Bangalore KARAGA | ಏಪ್ರಿಲ್ 15 ರಿಂದ 23 ರ ವರೆಗೂ ಬೆಂಗಳೂರು ಕರಗ ಉತ್ಸವ, ಈ ಬಾರಿಯೂ ಕರಗ ಹೊರಲಿರುವ ಜ್ಞಾನೇಂದ್ರ

ಬೆಂಗಳೂರು, (www.thenewzmirror.com) :

ವಿಶ್ವವಿಖ್ಯಾತ ಬೆಂಗಳೂರು ಕರಗ ಶಕ್ತ್ಯೋತ್ಸವಕ್ಕೆ ದಿನಾಂಕ ನಿಗದಿಯಾಗಿದೆ. ಏಪ್ರಿಲ್ 15 ರಿಂದ 23ರ ವರೆಗೆ ಬೆಂಗಳೂರು ಕರಗ ಮಹೋತ್ಸವ ನಡೆಯಲಿದೆ ಎಂದು ಕರಗ ಉತ್ಸವ ಸಮಿತಿ ಮಾಹಿತಿ ನೀಡಿದೆ.

RELATED POSTS

ಕರಗ ಉತ್ಸವ ಸಂಬಂಧ ಭಾನುವಾರ ಸಭೆ ನಡೆದಿತ್ತು. ಈ ಸಭೆಯಲ್ಲಿ ದಿನಾಂಕ ಫಿಕ್ಸ್ ಮಾಡಲಾಗಿದೆ. ಜೊತೆಗೆ ಮುಜರಾಯಿ ಇಲಾಖೆ ಮತ್ತು ಧರ್ಮರಾಯ  ಸ್ವಾಮಿ ದೇವಾಲಯದ ಆಡಳಿತ ಮಂಡಳಿಯು ಕರಗ ಹೊರಲು ಜ್ಞಾನೇಂದ್ರ ಸ್ವಾಮಿ ಅವರನ್ನು ಆಯ್ಕೆ ಮಾಡಿದೆ. ಯಾವುದೇ ಸಮಸ್ಯೆ ಯಾಗದಂತೆ ಶಾಸ್ತ್ರೋಕ್ತವಾಗಿ ಕರಗ ನಡೆಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.

ಏಪ್ರಿಲ್ 23ರ ಚೈತ್ರ ಪೌರ್ಣಮಿಯಂದು ಕರಗ ಶಕ್ತ್ಯೋತ್ಸವ ನಡೆಯಲಿದ್ದು, ಕಳೆದ ಬಾರಿ ಕರಗ ಹೊತ್ತಿದ್ದ ಪೂಜಾರಿ ಜ್ಞಾನೇಂದ್ರ ಅವರೇ ಈ ಬಾರಿಯೂ ಕರಗ ಹೊರಲಿದ್ದಾರೆ. ಈ ಮೂಲಕ ಬರೋಬ್ಬರಿ 13ನೇ ಬಾರಿ ಇವರು ಕರಗ ಹೊತ್ತ ಖ್ಯಾತಿಗೆ ಪಾತ್ರರಾಗಲಿದ್ದಾರೆ.

ಕಳೆದ ವರ್ಷ ಕೆಲ ಕಿಡಿಗೇಡಿಗಳು ಎ. ಜ್ಞಾನೇಂದ್ರ ಅವರ ಮೇಲೆ ಕೆಮಿಕಲ್ ಎರಚಿ ಕರಗಕ್ಕೆ ಅಡ್ಡಿಪಡಿಸಲು ಮುಂದಾಗಿದ್ದರು. ಆದರೂ ಜ್ಞಾನೇಂದ್ರ ಅವರು ಯಶಸ್ವಿಯಾಗಿ ದ್ರೌಪದಿದೇವಿ ಕರಗವನ್ನು ರಾಜಬೀದಿ ಉತ್ಸವ ಮುಗಿಸಿ ಧರ್ಮರಾಯ ಸ್ವಾಮಿ ದೇವಾಲಯ ತಲುಪಿಸಿದ್ದರು.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist