ಬೆಂಗಳೂರು,(www.thenewzmirror.com):
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವ್ರ ಅಕಾಲಿಕ ನಿಧನಿಂದಾಗಿ ದೂರದ ನ್ಯೂಯಾರ್ಕ್ ನಿಂದ ಆಗಮಿಸಿದ್ದ ಪುತ್ರಿ ಧೃತಿ ಇದೀಗ ವಾಪಾಸ್ ನ್ಯೂಯಾರ್ಕ್ ಗೆ ತೆರಳಿದ್ದಾರೆ.
ಅಮೇರಿಕಾದ ನ್ಯೂಯಾರ್ಕ್ ನಲ್ಲಿ ಉನ್ನತ ವಿದ್ಯಾಭ್ಯಾಸ ಮಾಡುತ್ತಿರೋ ಧೃತಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಂದು ಸಂಜೆ ವಿಮಾನ ಹತ್ತಿದರು.
ಎರಡು ವಾರಗಳ ಹಿಂದೆ ತಂದೆಯ ಅಕಾಲಿಕ ನಿಧನದ ವಿಚಾರ ತಿಳಿದು ಬೆಂಗಳೂರಿಗೆ ಆಗಮಿಸಿದ್ದ ಧೃತಿ ತಂದೆಯ ಎಲ್ಲಾ ಕಾರ್ಯವನ್ನ ಮುಗಿಸಿ ವ್ಯಾಸಾಂಗಕ್ಕೆ ತೆರಳಿದ್ರು. ಈ ವೇಳೆ ತಾರಿ ಅಶ್ವಿನಿ, ದೊಡ್ಡಪ್ಪ ರಾಘವೇಂದ್ರ ರಾಜ್ ಕುಮಾರ್ ಹಾಗೂ ಕುಟುಂಬಸ್ಥರು ಹಾಜರಿದ್ರು.