ಬೆಂಗಳೂರು, (www.thenewzmirror.com) :
NIA ಪತ್ರಿಕಾ ಪ್ರಕಟಣೆ ಭಯೋತ್ಪಾದನೆ-ದರೋಡೆಕೋರ ನೆಕ್ಸಸ್ ಪ್ರಕರಣದಲ್ಲಿ 4 ರಾಜ್ಯಗಳಲ್ಲಿ ಮತ್ತು 1 ಕೇಂದ್ರಾಡಳಿತ ಪ್ರದೇಶದಲ್ಲಿರುವ ಅರ್ಷ್ ದಲಾ ಮತ್ತು ಇತರ KTF ಶಂಕಿತರೊಂದಿಗೆ ಸಂಪರ್ಕ ಹೊಂದಿದ 30 ಸ್ಥಳಗಳನ್ನು NIA ರೈಡ್ ಮಾಡಿದೆ ನವದೆಹಲಿ, 12 ಮಾರ್ಚ್ 2024
ಭಯೋತ್ಪಾದಕ ಸಂಘಟನೆಗಳೊಂದಿಗೆ ನಟಿನ ಆಧಾರದ ಮೇಲೆ 4 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಸೇರಿದಂತೆ 30 ಕಡೆಗಳಲ್ಲಿ NIA ದಾಳಿ ನಡೆಸಿದೆ.
ಅರ್ಷದೀಪ್ ಸಿಂಗ್ ಅಲಿಯಾಸ್ ಅರ್ಶ್ ದಲಾ ಮತ್ತು ನಿಷೇಧಿತ ಖಲಿಸ್ತಾನ್ ಟೈಗರ್ ಫೋರ್ಸ್‌ನ ಇತರ ಶಂಕಿತರಿಗೆ ಸಂಬಂಧಿಸಿದ ಭಯೋತ್ಪಾದಕ-ದರೋಡೆಕೋರರ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ದಾಳಿ ನಡೆಸಿದೆ.
ನಿಷೇಧಿತ ಭಯೋತ್ಪಾದಕ ಸಂಘಟನೆಗಳ ಮುಖ್ಯಸ್ಥರು/ಸದಸ್ಯರು ಮತ್ತು ಇತರ ಸಂಘಟನೆಗಳ ಭಯೋತ್ಪಾದಕ ಚಟುವಟಿಕೆಗಳ ವಿರುದ್ಧ ಏಜೆನ್ಸಿಯ ಶಿಸ್ತುಕ್ರಮದ ಭಾಗವಾಗಿ ಎನ್‌ಐಎ ತಂಡಗಳಿಂದ ಪಂಜಾಬ್, ಹರಿಯಾಣ, ಮಧ್ಯಪ್ರದೇಶ ಮತ್ತು ರಾಜಸ್ಥಾನ ಮತ್ತು ಚಂಡೀಗಢದ ಯುಟಿಯಾದ್ಯಂತ ದಾಳಿ ನಡೆಸಿದೆ.
ದಾಳಿ ವೇಳೆ ಡಿಜಿಟಲ್ ಉಪಕರಣಗಳನ್ನ NIA ವಶಪಡಿಸಿಕೊಂಡಿದೆ. ಇದರ ಜತೆಗೆ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು, ಸ್ಫೋಟಕಗಳು, ಐಇಡಿಗಳು ಮತ್ತು ಮಾದಕವಸ್ತುಗಳು ಮುಂತಾದ ಅಪಾಯಕಾರಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.