BIG Impact | 100 ರೂ ಬದಲು 250 ರೂ ಹೆಚ್ಚಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ: ಇಲಾಖೆ ಆದೇಶಕ್ಕೆ ನೌಕರರ ಸಮಾಧಾನ

Transport Minister Ramalingareddy increased by Rs 250 instead of Rs 100: Employees are satisfied with the department's order

ಬೆಂಗಳೂರು, (www.thenewzmirror.com) ;

ಆಯುಧ ಪೂಜೆಗೆ ಬಸ್ ಗಳಿಗೆ ಹೆಚ್ಚಿನ ಹಣ ನೀಡದೇ ಇರುವಷ್ಟು KSRTC ಬಡವಾಯ್ತಾ ಎನ್ನುವ ಪ್ರಶ್ನೆ ಉದ್ಭವಿಸಿತ್ತು. ಈ ಕುರಿತಂತೆ ನಿಮ್ಮ ದಿ ನ್ಯೂಝ್ ಮಿರರ್ ವರದಿಯನ್ನೂ ಪ್ರಕಟಮಾಡಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತ ಸಾರಿಗೆ ಅಚಿವ ರಾಮಲಿಂಗಾರೆಡ್ಡಿ ಪ್ರತಿ ಬಸ್ ಗೆ 100 ರೂ ಬದಲು 250 ರೂ ನೀಡಲು ತೀರ್ಮಾನಿಸಲಾಗಿದೆ.

RELATED POSTS

ಹಣ ಹೆಚ್ಚಳ ಮಾಡಿದ್ದರ ಕುರಿತಂತೆ ಮಾಹಿತಿ ನೀಡಿರುವ KSRTC ಆಡಳಿತ ಮಂಡಳಿ, ಕೆ ಎಸ್ ಆರ್ ಟಿ ಸಿ ಸಂಸ್ಥೆಯಲ್ಲಿ ಆಯುಧಪೂಜೆಗೆ ರೂ.100 ನೀಡುತ್ತಿರುವುದನ್ನು‌ ರೂ.250 ಕ್ಕೆ ಹೆಚ್ಚಿಸಲಾಗಿದೆ ಎಂದು ತಿಳಿಸಿದೆ‌.

ಒಂದು ಘಟಕದಲ್ಲಿ ಸರಿ ಸುಮಾರು 100 ರಿಂದ 500 ಬಸ್ಸುಗಳಿರುತ್ತವೆ. ಒಂದು ಬಸ್ಸಿಗೆ ರೂ. 100 ಎಂದು ಒಂದು ಘಟಕಕ್ಕೆ / ಕಾರ್ಯಾಗಾರಕ್ಕೆ ನೀಡಲಾಗುತ್ತದೆ. ಹಾಗೆನೇ ಈ ಹಿಂದೆ ಪ್ರತಿ ಬಸ್ ಗೆ ಆಯುಧ ಪೂಜೆ ಪ್ರಯುಕ್ತ ನೀಡುತ್ತಿದ್ದ ಹಣದ ಮಾಹಿತಿಯನ್ನೂ ನೀಡಿದೆ‌.

2008 ರವರೆಗೂ ರೂ.10 ಪ್ರತಿ‌ ಬಸ್ಸಿಗೆ , 2009 ರಲ್ಲಿ ಪ್ರತಿ ಬಸ್ಸಿಗೆ ರೂ 30 ಕ್ಕೆ ಏರಿಕೆ ಮಾಡಲಾಯಿತು. 2016 ರಲ್ಲಿ ಪ್ರತಿ ಬಸ್ಸಿಗೆ ರೂ.50 ಕ್ಕೆ ಏರಿಕೆ , 2017 ರಲ್ಲಿ ಪ್ರತಿ‌ ಬಸ್ಸಿಗೆ ರೂ.100 ಕ್ಕೆ ಏರಿಕೆ  ‌ಮಾಡಲಾಗಿತ್ತು. ರೂ.100 ಪ್ರತಿ‌ ಬಸ್ಸಿಗೆ ನೀಡುವ ಮೊತ್ತವು 2023 ರವರೆಗೂ ರೂ.100 ಆಗಿತ್ತು.

ಇದೀಗ ಅಂದರೆ 2024 ಪ್ರಸಕ್ತ ವರ್ಷದಲ್ಲಿ ಆಯುಧಪೂಜೆಗೆ ಪ್ರತಿ‌ ಬಸ್ಸಿಗೆ ಈಗ ನೀಡಲಾಗುತ್ತಿರುವ ರೂ.100 ಅನ್ನು ರೂ.250 ಕ್ಕೆ ಹೆಚ್ಚಿಸಲು ಮಾನ್ಯ ಸಾರಿಗೆ ಹಾಗೂ ಮುಜರಾಯಿ ಸಚಿವರು ಆದೇಶಿಸಿದ್ದಾರೆ. ಅದರಂತೆ ಪರಿಷ್ಕೃತ ಆದೇಶ‌ ಹೊರಡಿಸಲಾಗಿದೆ ಎಂದು ಮಾಹಿತಿ ನೀಡಿದೆ.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist