TNW special ಕೇವಲ ಎಂಟೇ ವರ್ಷದಲ್ಲಿ  3.73 ಲಕ್ಷ ಕೆ.ಜಿ ಮಾದಕ ವಸ್ತು ದೇಶದಲ್ಲಿ ಜಪ್ತಿ..!

ಬೆಂಗಳೂರು, (www.thenewzmirror.com) ;

ಅಚ್ಚರಿ ಅನಿಸಿದರೂ ಇದು ಸತ್ಯ ಸತ್ಯ..! ಕೇವಲ ಎಂಟೇ ವರ್ಷದಲ್ಲಿ ದೇಶಾದ್ಯಾಂತ ಬರೋಬ್ಬರಿ 3.73 ಲಕ್ಷ ಕೆಜಿ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ.

RELATED POSTS

TNW ಗೆ ಸಿಕ್ಕಿರುವ ಅಧಿಕೃತ ಮಾಹಿತಿ ಆಧಾರದ ಪ್ರಕಾರ 2014-2022 ರ ವರೆಗೆ ವಶಪಡಿಸಿಕೊಂಡ ಮಾದಕ ದ್ರವ್ಯಗಳ ಒಟ್ಟು ಮೌಲ್ಯ 22,000 ಕೋಟಿ ರೂಪಾಯಿಗಳು.

ಭಾರತವನ್ನು ಮಾದಕ ನಶೆ ಮುಕ್ತಿಯೆಡೆಗೆ ಕರೆದೊಯ್ಯಲು ಗೃಹಮಂತ್ರಿ ಅಮಿತ್ ಶಾ  ತೆಗೆದುಕೊಂಡ ಬಹುರೂಪಿ ಯೋಜನೆಗಳ ಫಲವೇ ಇದಕ್ಕೆ ಕಾರಣ ಎಂದು ಬಣ್ಣಿಸಲಾಗುತ್ತಿದೆ. ಅಷ್ಟೇ ಅಲ್ಲದೆ ಸ್ವಾತಂತ್ರ್ಯೋತ್ಸವದ ಈ ಅಮೃತ ಘಳಿಗೆಯಲ್ಲಿ ಈ ಯೋಜನೆಗಳು ನರೇಂದ್ರ ಮೋದಿಯ ನಶಾಮುಕ್ತ ಭಾರತದ ಕನಸನ್ನು ಸಾಕಾರಗೊಳಿಸುವ ನಿಟ್ಟಿನತ್ತ ಸಾಗುತ್ತಿದೆ.

ಕೇಂದ್ರ ಗೃಹ ಸಚಿವ ಅಮಿತ್ ಷಾ

2006-2013 ಕಾಲಘಟ್ಟದ ಕಾಂಗ್ರೆಸ್ ನೇತೃತ್ವದ ಸರ್ಕಾರದ ಕಾಲಾವಧಿಗಿಂತ 30 ಪಟ್ಟು ಹೆಚ್ಚು ಮಾದಕದ್ರವ್ಯಗಳನ್ನು ವಶಪಡಿಸಿಕೊಂಡಿರೋ ಖ್ಯಾತಿಗೆ ಎನ್ ಡಿಎ ನೇತೃತ್ವದ ಸರ್ಕಾರ ಒಳಗಾಗಿದೆ. 2006 – 2013 ರ ಅವಧಿಗೆ ಹೋಲಿಸಿದರೆ ಎನ್ ಡಿಎ ಸರ್ಕಾರ ಬಂದ ಮೇಲೆ ಮಾದಕ ವಸ್ತುಗಳನ್ನ‌ವಶಪಡಿಸಿಕೊಡ ಪ್ರಮಾಣ ಮೂರು ಪಟ್ಟು ಹೆಚ್ಚಾದಂತಿದೆ.

