ಬೆಂಗಳೂರು, (www.thenewzmirror.com) :
ಇಡೀ ಬೆಂಗಳೂರನ್ನ ಬೆಚ್ಚಿ ಬೀಳೀಸಿದ್ದ ರಾಮೇಶ್ವರಂ ಕೆಫೆಯಲ್ಲಿ ನಡೆದಿದ್ದ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಮಹತ್ವದ ಮಾಹಿತಿ ಲಭಿಸಿದೆ. ಬಾಂಬರ್ ಗಾಗಿ ಶೋಧ ನಡೆಸುತ್ತಿದ್ದ ಎನ್ ಐ ಎ ಅಧಿಕಾರಿಗಳು ಓರ್ವನನ್ನ ವಶಕ್ಕೆ ಪಡೆದಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಬಳ್ಳಾರಿಯಲ್ಲಿ ಅರೆಸ್ಟ್ ಆಗಿದ್ದು, ಬೆಳಗಿನ ಜಾವ NIA ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದಾನೆ.
ಹೆಚ್ಚಿನ ತನಿಖೆಗಾಗಿ ಆತನನ್ನ ಬೆಂಗಳೂರಿಗೆ ಕರೆತಂದಿದ್ದು, ರಾಮೇಶ್ವರಂ ಬಾಂಬ್ ಪ್ರಕರಣಕ್ಕೂ ಯುವಕನಿಗೂ ಲಿಂಕ್ ಇದ್ಯಾ ಎಂಬ ಅನುಮಾನದ ಮೇಲೆ ತನಿಖೆಗೆ ಒಳಪಡಿಸಲಾಗುತ್ತಿದೆ. ಶಂಕಿತ ಉಗ್ರ ಬಳ್ಳಾರಿಗೆ ಬಂದ ಸಮಯದಲ್ಲಿ ಕೌಲ್ ಬಜಾರ್ ನಿವಾಸಿಯೋರ್ವನನ್ನು ಭೇಟಿಮಾಡಿದ್ದನಂತೆ. ಅಷ್ಟೇ ಅಲ್ದೇ ಶಂಕಿತ ಉಗ್ರ ಹೈದರಾಬಾದ್‍ಗೆ ಹೋಗಲು ಆತನಿಗೆ ಸಹಾಯ ಮಾಡಿದ್ದ ಎನ್ನುವ ಆರೋಪ ಹೊತ್ತಿದ್ದ ವ್ಯಕ್ತಿಯನ್ನ ಇದೀಗ NIA ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟ ಉಗ್ರ ಇನ್ನೂ ತಲೆ ಮರೆಸಿಕೊಂಡಿದ್ದು, ಓರ್ವನ ವಶಕ್ಕೆ ಪಡೆದು ವಿಚಾರಣೆ ವೇಳೆ ಇನ್ನಷ್ಟು ಮಾಹಿತಿ ಲಭಿಸುವ ಸಾಧ್ಯತೆಯಿದೆ.