೂಕ್ತ ಎಂದು ಭಾವಿಸಿದ್ದಾರೆ ಆ ಭಾಗದ ಕಾಂಗ್ರೆಸ್ ನಾಯಕರು. ಹೀಗಾಗಿಯೇ ಯತೀಂದ್ರ ಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದಾರೆ. ಇದೇ ತಿಂಗಳ 18 ರ ನಂತರ ಕಾಂಗ್ರೆಸ್ ತನ್ನ ಪಟ್ಟಿ ಪ್ರಕಟ ಮಾಡಲಿದೆ.