2014 ರಿಂದ 2022 ರ ಅವಧಿಯಲ್ಲಿ ಸುಮಾರು 3.73 ಲಕ್ಷ ಕೆ.ಜಿ ಮಾದಕ ವಸ್ತು ವಶಪಡಿಸಿಕೊಂಡತಾಗಿದ್ದು, 3,544 ಕೇಸ್‌ಗಳು ದಾಖಲಾಗಿವೆ. ಇದು 2006-2013 ರ ಯುಪಿಎ ಅವಧಿಗಿಂತ ದುಪ್ಪಟ್ಟಾಗಿದೆ.

ಸಾಂದರ್ಭಿಕ ಚಿತ್ರ

ಮಾದಕದ್ರವ್ಯ ವ್ಯಸನ ದೇಶದ ಪ್ರಮುಖ ಸಮಸ್ಯೆಗಳಲ್ಲೊಂದು. ಈ ವ್ಯಸನದಿಂದ ನಮ್ಮ ಯುವ ಜನಾಂಗ ಕೆಲಸ-ಕಾರ್ಯಗಳನ್ನು ತೊರೆದು ಸಮಾಜಕ್ಕೆ ಹೊರೆಯಾಗುತ್ತಿದ್ದಾರೆ. ಹಾಗೇ ಈ ಮಾದಕವಸ್ತುಗಳ ಸಾಗಾಣಿಕೆಯಿಂದ ಗಳಿಸಿದ ಹಣ ಎಷ್ಟೋ ಭಾರಿ ಭಯೋತ್ಪಾದಕ ಕಾರ್ಯಗಳಲ್ಲಿ ಬಳಕೆಯಾಗಿ ದೇಶದ ಸುರಕ್ಷತೆಗೆ ದೊಡ್ಡ ಸವಾಲು ಉಂಟು ಮಾಡುತ್ತದೆ.

ಮಾದಕ ದ್ರವ್ಯಗಳ ವಿರುದ್ಧ ಶೂನ್ಯ ಸಹಿಷ್ಣುತಾ ನೀತಿ ಅಳವಡಿಸಿಕೊಂಡ ಅಮಿತ್ ಶಾ ನೇತೃತ್ವದ ಗೃಹ ಇಲಾಖೆ ಇದರ ತಡೆಗೆ ತ್ರಿಕೋನ ಸೂತ್ರಗಳನ್ನ ರೂಪಿಸಿದೆ. ಸಾಂಸ್ಥಿಕ ರಚನೆಯನ್ನು ಬಲಪಡಿಸಿ ಕೇಂದ್ರ ಮತ್ತು ರಾಜ್ಯಗಳ ನಾರ್ಕೋಟಿಕ್ಸ್ ಏಜೆನ್ಸಿಗಳ ಮಧ್ಯೆ ಉತ್ತಮ ಸಮನ್ವಯ ಬೆಳಸಿ, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋಗೆ (NCB) ನೂತನ ರೂಪುರೇಷೆ ನೀಡಿತು.

ಎನ್‌ಸಿಬಿಗೆ ಒಂದು ವಿಸ್ತಾರವಾದ ರಾಷ್ಟ್ರೀಯ ಡೇಟಾಬೇಸ್ ತಯಾರಿಸಲು ಸೂಚನೆ ನೀಡಿದ್ದು, ಮಾದಕ ದ್ರವ್ಯಗಳ ಹಣಬಲ ಮತ್ತು ಅದಕ್ಕೆ ಸಂಬಂಧಿತ ಭಯೋತ್ಪಾದಕ ಸಂಘಟನೆಗಳ ಮಾಹಿತಿ ಕೂಡ ಸಂಗ್ರಹಣೆ ಮಾಡಲದೆ. ಹಾಗೆ ಇದು ಮಾದಕ ದ್ರವ್ಯ ಕಳ್ಳಸಾಗಾಣಿಕೆಯ ನವೀನ ರೀತಿಗಳು ಮತ್ತು ಅಪರಾಧಿಗಳನ್ನು ವಿಶ್ಲೇಷಣೆ ಮಾಡಲಿದೆ.

