ಬೆಂಗಳೂರು, (www.thenewzmirror.com );
ಐಟಿಸಿಟಿ, ಬಿಟಿಸಿಟಿ ಅಂತೆಲ್ಲಾ ಕರೆಸಿಕೊಳ್ಳುತ್ತಿರುವ ಬೆಂಗಳೂರಿನ ಬಹುತೇಕ ಶಾಲೆಗಳ ಪಕ್ಕದಲ್ಲಿ ಬಸ್ ನಿಲ್ದಾಣಗಳೇ ಇಲ್ವಂತೆ..! ಹೀಗಂತರ ಸಮೀಕ್ಷೆಯೊಂದು ಬಹಿರಂಗ ಪಡಿಸಿದೆ.
ಹೀಗೆ ಬಸ್ ನಿಲ್ದಾಣಗಳು ಇಲ್ಲದೆ ಇರುವುದರಿಂದ ಟ್ರಾಫಿಕ್ ಸಮಸ್ಯೆಗೆ ಕಾರಣವಾಗುತ್ತಿದೆ ಎಂದೂ ಸಮೀಕ್ಷೆಯಿಂದ ತಿಳಿದುಬಂದಿದೆ.
ಬೆಂಗಳೂರು ಪೊಲೀಸರು ನಡೆಸಿದ ಸರ್ವೆಯ ಪ್ರಕಾರ ಬಹುತೇಕ ಶಾಲೆಗಳ ಮುಂದೆ ಟ್ತಾಫಿಕಗ ನಿಯಂತ್ರಣಕ್ಕೆ ಬೇಕಾದ ಯಾವುದೇ ಕ್ರಮಗಳಿಲ್ಲ ಅನ್ನೋ ಅಂಶ ಗೊತ್ತಾಗಿದ್ದಲ್ಲದೇ 1050 ಶಾಲೆಗಳ ಪೈಕಿ ಅರ್ಧದಷ್ಟು ಶಾಲೆಗಳು ಬಸ್ ನಿಲ್ದಾಣದಿಂದ ದೂರವಿದಾವೆ ಅನ್ನೋದೂ ತಿಳಿದುಬಂದಿದೆ.
ನಗರದಲ್ಲಿ 5,366 ಶಾಲೆಗಳು 9.5 ಲಕ್ಷ ಹುಡುಗರು ಮತ್ತು 8.8 ಲಕ್ಷ ಹುಡುಗಿಯರು ಸೇರಿದಂತೆ 18 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತಿವೆ. ಈ ಪೈಕಿ 1,050 ಶಾಲೆಗಳ ಸಮೀಕ್ಷೆ ನಡೆಸಲಾಗಿದೆ.
96% ಶಾಲೆಗಳು ಒಂದೇ ಪ್ರವೇಶ ಮತ್ತು ನಿರ್ಗಮನವನ್ನು ಹೊಂದಿವೆ ಎಂದು ಸಮೀಕ್ಷೆಯು ತೋರಿಸಿದೆ. ಇದು ಒಂದೇ ಸ್ಥಳದಲ್ಲಿ ದಟ್ಟಣೆಯನ್ನು ಕೇಂದ್ರೀಕರಿಸಲು ಕಾರಣವಾಗುತ್ತಿದೆಯಂತೆ.
ಸಮೀಕ್ಷೆಯ ಪ್ರಕಾರ ಬೆಂಗಳೂರಿನ ಶೇಕಡಾ 52% ರಷ್ಟು ಶಾಲೆಗಳ ಸಮೀಪ ಬಸ್ ನಿಲ್ದಾಣಗಳಿದಾವೆ ಅನ್ನೋದು ತಿಳಿದುಬಂದಿದೆ.
ಹಾಗೆನೇ ಶೇಕಡಾ 13 ರಷ್ಟು ಶಾಲೆಗಳು ಎಲ್ಲಾ ಸಂಚಾರ ನಿರ್ವಹಣೆ ಕ್ರಮಗಳನ್ನು ಹೊಂದಿವೆ, ಆದರೆ 14% ನಲ್ಲಿ ಇದಾವುದೂ ಇಲ್ಲ, ಅವುಗಳನ್ನು ಹೆಚ್ಚಿನ ಅಪಾಯದ ವರ್ಗವೆಂದು ತೆಗೆದುಕೊಳ್ಳಲಾಗಿದೆ. ಸಮೀಕ್ಷೆ ನಡೆಸಿದ ಶಾಲೆಗಳಲ್ಲಿ 232 ಶಾಲೆಗಳು ಮಾತ್ರ ಸಂಚಾರ ನಿರ್ವಹಣೆ ವಿಧಾನಗಳಿಗೆ ಸ್ಪಂದನೆ ನೀಡುತ್ತಿದ್ದು, ಇವುಗಳಲ್ಲಿ 158 ಶಾಲೆ ಸಂಸ್ಥೆಗಳು ಟ್ರಾಫಿಕ್ ಸಮಸ್ಯೆಯನ್ನ ಪಿಟಿ ಶಿಕ್ಷಕರು, ಗೃಹ ರಕ್ಷಕ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿ ಮೂಲಕ ನಿರ್ವಹಣೆ ಮಾಡುತ್ತಿದ್ದಾರೆ. ಉಳಿದವುಗಳನ್ನು ಸಂಚಾರ ಪೊಲೀಸರು ನಿರ್ವಹಿಸುತ್ತಾರೆ ಎಂದು ತಿಳಿದುಬಂದಿದೆ.
ಪ್ರತಿ ದಿನ ಶಾಲೆಗಳು ಬಿಟ್ಟಾಗ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿತ್ತು. ಇದಕ್ಕೆ ಕಾರಣ ತಿಳಿಯುವ ನಿಟ್ಟಿನಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಈ ಅಂಶಗಳು ತಿಳಿದುಬಂದಿದ್ದು, ಮಕ್ಕಳಿಹೆ ಸುರಕ್ಷತೆ ನೀಡುವ ನಿಟ್ಟಿನಲ್ಲಿ ಕ್ರಮಗಳನ್ನ ಕೈಗೊಳ್ಳೋಕೆ ಸಮೀಕ್ಷೆ ಸಹಕಾರಿಯಾಗಲಿದೆ.
ಸದ್ಯದಲ್ಲೇ ಶಾಲೆಗಳು ಆರಂಭವಾಗುತ್ತಿದ್ದು, ಈ ಸಮೀಕ್ಷೆ ಪ್ರಕಾರ ಸಾರ್ವಜನಿಕ ಸಾರಿಗೆ ಹೆಚ್ಚುಬಳಸುವ ನಿಟ್ಟಿನಲ್ಲಿ ಪೋಷಕರ ಜತೆ ಮಾತನಾಡಲು ಇದು ಸಹಾಯವಾಗಲಿದೆ ಅನ್ನೋದು ಪೊಲೀಸರ ಲೆಕ್ಕಾಚಾರ.