ಬೆಂಗಳೂರು, (www.thenewzmirror.com ) ;
ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮತ್ತು ಮೊದಲ ಬಾರಿಗೆ ಉಪಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ದೇಶದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ರಾಜಕೀಯ ಪಕ್ಷಗಳ ನಾಯಕರು ಆಗಮಿಸುತ್ತಿದ್ದಾರೆ.
ಇದರ ನಡುವೆ ಹೊಸದಾಗಿ ಆಯ್ಕೆಯಾದ ಶಾಸಕರೊಬ್ಬರು ರೈಲಿನಲ್ಲಿ ಸಾಮಾನ್ಯರಂತೆ ಪ್ರಯಾಣ ಮಾಡಿ ಅಚ್ಚರಿಗೆ ಕಾರಣರಾಗಿದ್ದಾರೆ.

ಜನಸಾಮಾನ್ಯರಂತೆ ಟೀ ಶರ್ಟ್ ಹಾಗೂ ಚಡ್ಡಿಯನ್ನ ಧರಿಸಿ ಟಿಕೆಟ್ ಪಡೆದು ರೈಲಿನಲ್ಲಿ ಪ್ರಯಾಣ ಮಾಡಿದ್ದ ಶಾಸಕರೊಬ್ಬರ ವೀಡಿಯೋ ಸಖತ್ ವೈರಲ್ ಆಗುತ್ತಿದೆ. ಹೀಗೆ ಎಲ್ಲರ ಗಮನ ಸೆಳೆದ ಶಾಸಕ ಬೇರ್ಯಾರೂ ಅಲ್ಲ ಇತ್ತೀಚಿಗೆ ನೂತನ ಶಾಸಕರಾಗಿ ಚುನಾಯಿತರಾದ ದರ್ಶನ್ ಪುಟ್ಟಣ್ಣಯ್ಯ.