ದೇಶದೊಳಗೆ ಬರುವ ಸುಮಾರು 60-70% ಪ್ರತಿಶತ ಮಾದಕ ದ್ರವ್ಯಗಳು ಸಮುದ್ರ ಮಾರ್ಗವಾಗಿಯೇ ಬರುತ್ತವೆ. ಸಮುದ್ರ ಮಾರ್ಗದಿಂದ ಒಳನುಸಳುವ ಮಾದಕ ವಸ್ತುಗಳ ಕಳ್ಳ ಸಾಗಾಣಿಕೆ ತಡೆಗೆ ಗೃಹಮಂತ್ರಿಗಳು ರಾಷ್ಟ್ರೀಯ ಭದ್ರತಾ ಮಂಡಳಿ ಕಾರ್ಯಲಯದಲ್ಲಿ ಉನ್ನತ ಮಟ್ಟದದಲ್ಲಿ ಒಂದು ಟಾಸ್ಕ್ ಫೋರ್ಸ್ ಸೃಷ್ಟಿಸಿದ್ದಾರೆ. ಈ ಟಾಸ್ಕ್ ಫೋರ್ಸ್‌ನಲ್ಲಿ ಬಂದರು ಮತ್ತು ಜಲಮಾರ್ಗ ಸಚಿವಾಲಯ, ನೌಕಾಪಡೆ, ಕರಾವಳಿ ರಕ್ಷಣಾ ಪಡೆ ಮತ್ತು ಪರೋಕ್ಷ ತೆರಿಗೆ ಮತ್ತು ಸುಂಕಗಳ ಕೇಂದ್ರಗಳ ಪ್ರತಿನಿಧಿಗಳಿರಲಿದ್ದಾರೆ.

ಮಾದಕ ವಸ್ತುಗಳ ಕಳ್ಳಸಾಗಾಣಿಕೆ ಹಣದ ಪತ್ತೆ ಹಚ್ಚುವುದರ ಜೊತೆಗೆ, ಅಮಿತ್ ಶಾ, ಸಂಪೂರ್ಣ ಡ್ರಗ್ ಜಾಲಗಳ ನಕ್ಷೆ ಮತ್ತು ಅವುಗಳ ಮೂಲಗಳನ್ನು ಪತ್ತೆ ಹಚ್ಚುವಂತೆ ಸಚಿವಾಲಕ್ಕೆ ಸೂಚನೆ ನೀಡಿದ್ದಾರೆ.



ತಮ್ಮ ಎರಡನೇ ಕಾರ್ಯತಂತ್ರದ ಭಾಗವಾಗಿ, ಗೃಹ ಸಚಿವಾಲಯವು ಸರ್ಕಾರದ ಸಂಪೂರ್ಣ ವಿಧಾನದ ಅಡಿಯಲ್ಲಿ, ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ನಾರ್ಕೋ(NARCO) ಏಜೆನ್ಸಿಗಳ ನಡುವೆ ಉತ್ತಮ ಸಮನ್ವಯವನ್ನು ಖಚಿತಪಡಿಸಿಕೊಳ್ಳಲು ಸರಣಿ ಕ್ರಮಗಳನ್ನು ತೆಗೆದುಕೊಂಡಿದ್ದು, ಇದರಿಂದಾಗಿ ಈ ಸಂಸ್ಥೆಗಳು ಸಮನ್ವಯ ಮತ್ತು ಹೊಣೆಗಾರಿಕೆಯೊಂದಿಗೆ ಒಟ್ಟಾಗಿ ಈ ಮಾರಿಯ ವಿರುದ್ಧ ಹೋರಾಡಲಿವೆ. ಗೃಹಮಂತ್ರಿಗಳ ಆದೇಶದ ಮೇರೆಗೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಾದಕ ದ್ರವ್ಯ ವಿರೋಧಿ ಪಡೆಗಳನ್ನ (ANTF) ರಚಿಸಲಾಗಿದೆ.

ಅಕ್ರಮ ಮಾದಕವಸ್ತು ವ್ಯಾಪಾರದಲ್ಲಿ ಡಾರ್ಕ್ ನೆಟ್ ಮತ್ತು ಕ್ರಿಪ್ಟೋಕರೆನ್ಸಿಯ ಬಳಕೆಯನ್ನು ನಿಲ್ಲಿಸಲು ಕೂಡ ಸಚಿವಾಲಯವೂ ಕೆಲಸ ಮಾಡುತ್ತಿದೆ.
ಸಚಿವಾಲಯದ ಮೂರನೇ ತಂತ್ರ, ಡ್ರಗ್ಸ್ ಬಳಕೆಯ ವಿರುದ್ಧ ಸಾಮಾನ್ಯ ಜನರನ್ನು ಸಂವೇದನಾಶೀಲಗೊಳಿಸುವ ಅಭಿಯಾನ ಪ್ರಚಂಡ ಪ್ರತಿಕ್ರಿಯೆಯನ್ನು ಪಡೆದಿದೆ.
ಎನ್‌ಸಿಬಿ(NCB) ಆರಂಭಿಸಿದ “ಡ್ರಗ್-ಫ್ರೀ ಇಂಡಿಯಾ” ಪ್ರತಿಜ್ಞೆ ಅಭಿಯಾನದ ಅಡಿಯಲ್ಲಿ 30 ಲಕ್ಷಕ್ಕೂ ಹೆಚ್ಚು ಜನರು ಡ್ರಗ್ಸ್ ವಿರುದ್ಧ ಕಾರ್ಯನಿರ್ವಹಿಸಲು ಪ್ರತಿಜ್ಞೆ ಮಾಡಿದ್ದಾರೆ.

ಅಂತಾರಾಷ್ಟ್ರೀಯ ಡ್ರಗ್ ಮಾಫಿಯಾವನ್ನು ನಿಯಂತ್ರಿಸುವ ಗುರಿಯನ್ನು ಸಾಧಿಸಲು, ಡ್ರಗ್ ಎನ್‌ಫೋರ್ಸ್‌ಮೆಂಟ್ ಅಡ್ಮಿನಿಸ್ಟ್ರೇಷನ್ (ಡಿಇಎ), ಆಸ್ಟ್ರೇಲಿಯನ್ ಫೆಡರಲ್ ಪೊಲೀಸ್ (ಎಎಫ್‌ಪಿ), ಮತ್ತು ರಾಯಲ್ ಕೆನಡಿಯನ್ ಮೌಂಟೇನ್ ಪೊಲೀಸ್ (ಆರ್‌ಸಿಎಂಪಿ) ನಂತಹ ಅಂತರರಾಷ್ಟ್ರೀಯ ಏಜೆನ್ಸಿಗಳೊಂದಿಗೆ ಸಮನ್ವಯವನ್ನು ಅಮಿತ್ ಶಾ ಖಚಿತಪಡಿಸಿದ್ದಾರೆ. ಈಗಾಗಲೇ ಅಂತಹ ಸಮನ್ವಯಗಳು ಫಲಿತಾಂಶಗಳನ್ನು ನೀಡುತ್ತಿರುವಾಗಲೇ, 44 ದೇಶಗಳೊಂದಿಗೆ ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.

ಅಕ್ರಮ ಮಾದಕ ದ್ರವ್ಯಗಳ ಕೃಷಿಯನ್ನು ತಡೆಗಟ್ಟಲು, ಕಳೆದ ಮೂರು ವರ್ಷಗಳಲ್ಲಿ ಎನ್‌ಸಿಬಿ(NCB) ಸುಮಾರು 36,000 ಎಕರೆ ಪಾಪಿ(poppy) ಕೃಷಿ ಮತ್ತು 82,769 ಎಕರೆ ಗಾಂಜಾ ಕೃಷಿಯನ್ನು ನಾಶಪಡಿಸಿದೆ. ದೂರದ ಗುಡ್ಡಗಾಡು ಪ್ರದೇಶಗಳಲ್ಲಿ ಸಾಗುವಳಿ ಮಾಡುತ್ತಿರುವ ಅಕ್ರಮ ಬೆಳೆಗಳ ನಕ್ಷೆ ಮತ್ತು ನಾಶಪಡಿಸಲು ಡ್ರೋನ್‌ಗಳನ್ನು ಬಳಸಲಾಗುತ್ತಿದೆ.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist